ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳ; ಹೋಂ ಐಸೊಲೇಷನ್‌ಗೆ ಬ್ರೇಕ್ ಹಾಕಲು ಚಿಂತನೆ

|
Google Oneindia Kannada News

ಬೆಂಗಳೂರು, ಮೇ 22: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗದ ಹಿನ್ನೆಲೆಯಲ್ಲಿ ಶುಕ್ರವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಜೂನ್ 7ರವರೆಗೂ ಲಾಕ್‌ಡೌನ್ ವಿಸ್ತರಣೆ ಮಾಡಿದ್ದಾರೆ.

ಇದರ ಜೊತೆಗೆ ಸೋಂಕು ಇಳಿಮುಖವಾಗದ ಹಿಂದಿನ ಕಾರಣವನ್ನು ಕಲೆ ಹಾಕುವ ಕೆಲಸ ನಡೆಸಲಾಗುತ್ತಿದ್ದು, ಹೋಂ ಐಸೊಲೇಷನ್‌ಗೆ ಅವಕಾಶ ನೀಡಿರುವುದು ಕೂಡ ಸೋಂಕು ಹೆಚ್ಚಳಕ್ಕೆ ಪರೋಕ್ಷ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಹೋಂ ಐಸೊಲೇಷನ್‌ಗೆ ತಿಲಾಂಜಲಿ ಇಡಲು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

Government Thinking Of Treating Covid Patients In Care Centres Instead Of Home Isolation

ಹೋಂ ಐಸೊಲೇಷನ್ ನಿಂದ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ ಎನ್ನಲಾಗಿದ್ದು, ಇದಕ್ಕೆ ಪೂರಕವಾಗಿ ಕಳೆದ ಕೆಲ ದಿನಗಳಿಂದ ಹೋಂ ಐಸೊಲೇಷನ್‌ನಲ್ಲಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪಪ್ಪಿರುವುದು ವರದಿಯಾಗಿದೆ. ಹೀಗಾಗಿ ಹೋಂ ಐಸೊಲೇಷನ್ ಬದಲಾಗಿ ಕೋವಿಡ್ ಸೆಂಟರ್ ಗಳಲ್ಲಿ ಚಿಕಿತ್ಸೆ ನೀಡಲು ಚಿಂತನೆ ನಡೆಸಲಾಗುತ್ತಿದೆ.

ಬೆಂಗಳೂರು; ಮನೆ ಆರೈಕೆಯಲ್ಲಿದ್ದ 778 ಕೋವಿಡ್ ಸೋಂಕಿತರು ಸಾವು ಬೆಂಗಳೂರು; ಮನೆ ಆರೈಕೆಯಲ್ಲಿದ್ದ 778 ಕೋವಿಡ್ ಸೋಂಕಿತರು ಸಾವು

ಹೋಂ ಐಸೊಲೇಷನ್ ನಲ್ಲಿರುವರು ಬೇಕಾಬಿಟ್ಟಿ ಹೊರಗಡೆ ಬಂದು ಸೋಂಕು ಹರಡಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದ್ದು, ಸೋಂಕಿನ ಪ್ರಮಾಣ ಕುಗ್ಗಿಸಲು ಹೋಂ ಐಸೊಲೇಷನ್‌ಗೆ ಬ್ರೇಕ್ ಹಾಕಲು ಯೋಚಿಸಲಾಗುತ್ತಿದೆ.

Recommended Video

ನಿಮ್ಮ ಖಾಸಗಿ ಅಂಗಾಂಗಗಳ ಮೇಲೆ ಟಾರ್ಗೆಟ್ ಮಾಡುತ್ತೆ White Fungus!! | Oneindia Kannada

ಈಚೆಗೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಕುರಿತು ಬಿಬಿಎಂಪಿ ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ಹೋಂ ಐಸೊಲೇಷನ್‌ನಲ್ಲಿದ್ದ 778 ಸೋಂಕಿತರು ಮೃತಪಟ್ಟಿದ್ದಾರೆ ಎಂದು ತಿಳಿಸಿತ್ತು.

English summary
State government is thinking seriously about giving treatment in covid care centres instead of home isolation to covid patients in bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X