ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಾನಂದ ವೃತ್ತ ಸ್ಟೀಲ್ ಬ್ರಿಡ್ಜ್ ಯೋಜನಾ ವೆಚ್ಚ ಮತ್ತಷ್ಟು ಏರಿಕೆ

|
Google Oneindia Kannada News

ಬೆಂಗಳೂರು, ಏ.17: ಸಮ್ಮಿಶ್ರ ಸರ್ಕಾರದ ಕನಸಿನ ಕೂಸಾಗಿರುವ ಶಿವಾನಂದ್ ವೃತ್ತ ಸ್ಟೀಲ್ ಬ್ರಿಡ್ಜ್ ಯೋಜನಾ ಶುಲ್ಕ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಶಿವಾನಂದ ವೃತ್ತದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿದೆ.

ಬೆಂಗಳೂರಲ್ಲಿ ಮೊದಲ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ, ಹೇಗಿರುತ್ತೆ?ಬೆಂಗಳೂರಲ್ಲಿ ಮೊದಲ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ, ಹೇಗಿರುತ್ತೆ?

ಯೋಜನಾ ವೆಚ್ಚವು 50 ಕೋಟಿಯಿಂದ 60 ಕೋಟಿಗೆ ಏರಿಕೆಯಾಗಿದೆ. ಅಷ್ಟೇ ಅಅಲ್ಲದೆ ಕಾಮಗಾರಿಯು 6-8 ತಿಂಗಳುಗಳ ಕಾಲ ತಡವಾಗಿ ಪೂರ್ಣಗೊಳ್ಳಲಿದೆ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ.

Government increases 50 to 60 crores rupees for Shivananda steel bridge allocation

ಹರೇಕೃಷ್ಣ ರಸ್ತೆಕಡೆಯಿಂದ ಶೇಚಾದ್ರಿಪುರ ರಸ್ತೆ ಕಡೆಗೆ 326.25 ಮೀಟರ್ ಉದ್ದದ ಉಕ್ಕಿನ ಮೇಲ್ಸೇತುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು.

ಇದೀಗ ಚಲನಚಿತ್ರ ವಾಣಿಜ್ಯ ಮಂಡಳಿಯವರೆಗೆ ಮೇಲು ರಸ್ತೆ ವಿಸ್ತರಿಸಲಾಗುತ್ತಿದೆ. ಆದ ಕಾರಣ, ಕಾಮಗಾರಿಯು ಮುಗಿಯುವುದೂ ವಿಳಂಬವಾಗಲಿದೆ. 326.55 ಮೀಟರ್ ಉದ್ದದ ಮೇಲುರಸ್ತೆಯನ್ನು 493 ಮೀ.ವರೆಗೆ ವಿಸ್ತರಿಸಲಾಗುತ್ತಿದೆ. ಹೀಗಾಗಿ 10 ಕೋಟಿ ರೂ ವೆಚ್ಚವಾಗಲಿದೆ.

ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ

ಬಿಬಿಎಂಪಿಯು 2017ರ ಜೂ.30ರಂದು ಇನ್‌ಫ್ರಾ ಸಪೋರ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ ಪ್ರೈವೇಟ್ ಲಿಮಿಟೆಡ್ ಗೆ ಉಕ್ಕಿನ ಮೇಲ್ಸೇತುವೆ ನಿರ್ಮಾಣದ ಕಾರ್ಯಾದೇಶ ನೀಡಿತ್ತು.

ಕಾಮಗಾರಿ ಪೂರ್ಣಗೊಳಿಸಲು 9 ತಿಂಗಳುಗಳ ಗಡುವನ್ನೂ ನೀಡಿತ್ತು. ಆಗ 19.85 ಕೋಟಿ ಇದ್ದ ಯೋಜನಾ ಶುಲ್ಕ ಈಗ 60 ಕೋಟಿಗೆ ತಲುಪಿದೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಕಳೆದ ಎರಡು ವರ್ಷಗಳಿಂದ ಕಾಮಗಾರಿ ಮಾತ್ರ ತೆವಳುತ್ತಾ ಸಾಗುತ್ತಿದೆ. ವಾಹನಗಳ ಓಡಾಟಕ್ಕೆ ಸರ್ವೀಸ್ ರಸ್ತೆಯೇ ಇಲ್ಲ, ಮೇಲು ರಸ್ತೆ ವಿಸ್ತರಣೆಗೆ ಅಧಿಕ ಹಣವನ್ನೂ ಏಕೆ ಖರ್ಚು ಮಾಡಲಾಗುತ್ತಿದೆಯೋ ಒಂದೂ ತಿಳಿದಿಲ್ಲ.

English summary
Inspite of slow woking state government increases shivananda circle flyover project funding. Government have decided to Increases Rs 50 crores to 60 crore rupees
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X