ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2 ಸ್ಟ್ರೋಕ್ ಆಟೋ ನಿಷೇಧ ಆದೇಶ ತಾತ್ಕಾಲಿಕವಾಗಿ ಹಿಂಪಡೆದ ಇಲಾಖೆ

|
Google Oneindia Kannada News

ಬೆಂಗಳೂರು, ಮಾರ್ಚ್ 23: ನಗರದಲ್ಲಿ 2ಸ್ಟ್ರೋಕ್ ಆಟೋ ನಿಷೇಧ ಆದೇಶ ಪರಿಷ್ಕೃತವಾಗುವ ಸಾಧ್ಯತೆ ಇದೆ. 2018ರ ಏ.1ರ ಬದಲಾಗಿ 2019ರ ಏ.1ರಿಂದ ಬೆಂಗಳೂರಲ್ಲಿ 2ಸ್ಟ್ರೋಕ್ ಆಟೋ ನಿಷೇಧಿಸಲು ಸರ್ಕಾರಕ್ಕೆ ಸಾರಿಗೆ ಆಯುಕ್ತರು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ವಾಯು ಹಾಗೂ ಶಬ್ದ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ 2ಸ್ಟ್ರೋಕ್ ಆಟೋಗಳನ್ನು ನಿಷೇಧಿಸುವ ನಿರ್ಧಾರವನ್ನು 2017ರ ಬಜೆಟ್ ನಲ್ಲಿ ಘೋಷಿಸಿತ್ತು. ಹೊಸ 4ಸ್ಟ್ರೋಕ್ ಎಲ್‌ಪಿಜಿ ಆಟೋ ಖರೀದಿಗೆ 30 ಸಾವಿರ ರೂ. ಸಹಾಯಧನ ನೀಡುತ್ತೇವೆ ಎಂದು ಪ್ರಕಟಿಸಲಾಗಿತ್ತು.

ಆಟೋಗಳು ಗುಜರಿಗೆ: ಚಾಲಕರಿಂದ ಒಂದು ಅರ್ಜಿಯೂ ಸಲ್ಲಿಕೆಯಾಗಿಲ್ಲಆಟೋಗಳು ಗುಜರಿಗೆ: ಚಾಲಕರಿಂದ ಒಂದು ಅರ್ಜಿಯೂ ಸಲ್ಲಿಕೆಯಾಗಿಲ್ಲ

ಆದರೆ, ಇದನ್ನು ಪಡೆಯಲು 2ಸ್ಟ್ರೋಕ್ ಆಟೋ ಚಾಲಕರು ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆದೇಶವನ್ನೇ ಮಾರ್ಪಾಡುಗೊಳಿಸುವ ಅನಿವಾರ್ಯತೆ ಸಾರಿಗೆ ಇಲಾಖೆಗೆ ಎದುರಾಗಿದೆ.

Govt may give relief for 2stroke autos

ನಗರದಲ್ಲಿ ಇಲ್ಲಿಯವರೆಗೆ 73,008 ಸ್ಟ್ರೋಕ್ ಆಟೋಗಳು ನೋಂದಣಿಯಾಗಿವೆ. ಇವುಗಳಲ್ಲಿ ಅಂದಾಜು 20-30ಸಾವಿರ ಆಟೋಗಳು ಇನ್ನೂ ರಸ್ತೆಯಲ್ಲಿವೆ. ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನಿಸಿ 4ತಿಂಗಳು ಕಳೆದಿದ್ದು ಇಲ್ಲಿಯವರೆಗೆ ಬಂದಿರುವ ಅರ್ಜಿ ಕೇವಲ 12-15ಮಾತ್ರ. ಹೊಸ ಆಟೋ ಖರೀದಿಗೆ ಕೇವಲ 30ಸಾವಿರ ರೂ. ಸಬ್ಸಿಡಿ ಕಡಿಮೆಯಾಯಿತು ಎನ್ನುವುದು ಚಾಲಕರ ಆಕ್ಷೇಪವಾಗಿದೆ.
English summary
Department of transport is thinking of one more year extension to ban on two stroke auto rickshaws in Bengaluru city. Earlier the department had issued notification ban on two stroke autos in Bengaluru city from April 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X