ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ ಶೀಘ್ರ ಇಟಾಲಿಯನ್ ವಿಮಾನ ಸೇರ್ಪಡೆ

By Nayana
|
Google Oneindia Kannada News

ಬೆಂಗಳೂರು, ಮೇ 30: ವಾಣಿಜ್ಯ ಪೈಲಟ್ ಪರವಾನಗಿ ಪಡೆಯಲು ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಎರಡು ಎಂಜಿನ್‌ಗಳ ಖರೀದಿಗಾಗಿ ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧೀನದ ಜಿಎಫ್‌ಟಿಎಸ್‌ ಮುಂದಾಗಿದೆ.ಕಳೆದ ನವೆಂಬರ್‌ನಲ್ಲಿ ಟೆಂಡರ್ ಆಹ್ವಾನಿಸಿತ್ತು.

ಬಳ್ಳಾರಿ ರಸ್ತೆಯಲ್ಲಿರುವ ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ ಶೀಘ್ರದಲ್ಲಿ ಮತ್ತೆರೆಡು ನೂತನ ವಿಮಾನಗಳು ಸೇರ್ಪಡೆಗೊಳ್ಳಲಿದೆ. ಇನ್ನು ಒಂದೂವರೆ ತಿಂಗಳಿನಲ್ಲಿ ಇಟಲಿ ನಿರ್ಮಿತ ನಾಲ್ಕು ಸೀಟುಗಳ ಒಂದು ಎಂಜಿನ್‌ನ ಟೆಕ್ಸಂ 2010 ಮಾದರಿಯ ವಿಮಾನ ಜಿಎಫ್‌ಟಿಎಸ್‌ಗೆ ಸೇರ್ಪಡೆಯಾಗಲಿದೆ.

ಜೆಟ್‌ ಏರ್‌ವೇಸ್ ನಿಜಕ್ಕೂ ಫ್ರೀ ಟಿಕೆಟ್ ಕೊಡುತ್ತಾ? ವೈರಲ್ ಆದ ಸಂದೇಶಜೆಟ್‌ ಏರ್‌ವೇಸ್ ನಿಜಕ್ಕೂ ಫ್ರೀ ಟಿಕೆಟ್ ಕೊಡುತ್ತಾ? ವೈರಲ್ ಆದ ಸಂದೇಶ

ಮುಂದಿನ ವರ್ಷದ ಫೆಬ್ರವರಿಯಲ್ಲಿ ಅಥವಾ ಮಾರ್ಚ್‌ನಲ್ಲಿ ಎರಡು ಎಂಜಿನ್‌ನ ಟೆಕ್ಸಂ ಪಿ 2006ಟಿ ಮಾದರಿಯ ವಿಮಾನ ದೊರೆಯಲಿದೆ. ಇದು ಕೂಡ ನಾಲ್ಕು ಸೀಟು ಹೊಂದಿದೆ. ಎರಡೂ ವಿಮಾನ ಸಿಕ್ಕ ಬಳಿಕ ಶಾಲೆಯ ತರಬೇತಿ ವಿಮಾನಗಳ ಸಂಖ್ಯೆ ಆರಕ್ಕೆ ಏರಲಿದೆ ಎಂದು ಶಾಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Govt flying school will get two Italian flights

ಈಗಿರುವ ಎರಡು ಸೆಸ್ನಾ 152 ಹಾಗೂ ಎರಡು ಸೆಸ್ನಾ 172 ತರಬೇತಿ ವಿಮಾನಗಳಿವೆ. ಇದರ ಜತೆಗೆ ಎಸ್‌812 ಎಂಜಿನ್ ಸಿಮ್ಯುಲೇಟರ್ ಕೂಡಾ ಇದೆ. ಒಟ್ಟು ಆರು ತರಬೇತಿ ವಿಮಾನಗಳ ಮೂಲಕ ಜಿಎಫ್‌ಟಿಎಸ್ ದಕ್ಷಿಣ ಭಾರತದ ಪ್ರತಿಷ್ಠಿತ ವೈಮಾನಿಕ ತರಬೇತಿ ಸಂಸ್ಥೆಯಾಗಿ ರೂಪುಗೊಳ್ಳಲಿದೆ.

English summary
Government Flying Training School of Bengaluru will be added two more new flights which were manufactured in Italy. There after GFTS will have total six flights to train the students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X