ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಲಾರ್ ಪುರಿಯಾ ಸಂಸ್ಥೆ ಕಟ್ಟಡ ವಶಕ್ಕೆ ಪಡೆದ ಸರ್ಕಾರ

By Mahesh
|
Google Oneindia Kannada News

ಬೆಂಗಳೂರು, ಜುಲೈ 22: ಬೆಂಗಳೂರು ಕ್ಲಬ್ ವಶಕ್ಕೆ ಪಡೆಯುವ ಸನ್ನಾಹದಲ್ಲಿರುವ ಸರ್ಕಾರ ಇನ್ನೊಂದೆಡೆ ಪ್ರತಿಷ್ಠಿತ ಬಡಾವಣೆ ಕೋರಮಂಗಲದಲ್ಲಿ ಅಕ್ರಮವಾಗಿ ನಿರ್ಮಿಸಿದ ಬಹುಮಹಡಿ ಕಟ್ಟಡವನ್ನು ಬುಧವಾರ ತನ್ನ ವಶಕ್ಕೆ ಪಡೆದುಕೊಂಡಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸರ್ವೆ ನಂಬರ್ 149ರಲ್ಲಿ ಸರ್ಕಾರಿ ಖರಾಬು ಜಮೀನಿನಲ್ಲಿ ನಿರ್ಮಿಸಲಾಗಿದ್ದ ಸಲಾರ್ ಪುರಿಯಾ ಪ್ರೈ.ಲಿ. ಸಂಸ್ಥೆಗೆ ಸೇರಿದ ಬಹುಮಹಡಿ ಕಟ್ಟಡವನ್ನು ವಶಕ್ಕೆ ಪಡೆಯಲಾಯಿತು. ಸುಮಾರು 2.2 ಎಕರೆ ಜಮೀನನ್ನು ಅಕ್ರಮವಾಗಿ ವಾಣಿಜ್ಯ ಉದ್ದೇಶಕ್ಕಾಗಿ ಮಾರಾಟ ಮಾಡಲಾಗಿತ್ತು. ಇದನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರು ಹೇಳಿದ್ದಾರೆ. [ಬೆಂಗಳೂರು ಕ್ಲಬ್ ನಿಂದ ಕರ್ನಾಟಕ ಸರ್ಕಾರಕ್ಕೆ ಸವಾಲ್]

DC Shankar

ಸಲಾರ್ ಪುರಿಯಾ ಸಂಸ್ಥೆಗೆ 15 ದಿನಗಳ ಹಿಂದೆ ಈ ಬಗ್ಗೆ ನೋಟಿಸ್ ನೀಡಲಾಗಿತ್ತು. ಅದರೆ, ನೋಟಿಸ್ ಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ಸದನ ಸಮಿತಿ ನಿರ್ದೇಶನದ ಮೇರೆಗೆ ಬೆಂಗಳೂರು ಕ್ಲಬ್ ಜಾಗವನ್ನು ವಶಕ್ಕೆ ಪಡೆಯುವಂತೆ ಇಲ್ಲೂ ಕೂಡಾ ಕಂದಾಯ ಇಲಾಖೆ ಅಧಿಕಾರಿಗಳ ನೆರವಿನಿಂದ ಅಕ್ರಮ ಕಟ್ಟಡವನ್ನು ಸರ್ಕಾರಕ್ಕೆ ಸೇರಿಸಲಾಗಿದೆ.

ಬೆಂಗಳೂರು ದಕ್ಷಿಣ ಭೂನ್ಯಾಯಮಂಡಳಿಗೆ ಯಲ್ಲಪ್ಪ ರೆಡ್ಡಿ, ಕೃಷ್ಣ ಐಯ್ಯಂಗಾರ್, ಲಕ್ಷ್ಮಣ್ ರಾವ್ ಹಾಗೂ ಮುನಿಸ್ವಾಮಿ ಶೆಟ್ಟಿ ಎಂಬುವವರು ದೂರು ಸಲ್ಲಿಸಿ ಈ ಜಾಗ ತಮಗೆ ಸೇರಿದ್ದು ಎಂದು ವಾದಿಸಿದ್ದರು. ಅದರೆ, 2007ರಲ್ಲೇ ಇದು ಸರ್ಕಾರಿ ಜಮೀನು ಎಂದು ತೀರ್ಪು ಹೊರಬಂದಿತ್ತು. ಅರ್ಜಿದಾರರಲ್ಲಿ ಒಬ್ಬರಾದ ಮುನಿಸ್ವಾಮಿ ಶೆಟ್ಟಿ ಅವರು ಸಲರ್ ಪೂರಿಯಾ ಸಂಸ್ಥೆಗೆ ಈ ವಿವಾದಿತ ಜಮೀನನ್ನು ಮಾರಾಟ ಮಾಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X