ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಕ್ಷಣ ಸಚಿವರೇ ಇತ್ತ ನೋಡಿ, ಪರಿಷ್ಕೃತ ಪಠ್ಯ ಪುಸ್ತಕ ಸಿಗ್ತಿಲ್ಲ!

|
Google Oneindia Kannada News

ಬೆಂಗಳೂರು, ಜುಲೈ07: ಶಾಲಾ ಮಕ್ಕಳಿಗೆ ಪಠ್ಯಪುಸ್ತಕವನ್ನು ಪೂರೈಕೆಯನ್ನು ಮಾಡಲಾಗಿದೆ. ಮಕ್ಕಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ ಎಂದೆಲ್ಲಾ ಹೇಳುತ್ತಿದ್ದ ಸರ್ಕಾರ ಬಿಬಿಎಂಪಿ ಶಾಲೆಗಳತ್ತ ಹೋಗಿ ನೋಡಬೇಕು. ಪರಿಷ್ಕೃತ ಪಠ್ಯಪುಸ್ತಗಳು ಸಿಗದೇ ಮಕ್ಕಳು ಪಾಠವನ್ನು ಕಲಿಯುವಂತಾಗಿದೆ.

Recommended Video

BBMP ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಾಕೀ ಶಿಕ್ಷೆ | Oneindia Kannada

ಬಿಬಿಎಂಪಿ ಶಾಲೆಗಳಿಗೆ ಪರಿಷ್ಕೃತ ಪಠ್ಯಪುಸ್ತಕ ತಲುಪಿಲ್ಲ. ಪಠ್ಯಪುಸ್ತಕ ವಿಳಂಬಕ್ಕೆ ಶಿಕ್ಷಣ ಇಲಾಖೆಯಲ್ಲಿ ಮಾಹಿತಿಯನ್ನು ಕೇಳಲಾಗಿದೆ. ಪಠ್ಯಪುಸ್ತಕವಿಲ್ಲದೇ ಪಾಠ ನಡೆಸಬೇಕಾಗಿದೆ ಎಂದು ಬಿಬಿಎಂಪಿಯ ವಿಶೇಷ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿಯ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಪಠ್ಯಪುಸ್ತವಿಲ್ಲದೇ ವಿಪರೀತವಾದ ಕಷ್ಟವಾಗುತ್ತಿದೆ. ಮಕ್ಕಳಿಗೆ ಪಠ್ಯಪುಸ್ತಕವನ್ನು ಸೂಕ್ತ ಸಮಯದಲ್ಲಿ ಪೂರೈಕೆಯನ್ನು ಮಾಡಲಾಗುವುದು ಎಂದು ಸರ್ಕಾರ ಹೇಳಿತ್ತು. ಶಿಕ್ಷಣ ಇಲಾಖೆ ಸಚಿವ ಬಿ. ಸಿ. ನಾಗೇಶ್‌ ಸಹ ಹೇಳಿದ್ದರು. ಆದರೆ ಮಕ್ಕಳಿಗೆ ಮಾತ್ರ ಪಠ್ಯಪುಸ್ತಕವಿಲ್ಲದೇ ಪಾಠವನ್ನು ಕೇಳಬೇಕಾದ ಅನಿವಾರ್ಯತೆ ಉಂಟಾಗಿದೆ.

ಬಿಬಿಎಂಪಿ ಶಾಲೆಗೆ ಮರುಪರಿಷ್ಕರಣೆಗೊಂಡ ಪಠ್ಯಪುಸ್ತಕ ತಲುಪಿಲ್ಲ ಎಂಬುದು ನಿಜವೇ?, ಸುಳ್ಳೋ?. ಎಂದು ಕೆಲವು ಬಿಬಿಎಂಪಿ ಶಾಲೆಗಳಲ್ಲಿ ರಿಯಾಲಿಟಿ ಚೆಕ್ ಮಾಡಿದ ಸಂದರ್ಭದಲ್ಲಿ ಪಠ್ಯಪುಸ್ತಕ ಪೂರೈಕೆಯಾಗಿಲ್ಲದಿರುವುದು ಒನ್ ಇಂಡಿಯಾ ಗಮನಕ್ಕೂ ಬಂದಿದೆ. ಶಿಕ್ಷಕರು ಪರಿಷ್ಕೃತ ಪಠ್ಯಪುಸ್ತಕವಿದೇ ಹಳೇಯ ಪಠ್ಯಪುಸ್ತವನ್ನಿಟ್ಟಕೊಂಡು ಬದಲಾಗದ ಪಾಠವನ್ನು ಮಾಡುತ್ತಿದ್ದಾರೆ. ಇನ್ನು ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯಲ್ಲಿ ಪುಸ್ತಕವನ್ನು ಡೌನ್ ಲೋಡ್ ಮಾಡಿಕೊಂಡು ಪಾಠವನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ.

ಸೂಕ್ತ ಸಮಮಯಕ್ಕೆ ಪಠ್ಯ ವಿತರಣೆ ಭರವಸೆ ಸುಳ್ಳು

ಸೂಕ್ತ ಸಮಮಯಕ್ಕೆ ಪಠ್ಯ ವಿತರಣೆ ಭರವಸೆ ಸುಳ್ಳು

ಪಠ್ಯಪುಸ್ತಕ ಮರುಪರಿಷ್ಕರಣೆಯ ಗೊಂದಲ ಮಕ್ಕಳಿಗೆ ಹೊರೆಯಾಗಲು ಶುರುವಾಗಿದೆ. ಮಕ್ಕಳು ಪಾಠವನ್ನು ಕಲಿಯಬೇಕಾದರೆ ಪಠ್ಯದ ಅವಶ್ಯಕತೆ ಅತ್ಯಮೂಲ್ಯ. ಮರು ಪರಿಷ್ಕರಣೆ, ಮಠ ಮಾನ್ಯ, ವಿಚಾರವಾದಿಗಳು, ಪ್ರತಿಪಕ್ಷಗಳ ವಿರೋಧ ಸೇರಿದಂತೆ ಮತ್ತೊಮ್ಮೆ ಪರಿಷ್ಕರಣೆ ಮಾಡಿ ತಿದ್ದುಪಡಿಯ ಆಜ್ಞೆ ಹೀಗೆ ಪಠ್ಯಪುಸ್ತಕದ ಗೊಂದಲವನ್ನು ತೆರೆಬಿತ್ತು ಎನ್ನುವಂತಾಗಿದೆ. ಆದರೆ ಪಠ್ಯಪುಸ್ತಕ ತಿದ್ದುಪಡಿಯಾಗಿದ್ದರೂ ಮಕ್ಕಳಿಗೆ ಪೂರೈಕೆಯನ್ನು ಮಾಡದಿರುವುದು ಗೊಂದಲಕ್ಕೆ ಕಾರಣವಾಗಿದೆ. ಬಿಬಿಎಂಪಿಯ ಶಾಲೆಗಳಿಗೆ ಯಾಕಿಷ್ಟು ತಾರತಮ್ಯ?. ಪಠ್ಯಪುಸ್ತಕ ವಿತರಣೆ ತಡವಾಗುತ್ತಿರುವುದು ಏಕೆ? ಎಂಬ ಪ್ರಶ್ನೆಗಳಿಗೆ ಶಿಕ್ಷಣ ಸಚಿವರೇ ಉತ್ತರಿಸಬೇಕು. ಆದರೆ ಶಿಕ್ಷಣ ಸಚಿವರು ಕೊಟ್ಟಿರುವ ಪಠ್ಯಪುಸ್ತಕ ವಿತರಣೆಯ ಭರವಸೆ ಸುಳ್ಳಾಗುತ್ತಿದೆ.

ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸದ ಶಿಕ್ಷಕರು

ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸದ ಶಿಕ್ಷಕರು

ಬಿಬಿಎಂಪಿ ಶಾಲೆಯ ವಿದ್ಯಾರ್ಥಿಗಳು ನಿತ್ಯ ಶಿಕ್ಷಕರನ್ನು ಪಠ್ಯಪುಸ್ತಕ ಯಾವಾಗ ಸಿಗುತ್ತದೆ? ಎಂದು ಕೇಳುತ್ತಿದ್ದಾರೆ. ಶಿಕ್ಷಕರು ಸರ್ಕಾರದ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ದು ಸರ್ಕಾರ ಪಠ್ಯವನ್ನು ಪೂರೈಸಿದ ಬಳಿಕ ವಿತರಿಸುವುದಾಗಿ ಹೇಳುತ್ತಿದ್ದಾರೆ. ಅಂದರೆ ಸರ್ಕಾರ ಪಠ್ಯಪುಸ್ತಕವನ್ನು ಯಾವಾಗ ಪೂರೈಸಲಿದೆ ಎಂದು ಕಾದು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗಳಲ್ಲಿ ಮೊದಲ ಪರೀಕ್ಷೆಗೆ ಸಿದ್ದವಾಗುತ್ತಿದ್ದು ಪಠ್ಯಪುಸ್ತಕವಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಬೇಕಾಗಿದೆ.

ಪಿಡಿಎಫ್ ಪ್ರತಿ ಕಳುಹಿಸಿರುವ ಶಿಕ್ಷಕರು

ಪಿಡಿಎಫ್ ಪ್ರತಿ ಕಳುಹಿಸಿರುವ ಶಿಕ್ಷಕರು

ಪಠ್ಯಪುಸ್ತಕ ವಿಚಾರದಲ್ಲಿ ಬಿಬಿಎಂಪಿ ಶಾಲೆಯ ಮುಖ್ಯ ಶಿಕ್ಷಕರನ್ನು ಹೈರಾಣಾಗಿಸಿದೆ. ""ಪೋಷಕರು ಪಠ್ಯಪುಸ್ತಕವನ್ನು ಯಾವ ನೀಡುತ್ತಾರೆ ಎಂದು ನಿತ್ಯ ಕೇಳುತ್ತಿದ್ದಾರೆ. ಪಠ್ಯಪುಸ್ತಕ ವಿಳಂಬಕ್ಕೆ ಆಕೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಶಿಕ್ಷಕರು ಪಠ್ಯಪುಸ್ತಕ ಪಿಡಿಎಫ್ ಮತ್ತು ಹಳೇಯ ಪುಸ್ತಕದಲ್ಲಿ ಬದಲಾಗದಿರುವ ಪಾಠವನ್ನು ಮಾಡುತ್ತಿದ್ದಾರೆ. ಪಠ್ಯಪುಸ್ತಕವಿಲ್ಲದೇ ಕನ್ನಡ ಭಾಷೆಯನ್ನು ಹೇಳಿಕೊಡುವುದು ತುಂಬಾ ಕ್ಲಿಷ್ಟಕರವಾದ ವಿಚಾರವಾಗಿದೆ'' ಎಂದು ಬಿಬಿಎಂಪಿಯ ಮುಖ್ಯಶಿಕ್ಷಕರೊಬ್ಬರು ಅಳಲನ್ನು ತೋಡಿಕೊಂಡಿದ್ದಾರೆ.

ಶಿಕ್ಷಣ ಇಲಾಖೆಗೆ ಪಠ್ಯಪೂರೈಕೆಗೆ ಮನವಿ

ಶಿಕ್ಷಣ ಇಲಾಖೆಗೆ ಪಠ್ಯಪೂರೈಕೆಗೆ ಮನವಿ

ಬಿಬಿಎಂಪಿಯ ವಿಶೇಷ ಆಯುಕ್ತರು ಪರಿಷ್ಕರಣೆಯಾಗಿರುವ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕ ಶಾಲೆಗಳಿಗೆ ತಲುಪಿಲ್ಲ. ಮಕ್ಕಳಿಗೆ ಆ ವಿಷಯದಲ್ಲಿ ಪಾಠಗಳು ನಡೆಯುತ್ತಿಲ್ಲ. ಶಿಕ್ಷಣ ಇಲಾಖೆ ಬೇಗ ಪಠ್ಯಪುಸ್ತಕವನ್ನು ಪೂರೈಸುವಂತೆ ಕೇಳಿದ್ದೇವೆ. ಶಿಕ್ಷಣ ಇಲಾಖೆಯೇ ಪಠ್ಯಪುಸ್ತಕವನ್ನು ಪೂರೈಸಬೇಕಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಪ್ರಸಾತ್ ಮಹೋಹರ್ ಹೇಳಿದ್ದಾರೆ.

English summary
Karnataka government not yet supplied revised textbooks to BBMP schools says BBMP special commissioner. Students learning in old books
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X