ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯಪಾಲರ ತಪ್ಪು ನಿರ್ಣಯವನ್ನು ಸುಪ್ರೀಂ ಸರಿ ಮಾಡಿದೆ: ಸಂತೋಷ್‌ ಹೆಗ್ಡೆ

By Manjunatha
|
Google Oneindia Kannada News

ಬೆಂಗಳೂರು, ಮೇ 18: ಹೊಸ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಡಿಯೂರಪ್ಪ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದು ಉತ್ತಮ ನಿರ್ಧಾರವೇ ಆದರೆ 15 ದಿನಗಳ ಕಾಲಾವಕಾಶ ನೀಡಿದ್ದು ಮಾತ್ರ ಸೂಕ್ತವಾದ ಕ್ರಮವಲ್ಲ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂ ಆದೇಶ : ಶನಿವಾರ ಬಹುಮತ ಸಾಬೀತು ಮಾಡಬೇಕು ಸುಪ್ರೀಂ ಆದೇಶ : ಶನಿವಾರ ಬಹುಮತ ಸಾಬೀತು ಮಾಡಬೇಕು

15 ದಿನಗಳ ಕಾಲಾವಕಾಶ ನೀಡಿದ್ದು ಪರೋಕ್ಷವಾಗಿ ಭ್ರಷ್ಟಾಚಾರ ನಡೆಸಲು ಕುಮ್ಮಕ್ಕು ನೀಡಿದಂತೆ ಎಂದು ದೂರಿದ ಅವರು, ರಾಜ್ಯಪಾಲರ ತಪ್ಪು ನಿರ್ಣಯವನ್ನು ಸುಪ್ರೀಂ ಕೋರ್ಟ್ ಸರಿ ಮಾಡಿದೆ ಎಂದು ಅವರು ಹೇಳಿದರು.

Governors dissension corrected by Supreme court: Santhosh Hegde

ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಬಿಜೆಪಿಗೆ 15 ದಿನಗಳ ಸುದೀರ್ಘ ಕಾಲಾವದಿ ನೀಡಿದ್ದರು. ರಾಜ್ಯಪಾಲರ ನಿರ್ಣಯದ ವಿರುದ್ಧ ಕಾಂಗ್ರೆಸ್ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು, ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನಾಳೆ (ಶನಿವಾರ) ಸಂಜೆ 4 ರ ಒಳಗೆ ಬಹುಮತ ಸಾಬೀತು ಮಾಡುವಂತೆ ಆದೇಶ ನೀಡಿದೆ.

English summary
Inviting BJP to form government is fair enough but giving 15 days time to prove its majority is not good says retired Lokayuktha judge Santhosh Hegde. He said Supreme court corrected Governor's decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X