ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಕಚೇರಿಗಳಲ್ಲಿ ಕಸ ಸಂಸ್ಕರಣೆ : ಬಿಬಿಎಂಪಿ ಶಿಫಾರಸು

|
Google Oneindia Kannada News

ಬೆಂಗಳೂರು, ಜುಲೈ 02 : ಸರ್ಕಾರಿ ಕಚೇರಿಗಳನ್ನು ಕುಡಿಯುವ ನೀರಿನ ಬಾಟಲ್ ಮುಕ್ತ ಮಾಡಿದ್ದ ಬಿಬಿಎಂಪಿ ಈಗ ಸರ್ಕಾರಿ ಕಚೇರಿಗಳ ಕಸ ಸಂಗ್ರಹಣೆ ಬಗ್ಗೆ ಗಮನ ಹರಿಸಿದೆ. ಈ ಕುರಿತು ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ಕಳಿಸಿದೆ.

ಸರ್ಕಾರಿ ಕಚೇರಿಗಳಲ್ಲಿ ಕಸ ವಿಂಗಡನೆ ಕಡ್ಡಾಯ ಮಾಡಬೇಕು ಎಂದು ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರಿ ನೌಕರರು ಸಹ ಮನೆಯಲ್ಲಿ ಕಸ ವಿಂಗಡನೆ ಮಾಡುವುದನ್ನು ಕಡ್ಡಾಯ ಮಾಡಬೇಕು ಎಂದು ಮನವಿ ಮಾಡಿದೆ.

ರಾಜಭವನದಲ್ಲಿ ಹಸಿ ಕಸ ಸಂಸ್ಕರಣೆ, ಕಾಂಪೋಸ್ಟ್ ತಯಾರುರಾಜಭವನದಲ್ಲಿ ಹಸಿ ಕಸ ಸಂಸ್ಕರಣೆ, ಕಾಂಪೋಸ್ಟ್ ತಯಾರು

ಬೆಂಗಳೂರು ನಗರದ ಸರ್ಕಾರಿ ಕಚೇರಿಗಳನ್ನು ಝಿರೋ ವೇಸ್ಟ್ ಝೋನ್ ಮಾಡಬೇಕು ಎಂದು ಬಿಬಿಎಂಪಿ ಶಿಫಾರಸಿನಲ್ಲಿ ತಿಳಿಸಿದೆ. ವಿಧಾನಸೌಧ, ವಿಕಾಸ ಸೌಧ, ಎಂ.ಎಸ್‌.ಬಿಲ್ಡಿಂಗ್‌ನಲ್ಲಿ ಇದು ಮೊದಲು ಜಾರಿಗೆ ಬರಬೇಕು ಎಂದು ಹೇಳಿದೆ.

ಖಾಲಿ ನಿವೇಶನದೊಳಗಿನ ತ್ಯಾಜ್ಯ ಕ್ಲೀನ್ ಮಾಡಲು 15 ದಿನಗಳ ಗಡುವುಖಾಲಿ ನಿವೇಶನದೊಳಗಿನ ತ್ಯಾಜ್ಯ ಕ್ಲೀನ್ ಮಾಡಲು 15 ದಿನಗಳ ಗಡುವು

Govt offices to manage their waste

ಹಸಿ, ಒಣ, ಸ್ಯಾನಿಟರಿ ಎಂದು ಮೂರು ವಿಧವಾಗಿ ಕಸವನ್ನು ವಿಂಗಡನೆ ಮಾಡಬೇಕು. ಇದನ್ನು ನಿಗದಿ ಪಡಿಸಿದ ಕಲರ್‌ನ ತೊಟ್ಟಿಯಲ್ಲಿ ಸಂಗ್ರಹಿಸಬೇಕು ಎಂದು ಬಿಬಿಎಂಪಿ ಹೇಳಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸಿಸುವ ಸರ್ಕಾರಿ ನೌಕರರು ಈ ರೀತಿ ಮಾಡಬೇಕು ಎಂದು ಶಿಫಾರಸಿನಲ್ಲಿ ತಿಳಿಸಿದೆ.

ಸ್ವಚ್ಛ ಸರ್ವೇಕ್ಷಣ, ಬೆಂಗಳೂರಿಗೆ 194ನೇ ಸ್ಥಾನ, ಬಿಬಿಎಂಪಿ ಎಡವಿದ್ದೆಲ್ಲಿ?ಸ್ವಚ್ಛ ಸರ್ವೇಕ್ಷಣ, ಬೆಂಗಳೂರಿಗೆ 194ನೇ ಸ್ಥಾನ, ಬಿಬಿಎಂಪಿ ಎಡವಿದ್ದೆಲ್ಲಿ?

ಎನ್‌ಜಿಟಿ ಆದೇಶದಂತೆ ರಚನೆ ಮಾಡಿರುವ ಸಮಿತಿಯ ಮುಖ್ಯಸ್ಥ ಉಪ ಲೋಕಾಯುಕ್ತ ಸುಭಾಷ್ ಅಡಿ ಅವರು ಈ ಕುರಿತು ಬಿಬಿಎಂಪಿಗೆ ಸೂಚನೆ ನೀಡಿದ್ದರು. ಸರ್ಕಾರಿ ಕಚೇರಿಗಳಲ್ಲಿ ಕಸ ವಿಂಗಡನೆ ಮಾಡುವುದನ್ನು ಕಡ್ಡಾಯ ಮಾಡಬೇಕು ಎಂದು ಹೇಳಿದ್ದರು.

ಸರ್ಕಾರಿ ಕಚೇರಿಗಳಲ್ಲಿ ಸ್ಥಳಾವಕಾಶವಿದ್ದರೆ ಕಸ ಸಂಸ್ಕಾರಣಾ ಘಟಕವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ. ಒಣ ಮತ್ತು ಸ್ಯಾನಿಟರಿ ಕಸವನ್ನು ಹೊರಗೆ ನೀಡಬೇಕು. ಕಸಿ ಕಸವನ್ನು ಅಲ್ಲೇ ಸಂಸ್ಕರಣೆ ಮಾಡಬೇಕು ಎಂಬುದು ಶಿಫಾರಸು.

ಕಸಿ ಕಸದ ಸಂಸ್ಕರಣೆಯಿಂದ ಸಿಗುವ ಕಾಂಪೋಸ್ಟ್‌ ಅನ್ನು ಅಲ್ಲಿಯೇ ಗಾರ್ಡನ್‌ಗೆ ಬಳಕೆ ಮಾಡಬಹುದು. ಸರ್ಕಾರಿ ಕಚೇರಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಹ ಕಡಿಮೆ ಮಾಡಬೇಕು ಎಂದು ಶಿಫಾರಸಿನಲ್ಲಿ ತಿಳಿಸಿದ್ದಾರೆ.

English summary
Bruhat Bengaluru Mahanagara Palike proposed to the state government to mandatory segregation of waste by government staff and processing of wet waste in offices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X