ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಯಾಂಡಲ್‌ವುಡ್ ಡ್ರಗ್ ಕೇಸ್: ಪೊಲೀಸರಿಗೆ ಟೋಪಿ ಹಾಕಿದ್ದ ಪೆಡ್ಲರ್ ಥಾಮಸ್

|
Google Oneindia Kannada News

ಬೆಂಗಳೂರು, ಆ. 30: ಡ್ರಗ್ ಪೆಡ್ಲರ್ ಜತೆ ಒಡನಾಟ ಇಟ್ಟುಕೊಂಡು ಮಾದಕ ಜಾಲವನ್ನು ಬೆಂಗಳೂರಿಗೆ ವಿಸ್ತರಿಸಿದ ಆರೋಪದ ಮೇಲೆ ನಟಿ ಸೇರಿದಂತೆ ಮೂವರ ನಿವಾಸಗಳ ಮೇಲೆ ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ. ನಟಿ ಸೋನಿಯಾ ಅಗರ್ ವಾಲ್, ಉದ್ಯಮಿ ಭರತ್‌ನನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಡ್ರಗ್ ಪೆಡ್ಲರ್ ಥಾಮಸ್ ನೊಂದಿಗೆ ಸಂಪರ್ಕ ಇಟ್ಟುಕೊಂಡು ಮಾದಕ ಜಾಲದಲ್ಲಿ ತೊಡಗಿದ ಆರೋಪ ಬಂಧಿತರ ಮೇಲಿದೆ.

ಕೆಲ ದಿನಗಳ ಹಿಂದೆ ಗೋವಿಂದಪುರ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಥಾಮಸ್ ಜತೆ ನಿಕಟ ಸಂಪರ್ಕ ಹೊಂದಿದ್ದ ನಟಿ ಸೋನಿಯಾ ಅಗರ್ ವಾಲ್ ನಿವಾಸ, ಉದ್ಯಮಿ ಭರತ್ ಅವರ ಮನೆ ಹಾಗೂ ಡಿಜೆ ವಚನ್ ಚನ್ನಪ್ಪ ಅವರ ಮನೆ ಮೇಲೆ ದಾಳಿ ನಡೆಸಿ ಮಾದಕ ವಸ್ತು ವಹಿವಾಟಿಗೆ ಸಂಬಂಧಿಸಿದಂತೆ ಕೆಲವು ಮಹತ್ವದ ದಾಖಲೆಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಸ್ಯಾಂಡಲ್ ಡ್ರಗ್ ಡೀಲ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಯದ ವರದಿ ನ್ಯಾಯಾಲಯಕ್ಕೆ ಸಲ್ಲಿಸಿದ ಬೆನ್ನಲ್ಲೇ ಇದೀಗ ಪೂರ್ವ ವಿಭಾಗದ ಪೊಲೀಸರು ಸೆಲಿಬ್ರಿಟಿಗಳ ಮಾದಕ ಲೋಕದ ಮತ್ತೊಂದು ಆಯಾಮವನ್ನು ಬಯಲಿಗೆ ಎಳೆದಿದ್ದಾರೆ.

ಡ್ರಗ್ ಪೆಡ್ಲರ್ ಜತೆ ನಿಕಟ ಸಂಪರ್ಕ ಹೊಂದಿದ್ದ ಸೆಲಿಬ್ರಿಟಿಗಳ ಮನೆಗಳ ಮೇಲೆ ದಾಳಿ ಡ್ರಗ್ ಪೆಡ್ಲರ್ ಜತೆ ನಿಕಟ ಸಂಪರ್ಕ ಹೊಂದಿದ್ದ ಸೆಲಿಬ್ರಿಟಿಗಳ ಮನೆಗಳ ಮೇಲೆ ದಾಳಿ

ಕಿಲಾಡಿ ಥಾಮಸ್ ಖತರ್ನಾಕ್ ಪ್ಲಾನ್

ಕಿಲಾಡಿ ಥಾಮಸ್ ಖತರ್ನಾಕ್ ಪ್ಲಾನ್

ಸ್ಯಾಂಡಲ್ ವುಡ್ ಸೆಲಿಬ್ರಿಟಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಯಾವಾಗ ಸಿಸಿಬಿ ಪೊಲೀಸರು ಸ್ಯಾಂಡಲ್ ವುಡ್ ಡ್ರಗ್ ರಾಕೆಟ್ ಮೇಲೆ ಮುಗಿ ಬಿದ್ದರೋ ಅದಾಗಲೇ ಥಾಮಸ್ ಚಾಣಾಕ್ಷತೆ ತೋರಿ ಸಿಸಿಬಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಮಾದಕ ವಸ್ತು ಸೇವನೆ ಮಾಡಿ ಹೆಲ್ಮೆಟ್ ಇಲ್ಲದೇ ವಾಹನ ಓಡಿಸಿ ಕೆ.ಆರ್. ಪುರಂ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಪೊಲೀಸರಿಂದಲೇ ಸಣ್ಣ ಕೇಸು ಹಾಕಿಸಿಕೊಂಡು ಜೈಲಿಗೆ ಹೋಗಿದ್ದ. ಹೀಗಾಗಿ ಸ್ಯಾಂಡಲ್ ವುಡ್ ಡ್ರಗ್ ಡೀಲ್ ಕೇಸಿನಲ್ಲಿ ಥಾಮಸ್ ಹೆಸರು ಬಂದರೂ ಸಿಸಿಬಿ ಪೊಲೀಸರು ತಲೆ ಕೆಡಿಸಿಕೊಂಡಿರಲಿಲ್ಲ. ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಮುಗಿಸಿದ ಬಳಿಕ ಜಾಮೀನಿನ ಮೇಲೆ ಹೊರ ಬಂದು ಸೆಲಬ್ರಿಟಿಗಳ ಜತೆ ರಾಜಾರೋಷವಾಗಿ ಮಾದಕ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಥಾಮಸ್ ಮಾದಕ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಗೋವಿಂದಪುರ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ಇತ್ತೀಚೆಗೆ ಥಾಮಸ್‌ನನ್ನು ಬಂಧಿಸಿದ್ದರು. ಈತನ ಸಂಪರ್ಕದಲ್ಲಿದ್ದ ಸೆಲಿಬ್ರಿಟಿಗಳು, ಅವರು ಆಯೋಜನೆ ಮಾಡಿದ್ದ ಪಾರ್ಟಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಇಂದು ಮೂವರು ನಿವಾಸಗಳ ಮೇಲೆ ದಾಳಿ ಮಾಡಿದ್ದಾರೆ.

ಪ್ಲಾಟ್ ನಲ್ಲಿಯೇ ಮೋಜು ಪಾರ್ಟಿ

ಪ್ಲಾಟ್ ನಲ್ಲಿಯೇ ಮೋಜು ಪಾರ್ಟಿ

ಗೋವಿಂದಪುರ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಉದ್ಯಮಿ ಭರತ್ ಬನಶಂಕರಿಯಲ್ಲಿರುವ ತನ್ನ ಫ್ಲಾಟ್‌ನಲ್ಲಿ ಮೋಜು ಪಾರ್ಟಿ ಆಯೋಜಿಸುತ್ತಿದ್ದ. ತನ್ನ ಆಪ್ತರನ್ನು ಕರೆಸಿ ಮಾದಕ ವಸ್ತುಗಳನ್ನು ನೀಡಿ ಖುಷಿ ಪಡಿಸುತ್ತಿದ್ದ. ಕೇವಲ 300 ರೂ.ಗೆ ಡ್ರಗ್ ತರಿಸಿ ಥಾಮಸ್ ಮೂರು ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ ಸಂಗತಿ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಉದ್ಯಮಿ ಭರತ್ ನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಟಾಯ್ಲೆಟ್‌ನಲ್ಲಿ ಲಾಕ್ ಆದ ನಟಿ ಸೋನಿಯಾ

ಟಾಯ್ಲೆಟ್‌ನಲ್ಲಿ ಲಾಕ್ ಆದ ನಟಿ ಸೋನಿಯಾ

ಮಾದಕ ಲೋಕದ ರಾಣಿ ಎಂದೇ ಖ್ಯಾತಿ ಪಡೆದಿದ್ದ ಸೆಲಿಬ್ರಿಟಿ ಸೋನಿಯಾ ಅಗರ್ ವಾಲ್ ಮನೆ ಮೇಲೆ ದಾಳಿ ಮಾಡಿದಾಗ ತಪ್ಪಿಸಿಕೊಂಡಿದ್ದಳು. ಖಾಸಗಿ ಹೋಟೆಲ್ ನಲ್ಲಿ ತಂಗಿದ್ದ ಆಕೆಯ ಮಾಹಿತಿ ಜಾಡು ಹಿಡಿದು ಪೊಲೀಸರು ಬಂಧನಕ್ಕೆ ತೆರಳಿದಾಗ ಪುರುಷರ ಟಾಯ್ಲೆಟ್‌ನಲ್ಲಿ ಬಚ್ಚಿಟ್ಟುಕೊಂಡು ತಲೆ ಮರೆಸಿಕೊಳ್ಳಲು ಯತ್ನಿಸಿದ್ದಾಳೆ. ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ಸೋನಿಯಾ ಅಗರವಾಲ್‌ಳನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಮಾಧ್ಯಮಗಳ ಎದುರು ಬಂದರೆ ಮರ್ಯಾದೆ ಹೋಗುತ್ತದೆ ಎಂದು ಹೇಳಿಕೆ ನೀಡಿದ್ದಾಳೆ. ಅಂತಿಮವಾಗಿ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸೋನಿಯಾ ರಾಜಾಜಿನಗರ ಮನೆಯಲ್ಲಿ 40 ಗ್ರಾಂ ನಷ್ಟು ಮಾದಕ ವಸ್ತು ಸಿಕ್ಕಿದೆ ಎನ್ನಲಾಗಿದೆ.

ವಚನ್ ಚಿನ್ನಪ್ಪ ಮನೆಯಲ್ಲಿ ಗಾಂಜಾ ಪತ್ತೆ

ವಚನ್ ಚಿನ್ನಪ್ಪ ಮನೆಯಲ್ಲಿ ಗಾಂಜಾ ಪತ್ತೆ

ಬಂಧಿತ ಡ್ರಗ್ ಪೆಡ್ಲರ್ ಥಾಮಸ್ ಜತೆ ಸಂಪರ್ಕ ಹೊಂದಿದ್ದ ಡಿಜೆ ವಚನ್ ಚಿನ್ನಪ್ಪ ಅವರ ನಿವಾಸದ ಮೇಲೂ ಪೊಲೀಸರು ದಾಳಿ ನಡೆಸಿದ್ದು 50 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬೆನ್ಸನ್ ಟೌನ್‌ನಲ್ಲಿರುವ ವಚನ್ ಚಿನ್ನಪ್ಪ ಮನೆಯಲ್ಲಿ ಶೋಧ ನಡೆಸಿದ್ದು, ಆತ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಆ ಬಳಿಕ ವಚನ್ ಚಿನ್ನಪ್ಪ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಪ್ರಕರಣ ಕೂಡ ಸ್ಯಾಂಡಲ್ ವುಡ್ ನಲ್ಲಿ ಕೆಲವರಿಗೆ ನಡುಕ ಹುಟ್ಟಿಸಿದೆ.

ಡಿಸಿಪಿ ಶರಣಪ್ಪ ಹೇಳಿಕೆ

ಡಿಸಿಪಿ ಶರಣಪ್ಪ ಹೇಳಿಕೆ

ಮಾದಕ ವಸ್ತು ಸೇವನೆ ಮಾತ್ತು ಮಾರಾಟದ ಅರೋಪದ ಹಿನ್ನೆಲೆಯಲ್ಲಿ ಸೆಲಿಬ್ರಿಟಿ ನಿವಾಸಗಳ ಮೇಲೆ ದಾಳಿ ನಡೆಸಿದ ಕುರಿತು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಥಾಮಸ್ ಬಂಧನದ ವೇಳೆ ಕೆಲವು ಮಹತ್ವದ ಮಾಹಿತಿ ಸಿಕ್ಕಿದ್ದವು. ಅದರ ಆಧಾರದ ಮೇಲೆ ಥಾಮಸ್ ಜತೆ ನೇರ ಸಂಪಕದಲ್ಲಿದ್ದ ಮೂವರ ಮೇಲೆ ದಾಳಿ ನಡೆಸಲಾಗಿದೆ. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ತನಿಖೆ ನಡೆಸಲಾಗುವುದು. ಥಾಮಸ್ ಜತೆ ಸಂಪರ್ಕ ಇರುವ ಇತರೆ ಆರೋಪಿಗಳನ್ನು ಪತ್ತೆ ಕಾರ್ಯ ಮಾಡಲಾಗುವುದು ಎಂದು ಹೇಳಿದರು. ಇನ್ನು ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಅರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

Recommended Video

ನ್ಯೂಸ್ ಆ್ಯಂಕರ್ ಗೆ ಗನ್ ಹಿಡಿದು ಹೆದರಿಸಿ ತಾಲಿಬಾನಿಗಳು ಏನ್ ಹೇಳಿಸಿದ್ರು ಗೊತ್ತಾ? | Oneindia Kannada

English summary
Govindpura Drugs Case: East Divison police taken Actress Sonia Agarwal and 2 others into custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X