ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಗೆ ಎಚ್‌ಎಎಲ್‌ ಜತೆ ಕೇಂದ್ರ ಒಪ್ಪಂದ

|
Google Oneindia Kannada News

ಬೆಂಗಳೂರು,ಫೆಬ್ರವರಿ 03: ಒಟ್ಟು 83 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಗೆ ಎಚ್‌ಎಎಲ್ ಜತೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಕೇಂದ್ರ ಸರ್ಕಾರ-ಹೆಚ್ಎಲ್ಎಲ್ 83 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಯ ಒಪ್ಪಂದಕ್ಕೆ ಫೆ.03 ರಂದು ಸಹಿ ಹಾಕಿವೆ.

48,000 ಕೋಟಿ ರೂಪಾಯಿಗಳ ಯೋಜನೆ ಇದಾಗಿದ್ದು, ಏರೋ ಇಂಡಿಯಾ ಶೋ-2021 ರ ಮೊದಲ ದಿನ ಈ ಒಪ್ಪಂದ ನಡೆದಿದೆ.ಎಚ್ಎ ಎಲ್ ನಿರ್ಮಿತ ತೇಜಸ್ ಯುದ್ಧವಿಮಾನ ಏಕ ಇಂಜಿನ್ ಬಹು ಉಪಯೋಗಿ, ಸೂಪರ್ ಸೋನಿಕ್ ಫೈಟರ್ ವಿಮಾನವಾಗಿದ್ದು, ಪ್ರತಿಕೂಲ ವಾತಾವರಣದಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.

HAL ನಿರ್ಮಿತ 83 ತೇಜಸ್ ಲಘು ಯುದ್ಧ ವಿಮಾನ ಖರೀದಿಗೆ ಕೇಂದ್ರ ಒಪ್ಪಿಗೆHAL ನಿರ್ಮಿತ 83 ತೇಜಸ್ ಲಘು ಯುದ್ಧ ವಿಮಾನ ಖರೀದಿಗೆ ಕೇಂದ್ರ ಒಪ್ಪಿಗೆ

ರಕ್ಷಣಾ ಸಚಿವಾಲಯದ ಪ್ರಧಾನ ನಿರ್ದೇಶಕ (ಖರೀದಿ ವಿಭಾಗ) ವಿಎಲ್ ಕಾಂತ ರಾವ್ ಎಚ್ಎಎಲ್ ನ ವ್ಯವಸ್ಥಾಪಕ ನಿರ್ದೇಶಕ ಹಗೂ ಅಧ್ಯಕ್ಷ ಆರ್ ಮಾಧವನ್ ಏರೋ ಇಂಡಿಯಾ-2021 ರ ಉದ್ಘಾಟನೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಸಂಸದೀಯ ಸಭೆ ಒಪ್ಪಿಗೆ ನೀಡಿತ್ತು

ಸಂಸದೀಯ ಸಭೆ ಒಪ್ಪಿಗೆ ನೀಡಿತ್ತು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಗೆ ಸಂಬಂಧಿಸಿದ ಸಂಸದೀಯ ಸಮಿತಿ (ಸಿಸಿಎಸ್) 73 ತೇಜಸ್ Mk-IA ಆವೃತ್ತಿ ಹಾಗೂ 10 ಎಲ್ ಸಿಎ ತೇಜಸ್ Mk-I ಆವೃತ್ತಿಯ ತರಬೇತಿ ಯುದ್ಧ ವಿಮಾನಗಳನ್ನು ಎಚ್ಎಎಲ್ ನಿಂದ ಖರೀದಿಸಲು ಕಳೆದ ತಿಂಗಳು ಒಪ್ಪಿಗೆ ನೀಡಿತ್ತು.

48 ಸಾವಿರ ಕೋಟಿ ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ ದೊರೆತಿತ್ತು

48 ಸಾವಿರ ಕೋಟಿ ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ ದೊರೆತಿತ್ತು

ಭಾರತೀಯ ವಾಯುಪಡೆ(ಐಎಎಫ್)ಗೆ ಎಚ್ಎಎಲ್ ಅಭಿವೃದ್ಧಿಪಡಿಸಿರುವ 83 ಲಘು ಯುದ್ಧ ವಿಮಾನ 'ತೇಜಸ್' ಅನ್ನು 48,000 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

3 ವರ್ಷಗಳ ಹಿಂದೆ ಆರಂಭಿಕ ಟೆಂಡರ್

3 ವರ್ಷಗಳ ಹಿಂದೆ ಆರಂಭಿಕ ಟೆಂಡರ್

ಸುಮಾರು ಮೂರು ವರ್ಷಗಳ ಹಿಂದೆ, ಐಎಎಫ್ 83 ತೇಜಸ್ ವಿಮಾನಗಳನ್ನು ಖರೀದಿಸಲು ಆರಂಭಿಕ ಟೆಂಡರ್ ನೀಡಿತ್ತು. ತೇಜಸ್ ನಾಲ್ಕೂವರೆ ತಲೆಮಾರಿನ ಯುದ್ಧ ಜೆಟ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಸಂಪುಟ ಸಮಿತಿ(ಸಿಸಿಎಸ್) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತದಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಗಾಗಿ ಈ ಒಪ್ಪಂದವು 'ಗೇಮ್ ಚೇಂಜರ್' ಆಗಲಿದೆ. ಮುಂದಿನ ವರ್ಷಗಳಲ್ಲಿ ತೇಜಸ್ ಭಾರತೀಯ ವಾಯುಪಡೆಯ ಫೈಟರ್ ಫ್ಲೀಟ್‌ನ ಬೆನ್ನೆಲುಬಾಗಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

73 ವಿಮಾನಗಳನ್ನು ಯುದ್ಧದ ಸಮಯದಲ್ಲಿ ಬಳಕೆ

73 ವಿಮಾನಗಳನ್ನು ಯುದ್ಧದ ಸಮಯದಲ್ಲಿ ಬಳಕೆ

ಇದರಲ್ಲಿ 73 ವಿಮಾನಗಳನ್ನು ಯುದ್ಧ ಸಮಯಗಳಲ್ಲಿ ಬಳಸಲಾಗುವುದು. ಇನ್ನುಳಿಂದ 10 ವಿಮಾನಗಳನ್ನು ತರಬೇತಿ ನೀಡಲು ಬಳಸಲಾಗುತ್ತದೆ. ವಿಮಾನ ತಯಾರಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಈಗಾಗಲೇ ನಾಸಿಕ್ ಮತ್ತು ಬೆಂಗಳೂರು ವಿಭಾಗಗಳಲ್ಲಿ ಎರಡನೇ ಸಾಲಿನ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಿದೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.

Recommended Video

#AeroIndia2021: 13ನೇ ಆವೃತ್ತಿಯ ಏರ್ ಶೋಗೆ ಚಾಲನೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ | Oneindia Kannada

English summary
The government on Wednesday formally sealed the ₹48,000 crore deal to procure 83 Tejas light combat aircraft from state-run aerospace behemoth Hindustan aeronotics Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X