• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಲಬ್ರೂಯಿ ಅತಿಥಿ ಗೃಹ ನೆಲಸಮಗೊಳಿಸಲ್ಲ : ಸಿದ್ದರಾಮಯ್ಯ

By Mahesh
|

ಬೆಂಗಳೂರು, ಅ.26: ಕಾಂಗ್ರೆಸ್ ಸರ್ಕಾರ ಐತಿಹಾಸಿಕ ಬಾಲಬ್ರೂಯಿ ಅತಿಥಿ ಗೃಹವನ್ನು ದುರಸ್ತಿಗೊಳಿಸುವ ಅಥವಾ ನೆಲಸಮಗೊಳಿಸುವ ಯಾವುದೇ ಉದ್ದೇಶ ಹೊಂದಿಲ್ಲ. ಈ ಬಗ್ಗೆ ಯಾವುದೇ ಯೋಜನೆ ಹಾಕಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪಷ್ಟನೆ ಬಿಪ್ಯಾಕ್ ನ ಸದಸ್ಯೆ ಕಿರಣ್ ಮುಜುಂದಾರ್ ಶಾ ಸೇರಿದಂತೆ ಅನೇಕ ಸಂಘಟನೆಗಳು, ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದು, ಪಾರಂಪರಿಕ ಕಟ್ಟಡ ಉಳಿಸಿದ ಸಂತಸದಲ್ಲಿದ್ದಾರೆ.

ಬಾಲಬ್ರೂಯಿ: ಬಲ ಬೆರಾವಿ ಎಂಬ ಪಾರ್ಸಿ ಪದ ಅಪಭ್ರಂಶವಾಗಿ ಬಾಲಬ್ರೂಯಿ ಆಗಿರಬಹುದು. ಸದಾ ಅಭಿವೃದ್ಧಿ ಎಂಬರ್ಥ ನೀಡುತ್ತದೆ. ಮಾರ್ಕ್ ಕಬ್ಬನ್ ಅವರು ತಮ್ಮ ಹುಟ್ಟೂರು ಐಲ್ ಆಫ್ ಮ್ಯಾನ್ ಬಳಿಯ ಬಾಲಬ್ರೂಯಿ ಎಂಬ ಸ್ಥಳದ ನೆನಪಿಗಾಗಿ ಈ ಕಟ್ಟಡಕ್ಕೆ ಆ ಹೆಸರು ಇಟ್ಟರು ಎಂಬ ಕಥೆಯೂ ಎಂಬ ಇತಿಹಾಸಕಾರ ಸುರೇಶ್ ಮೂನ ವಿವರಿಸುತ್ತಾರೆ.

ಆಗಾ ಅಲಿ ಅಸ್ಕರ್ ಅವರು ಸುಮಾರು 150 ವರ್ಷಗಳ ಹಿಂದೆ ಈಗಿನ ಬಸವೇಶ್ವರ ವೃತ್ತದ ಸಮೀಪದಲ್ಲಿ ನಿರ್ಮಿಸಿದ ಬಾಲಬ್ರೂಯಿ ಬಂಗಲೆ ಸರ್ಕಾರಿ ಅತಿಥಿ ಗೃಹವಾಗಿ ಅನೇಕ ಗಣ್ಯರಿಗೆ ಆತಿಥ್ಯ ನೀಡಿದೆ. ಮಾರ್ಕ್ ಕಬ್ಬನ್, ರವೀಂದ್ರನಾಥ್ ಠಾಗೋರ್, ಜವಹಾರ್ ಲಾಲ್ ನೆಹರೂ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ, ಅಧಿಕಾರ ಅವಧಿಯಲ್ಲಿದ್ದಾಗಲೇ ಎಸ್ ನಿಜಲಿಂಗಪ್ಪ, ದೇವರಾಜ ಅರಸ್, ಎಸ್ ಆರ್ ಬೊಮ್ಮಾಯಿ ಹೀಗೆ ಪಟ್ಟಿ ಬೆಳೆಯುತ್ತದೆ.

ಏನಿದು ವಿವಾದ? : ಬಾಲಬ್ರೂಯಿ ಕಟ್ಟಡವನ್ನು ನವೀಕರಣಗೊಳಿಸಿ ಅದನ್ನುಶಾಸಕರ ಉಪಯೋಗಕ್ಕಾಗಿ ಕ್ಲಬ್ ಹೌಸ್ ಮಾಡಲು ಸರ್ಕಾರ ಮುಂದಾಗಿದೆ ಎಂದು ಬೆಂಗಳೂರು ಮಿರರ್ ನಲ್ಲಿ ವರದಿ ಬಂದಿತ್ತು., ಈ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಹೀಗಾಗಿ ಇತಿಹಾಸ ತಜ್ಞರು, ಪಾರಂಪರಿಕ ಕಟ್ಟಡ ಉಳಿಸಲು ಹೋರಾಡುವ ಎನ್ ಜಿಒಗಳು, ಕಲಾವಿದರು, ಬಿಪ್ಯಾಕ್ ಸಂಘಟನೆ ಆತಂಕ ವ್ಯಕ್ತಪಡಿಸಿದ್ದವು.

ಸ್ಪೀಕರ್ ಗೆ ಮನವಿ ಸಲ್ಲಿಸಲು ಮುಂದಾದರು: ಕಲಾವಿದ ಎಸ್ ಜಿ ವಾಸುದೇವ್, ಬಿ.ಸುರೇಶ್, ಶ್ರೀನಿವಾಸ್ ಕಪ್ಪಣ್ಣ ಮುಂತಾದವರು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಬಾಲಬ್ರೂಯಿ ಕಟ್ಟಡ ಉಳಿಸುವಂತೆ ಮನವಿ ಸಲ್ಲಿಸಲು ಮುಂದಾದರು. ಬಹುಜನ ಸಮಾಜವಾದಿ ಪಕ್ಷದ ಮಾರ್ತಾಂಡ ಮುನಿಯಪ್ಪ ಎಂಬ ಮುಖಂಡರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮುಂದಾದರು.

ಸಾಮಾಜಿಕ ಜಾಲ ತಾಣದಲ್ಲಿ ಅಭಿಯಾನ: ಬಾಲಬ್ರೂಯಿ ಕಟ್ಟಡ ಉಳಿಸಿ ಎಂದು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಅಭಿಯಾನ ಆರಂಭವಾಯಿತು.ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಭಾನುವಾರ ಬೆಳಗ್ಗೆ ಹಲವಾರು ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಈ ವೇಳೆಗೆ ಸಿಎಂ ಅವರ ಟ್ವೀಟ್ ಬಂದಿದ್ದರಿಂದ ಪ್ರತಿಭಟನಾಕಾರರಲ್ಲಿ ಸಂತಸ ಮೂಡಿದೆ.

ಕೈಜೋಡಿಸಿದ ಸಂಘಟನೆಗಳು: Bangalore Political Action Committee (BPAC) ನ ರೇವತಿ ಅಶೋಕ್, ರಜತಾ ಪ್ರಭಾಕರ್, ಅನಿಲ್ ಶೆಟ್ಟಿ, ಕಿರಣ್ ಮಜುಂದಾರ್ ಶಾ ಅವರ ಜೊತೆಗೆ ಅನೇಕ Intact ಸೇರಿದಂತೆ ಅನೇಕ ಸಂಘಟನೆಗಳು ಒಟ್ಟಿಗೆ ಕೈಜೋಡಿಸಿದ ಪರಿಣಾಮ ಬಾಲಬ್ರೂಯಿ ಕಟ್ಟಡ ಉಳಿಯುವಂತಾಗಿದೆ. ಪೃಥ್ವಿ ಅರಸ್ ಎಂಬುವರು ಆನ್ ಲೈನ್ ಪಿಟೀಷನ್ ಹಾಕಿದ್ದರು. ಜಾರಿಎ ಬಾಟ್ಲಿವಾಲ ಅವರು ಮುಖ್ಯಮಂತ್ರಿಗೆ 500ಜನರ ಸ್ಸಹಿವುಳ್ಳ ಮನವಿ ಸಲ್ಲಿಸಿದ್ದರು. ಬಾಲಬ್ರೂಯಿ ಅತಿಥಿ ಗೃಹ ಎಲ್ಲಿದೆ: ಈ ಮ್ಯಾಪ್ ನೋಡಿ

English summary
There is no proposal to demolish the Balabrooie Guest House. The Government has not taken a decision to alter or demolish it says Karnataka Chief Minsiter Siddaramaiah's official Twitter account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more