ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2000ಕ್ಕೂ ಅಧಿಕ ಅಕ್ರಮ ಶಾಲೆ ಮೇಲೆ ತೂಗುಗತ್ತಿ

By Kiran B Hegde
|
Google Oneindia Kannada News

ಬೆಂಗಳೂರು, ನ. 21: ರಾಜ್ಯದ ಶಾಸಗಿ ಶಾಲೆಗಳಲ್ಲಿ ಅನುಮತಿ ಪಡೆಯದೆ ನಡೆಸುತ್ತಿರುವ ತರಗತಿಗಳನ್ನು ಮುಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ.

ಇಂತಹ ಸುಮಾರು 2000 ಖಾಸಗಿ ಶಾಲೆಗಳನ್ನು ಸರ್ಕಾರ ಗುರುತಿಸಿದೆ. ಅವುಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ. ಬೆಂಗಳೂರಿನ ಆರ್ಕಿಡ್ಸ್ ಶಾಲೆಗೆ ನೋಟಿಸ್ ನೀಡುವ ಮೂಲಕ ಈ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. [ಅನಧಿಕೃತ ಶಾಲೆಗಳ ವಿರುದ್ಧ ಕ್ರಿಮಿನಲ್ ಕೇಸ್]

ಆರ್ಕಿಡ್ಸ್ ಶಾಲೆಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ನರ್ಸರಿ ಹಾಗೂ ಎಲ್‌ಕೆಜಿಯಲ್ಲಿ ಸುಮಾರು 500 ವಿದ್ಯಾರ್ಥಿಗಳಿದ್ದಾರೆ. ಆರು ಹಾಗೂ ಏಳನೇ ತರಗತಿಯಲ್ಲಿ 29 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈಗಾಗಲೇ ಅನೇಕ ಪಾಲಕರು ಮಕ್ಕಳನ್ನು ಬೇರೆ ಶಾಲೆಗಳಿಗೆ ವರ್ಗಾಯಿಸಿದ್ದಾರೆಂದು ಶಿಕ್ಷಣ ಇಲಾಖೆ ಆಯುಕ್ತ ಮೊಹ್ದ್ ಮೊಯ್ಸಿನ್ ತಿಳಿಸಿದ್ದಾರೆ.

kimmane

ಸಚಿವರ ಪ್ರತಿಕ್ರಿಯೆ: ಅಕ್ರಮ ತರಗತಿಗಳನ್ನು ಮುಚ್ಚಿಸುವ ಪ್ರಕ್ರಿಯೆ ಆರಂಭವಾಗಿದೆ ಎಂಬುದನ್ನು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಖಚಿತಪಡಿಸಿದ್ದಾರೆ.

"ಸರಿಯಾದ ಪರವಾನಗಿ ಹೊಂದಿರದ ಶಾಲೆಗಳನ್ನು ಮುಚ್ಚಿಸಲಾಗುವುದು. ಆದ್ದರಿಂದ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಶಾಲೆ ಅನುಮತಿ ಪಡೆದಿರುವ ಕುರಿತು ಪಾಲಕರು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ಅನಧಿಕೃತ ಶಾಲೆಗಳಿಂದ ಬರುವ ಮಕ್ಕಳನ್ನು ಸೇರಿಸಿಕೊಳ್ಳಲು ಪರವಾನಗಿ ಹೊಂದಿರುವ ಶಾಲೆಗಳಿಗೆ ಸೂಚಿಸಲಾಗಿದೆ. ಇಲಾಖೆ ಗುರುತಿಸಿರುವ ಪ್ರಕಾರ ರಾಜ್ಯದಲ್ಲಿ ಸುಮಾರು 2000 ಸಾವಿರ ಶಾಲೆಗಳು ಸರಿಯಾಗಿ ಅನುಮತಿ ಇಲ್ಲದೆ ನಡೆಯುತ್ತಿವೆ" ಎಂದು ತಿಳಿಸಿದ್ದಾರೆ. [ಆರ್ಕಿಡ್ಸ್ ಶಾಲೆ ವಿರುದ್ಧ ಪ್ರತಿಭಟನೆ]

ಆದರೆ, ಈ ನಿರ್ಧಾರದಿಂದ ಇಂತಹ ಶಾಲೆಗಳಲ್ಲಿ ಕಲಿಯುತ್ತಿರುವ 2ರಿಂದ 3 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅಪಾಯಕ್ಕೆ ಸಿಲುಕುತ್ತದೆ. ಈ ಎಲ್ಲ ಮಕ್ಕಳಿಗೂ ಬೇರೆ ಶಾಲೆಗಳಿಗೆ ಪ್ರವೇಶ ಸಿಗುತ್ತದೆಯೇ? ಆ ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳ ಪ್ರವೇಶಕ್ಕೆ ಅಗತ್ಯ ಸೌಲಭ್ಯವಿರುತ್ತದೆಯೇ? ಎಂಬುದು ದೊಡ್ಡ ಪ್ರಶ್ನೆಯಾಗಿದೆ.

English summary
Karnataka government plans to shut down 2,000 schools running without valid licenses in the state. Commissioner for Public Instruction Mohd Mohsin and Education Minister Kimmane Ratnakar told that, department has passed first order to Orkhids International school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X