ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2 ವರ್ಷದಲ್ಲಿ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಯೋಜನೆಗೆ ಸರ್ಕಾರ ಹಸಿರು ನಿಶಾನೆ

|
Google Oneindia Kannada News

ಬೆಂಗಳೂರು, ಜನವರಿ 18: ಕೆಲ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬೆಂಗಳೂರ ಪೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿಗೆ ಹಸಿರು ನಿಶಾನೆ ದೊರೆತಿದೆ. ಖಾಸಗಿ ಕಂಪನಿ ಸಹಭಾಗಿತ್ವದಲ್ಲಿ ನಿಗಧಿತ ಕಾಲಮಿತಿಯಲ್ಲಿ ಬೆಂಗಳೂರಿನಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ ಅವರು, ಬೆಂಗಳೂರು ವೇಗವಾಗಿ ನಿರ್ಮಾಣವಾಗುತ್ತಿರುವ ನಗರ. ವಿಶ್ವಮಾನ್ಯ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿ ಪಡಿಸಲು ಸರ್ಕಾರ ಸಿದ್ಧವಿದೆ. 21 ಸಾವಿರ ಕೋಟಿ ಅಂದಾಜು ಮೊತ್ತದಲ್ಲಿ ಪೆರಿಫೆರಲ್ ರಿಂಗ್ ರಸ್ತೆಯನ್ನು ವಿದೇಶಿ ಎಂಇಝಡ್ ಕಂಪನಿ ನಿರ್ಮಾಣ ಮಾಡಲಿದೆ.

ಬಿಡಿಎನಿಂದ ರೈತರಿಗೆ ಶೇ. 40 ರಷ್ಟು ಅಭಿವೃದ್ಧಿ ಭೂಮಿ: ಬಿಎಸ್ ವೈಬಿಡಿಎನಿಂದ ರೈತರಿಗೆ ಶೇ. 40 ರಷ್ಟು ಅಭಿವೃದ್ಧಿ ಭೂಮಿ: ಬಿಎಸ್ ವೈ

ಮುಂದಿನ ಎರಡು ವರ್ಷದ ಕಾಲಮಿತಿಯಲ್ಲಿ ರಸ್ತೆ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಬಿಡಿಎ ಜನಪರ ಕೆಲಸಕ್ಕಾಗಿ ಸರ್ಕಾರ ಯಾವುದೇ ರೀತಿಯ ನೆರವು ನೀಡಲು ಸಿದ್ಧವಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪೆರಿಫೆರಲ್ ರಿಂಗ್ ರಸ್ತೆಯ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಯಡಿಯೂರಪ್ಪ ಅವರು ತಿಳಿಸಿದರು.

 Bengaluru: Govts green signal to BDA for Peripheral Ring Road

ಇದೇ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಕುರಿತು ಸ್ಪಷ್ಟಪಡಿಸಿದ ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌, ಇನ್ನೆರಡು ತಿಂಗಳಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿ ಕಾರ್ಯ ಶುರುವಾಗಲಿದೆ. ನೈಸ್ ರಸ್ತೆ ಸಂಪರ್ಕಿಸುವ 110 ಕಿ.ಮೀ. ಆಗಲಿದೆ. 21 ಸಾವಿರ ಕೋಟಿ ಮೊತ್ತದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ರಿಂಗ್ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಗುರುತಿಸಿದ ಜಾಗದಲ್ಲಿ ಬಡಾವಣೆ ನಿರ್ಮಿಸಿ, ನಿವೇಶನ ಮಾರಾಟ ಮಾಡಿದಲ್ಲಿ ಯಾವುದೇ ಮುಲಾಜಿಲ್ಲದೇ ತೆರವುಗೊಳಿಸಲಾಗುವುದು. ಪೆರಿಫೆರಲ್ ರಿಂಗ್ ರಸ್ತೆಗೆ ಗುರುತಿಸದ ಜಾಗದಲ್ಲಿ ಯಾರೂ ನಿವೇಶನ ಖರೀದಿಸಿ ಅನ್ಯಾಯಕ್ಕೆ ಒಳಗಾಗಬಾರದು ಎಂದು ಕಿವಿಮಾತು ಹೇಳಿದರು.

ಬಿಡಿಎ ಆಯುಕ್ತರ ಏಟಿಗೆ- ಬ್ರೋಕರ್ ಜಾಲ ತಲ್ಲಣ: ಕೆಎಎಸ್ ಅಧಿಕಾರಿಗಳಿಗೆ ಬಂಧನ ಭೀತಿ !ಬಿಡಿಎ ಆಯುಕ್ತರ ಏಟಿಗೆ- ಬ್ರೋಕರ್ ಜಾಲ ತಲ್ಲಣ: ಕೆಎಎಸ್ ಅಧಿಕಾರಿಗಳಿಗೆ ಬಂಧನ ಭೀತಿ !

ಬಿಡಿಎ ನಿಂದ ಈಗಾಗಲೇ 65 ಸಾವಿರ ನಿವೇಶನ ಹಂಚಿಕೆ ಮಾಡಿದ್ದೇವೆ. ಅರ್ಕಾವತಿ, ಕೆಂಪೇಗೌಡ ಬಡಾವಣೆಗೆ ಭೂಮಿ ಕೊಟ್ಟ ರೈತರಿಗೆ ಇನ್ನೂ ಪರಿಹಾರ ಸಿಗದೇ ಅಲೆಯುತ್ತಿದ್ದಾರೆ. ಅಂತವರನ್ನು ಮೊದಲು ಗುರುತಿಸಿ ತಕ್ಷಣ ನಿವೇಶನ ನೀಡಲಾಗುವುದು. ಆಯುಕ್ತರ ಜತೆ ಚರ್ಚಿಸಿ ಮೊದಲ ಆದ್ಯತೆಯಾಗಿ ರೈತರಿಗೆ ನಿವೇಶನ ನೀಡಿದ ಬಳಿಕವೇ ಗ್ರಾಹಕರಿಗೆ ನಿವೇಶನ ಹಂಚಿಕೆ ಕ್ರಮಕೈಗೊಳ್ಳಲಾಗವುದು ಎಂದು ಹೇಳಿದರು.

 Bengaluru: Govts green signal to BDA for Peripheral Ring Road

ಬಿಡಿಎಗೆ ಪ್ರತ್ಯೇಕ ಪೊಲೀಸ್ ಸ್ಟೇಷನ್: ಬಿಡಿಎ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮಗಳಿಗೆ ಸಂಬಂಧಿಸಿದಂತೆ ಜಾಗೃತ ದಳಕ್ಕೆ ಎಫ್‌ಐಆರ್ ದಾಖಲಿಸುವ ಅಧಿಕಾರವಿಲ್ಲ. ಮುಂದಿನ ದಿನಗಳಲ್ಲಿ ಜಾಗೃತ ದಳದಲ್ಲಿಯೇ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಸಲಾಗಿದೆ. ಗೃಹ ಇಲಾಖೆಯ ಅನುಮತಿ ನೀಡಿದ ಬಳಿಕವೇ ಬಿಡಿಎ ಜಾಗೃತ ದಳಕ್ಕೆ ಪೊಲೀಸ್ ಠಾಣೆ ಅಧಿಕಾರ ಸಿಗಲಿದೆ. ಆ ಬಳಿಕ ಬಿಡಿಎ ಅಕ್ರಮಗಳನ್ನು ಸ್ವತಂತ್ರವಾಗಿ ಜಾಗೃತ ದಳವೇ ತನಿಖೆ ನಡೆಸಲಿದೆ.

 Bengaluru: Govts green signal to BDA for Peripheral Ring Road

Recommended Video

Uddhav Thackery ಹೇಳಿಕೆ ಚೀನಾದ ವಿಸ್ತರಣಾವಾದವನ್ನ ಧ್ವನಿಸುತ್ತದೆ- HD KumarSwamy | Oneindia Kannada

ಇನ್ನು ಸಗಟು ನಿವೇಶನ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಡಿಎ ಆಯುಕ್ತರ ಜತೆ ಚರ್ಚಿಸಿ ತನಿಖೆಗೆ ಒಳಪಡಿಸುತ್ತೇವೆ. ಹೊಸಕೆರೆಹಳ್ಳಿ ಸೇರಿದಂತೆ ಹಲವಡೆ ನಡೆದಿರುವ ಅಕ್ರಮದ ಬಗ್ಗೆ ಶೇಷಾದ್ರಿಪುರಂ ಪೊಲೀಸರು ಸಮರ್ಥ ತನಿಖೆ ನಡೆಸುತ್ತಿದ್ದಾರೆ. ಎಸ್‌ಐಟಿ ತನಿಖೆ ಮಾಡುವ ಬಗ್ಗೆ ಬಿಡಿಎ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಈ ಬಗ್ಗೆ ಆಯುಕ್ತರೇ ಪತ್ರ ಬರೆಯಲಿದ್ದಾರೆ. ಸಗಟು ನಿವೇಶನ ಹಂಚಿಕೆ ಹಗರಣ ಮಾತ್ರವಲ್ಲ, ಒಳ್ಳೆಯ ನಿವೇಶನ ಕೊಡುವ ಹೆಸರಿನಲ್ಲಿ ಇಂಜಿನಿಯರ್ ಗಳು ಕೂಡ ಅಕ್ರಮ ಎಸಗಿದ್ದಾರೆ. ಬಿಡಿಎ ಗೆ ಸೇರಿದ 2500 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಸಂಬಂಧ ಲೀಗಲ್ ಸೆಲ್ ನ್ನು ಸ್ಟ್ರಾಂಗ್ ಮಾಡಲಾಗುವುದು ಎಂದು ಅವರು ಹೇಳಿದರು.

English summary
Bengaluru: Karnataka Govt's green signal to BDA for Peripheral Ring Road. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X