ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಜಿ, ಹೋಮ್‌ಸ್ಟೇಗಳಿಗೆ ನೂತನ ಕಾನೂನು, ಏನದು?

|
Google Oneindia Kannada News

ಬೆಂಗಳೂರು, ಜೂನ್ 6: ಪಿಜಿ ಹಾಗೂ ಹೋಮ್‌ಸ್ಟೇ ಗಳಿಗೆ ನೂತನ ಕಾನೂನು ರಚಿಸಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಸಚಿವ ಯುಟಿ ಖಾದರ್ ಮಾಹಿತಿ ನೀಡಿದ್ದು, ಪೇಯಿಂಗ್ ಗೆಸ್ಟ್‌ ಹಾಗೂ ಹೋಮ್‌ಸ್ಟೇ ನಿವಾಸಿಗಳಿಗೆ ಮೂಲಸೌಲಭ್ಯ ಹಾಗೂ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಹೊಸ ಕಾನೂನು ರಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಹೋಂ ಸ್ಟೇ ಟ್ರೆಂಡ್, ಪಾರಂಪರಿಕ ಮನೆಗೆ ಡಿಮ್ಯಾಂಡ್ದಕ್ಷಿಣ ಕನ್ನಡದಲ್ಲಿ ಹೋಂ ಸ್ಟೇ ಟ್ರೆಂಡ್, ಪಾರಂಪರಿಕ ಮನೆಗೆ ಡಿಮ್ಯಾಂಡ್

ನಗರದಲ್ಲಿ ಸಾವಿರಾರು ಪಿಜಿಗಳಿದ್ದು ಮಾಲೀಕರು ಸೂಕ್ತ ಸೌಲಭ್ಯ, ಸುರಕ್ಷತಾ ಕ್ರಮ ಕಲ್ಪಿಸುವುದು ಕಡ್ಡಾಯ, ಸೂಕ್ತ ಸೌಲಭ್ಯ ಕಲ್ಪಿಸದಿದ್ದಾರೆ ಅದನ್ನು ಕೇಳುವ ಹಕ್ಕು ಈ ಕಾನೂನು ಜಾರಿ ಮೂಲಕ ಸಾಧ್ಯವಾಗಲಿದೆ. ಕಾನೂನು ಜಾರಿಯಿಂದ ಪೇಯಿಂಗ್ ಗೆಸ್ಟ್ ಹಾಗೂ ಹೋಮ್‌ಸ್ಟೇ ನಿವಾಸಿಗಳಿಗೆ ಹೆಚ್ಚಿನ ರಕ್ಷಣೆ ಸಿಕ್ಕಿದಂತಾಗುತ್ತದೆ.

Government is planning to bring law to control PG and Homestay

ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ನಿಗದಿತ ಸಂಖ್ಯೆಗಳಿಗಿಂತ ಹೆಚ್ಚಿನ ಮಕ್ಕಳು ದಾಖಲಾಗಿರುವುದರಿಂದ ಕೆಲ ಸಮಸ್ಯೆಗಳು ಉಂಟಾಗಿವೆ. ಅದರ ನಿವಾರಣೆಗಾಗಿ ಶಿಕ್ಷಣ ಇಲಾಖೆ ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ನಿತ್ಯ ಸಾವಿರಾರು ಹೆಣ್ಣುಮಕ್ಕಳು ಉದ್ಯೋಗವನ್ನರಸಿ ಅಥವಾ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಮಾಯಾನಗರಿ ಬೆಂಗಳೂರಿಗೆ ಬರುತ್ತಾರೆ, ಕೆಲವರು ಭವಿಷ್ಯ ಕಟ್ಟಿಕೊಂಡರೆ ಇನ್ನು ಕೆಲವರು ಕಣ್ಣಿಗೆ ಕಾಣದಂತೆ ಮಾಯವಾಗಿಬಿಡುತ್ತಾರೆ. ಅದೆಲ್ಲಕ್ಕೂ ಪಿಜಿಗಳು ಕೂಡ ಕಾರಣವಾಗಿದೆ.

ಪಿಜಿಗಳಲ್ಲಿ ಸೂಕ್ತ ಭದ್ರತೆಗಳಿಲ್ಲ, ಪಿಜಿಯಲ್ಲಿ ಉಳಿದುಕೊಳ್ಳುವವರನ್ನು ಹೊರತುಪಡಿಸಿ ಹೊರಗಡೆಯವರಿಗೆ ಬರಲು ಅನುಮತಿ ನೀಡುವಂಥದ್ದ ಇದೆಲ್ಲವೂ ಕೂಡ ಹೆಣ್ಣುಮಕ್ಕಳ ಭವಿಷ್ಯವನ್ನು ಹಾಳು ಮಾಡುವ ಸಂಗತಿಯೇ ಆಗಿದೆ.

English summary
Karnataka Government is planning to bring Legislation to control PG and Homestay across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X