ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಶೋಕ್ ಖೇಣಿಗೆ ರಸ್ತೆ 'ನೈಸ್' ಮಾಡಲು ವಾರದ ಗಡುವು ನೀಡಿದ ಸರಕಾರ

|
Google Oneindia Kannada News

ಬೆಂಗಳೂರು, ಅ 7: ಇನ್ನೊಂದು ವಾರದೊಳಗೆ ನೈಸ್ ರಸ್ತೆಯ ಭಯಾನಕ ಗುಂಡಿಗಳನ್ನು ಮುಚ್ಚಲು ಸರಕಾರ, ಸಂಸ್ಥೆಯ ಮಾಲೀಕ ಅಶೋಕ್ ಖೇಣಿಗೆ ಸೂಚಿಸಿದೆ.

ದೂರಿನನ್ವಯ ಖುದ್ದು ನೈಸ್ ರಸ್ತೆಯಲ್ಲಿ ಸಂಚರಿಸಿದ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ, ವಾರದೊಳಗೆ ಗುಂಡಿಯನ್ನು ಮುಚ್ಚಿ, ಸಾರ್ವಜನಿಕರಿಗಾಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ, ಖೇಣಿಗೆ ಸೂಚಿಸಿದ್ದಾರೆ.

ರಸ್ತೆ ಗುಂಡಿ ಮುಚ್ಚದಿದ್ದರೆ ಇಂಜಿನಿಯರ್‌ಗಳಿಗೆ 1 ಸಾವಿರ ರೂ. ದಂಡರಸ್ತೆ ಗುಂಡಿ ಮುಚ್ಚದಿದ್ದರೆ ಇಂಜಿನಿಯರ್‌ಗಳಿಗೆ 1 ಸಾವಿರ ರೂ. ದಂಡ

ಶಾಸಕ ಎಂ ಕೃಷ್ಣಪ್ಪ, ಅಶೋಕ್ ಖೇಣಿ ಜೊತೆ ರಸ್ತೆಯನ್ನು ವೀಕ್ಷಿಸಿದ ಡಿಸಿಎಂ, "ವಾರದೊಳಗೆ ಎಲ್ಲಾ ಗುಂಡಿಗಳನ್ನು ಮುಚ್ಚುವುದಾಗಿ ಖೇಣಿ ಭರವಸೆಯನ್ನು ನೀಡಿದ್ದಾರೆ" ಎಂದು ಹೇಳಿದರು.

Government Given One Week Deadline To Fill The Pothole In Nice Road

ತುಮಕೂರು ರಸ್ತೆಯಿಂದ, ಇಲೆಕ್ಟ್ರಾನಿಕ್ ಸಿಟಿವರೆಗಿನ ನೈಸ್ ರಸ್ತೆಯಲ್ಲಿ ಅಶ್ವಥ್ ನಾರಾಯಣ ಸಂಚರಿಸಿದ್ದರು. "ಗಡುವಿನ ಒಂದು ವಾರ ಮುಗಿದ ನಂತರ, ಮತ್ತೆ ಬಂದು ರಸ್ತೆ ವೀಕ್ಷಣೆ ಮಾಡುತ್ತೇನೆ" ಎಮ್ದು ಉಪಮುಖ್ಯಮಂತ್ರಿಗಳು ಹೇಳಿದರು.

"ಕೆಲವೊಂದು ಕಡೆ ಗುಂಡಿ ಮುಚ್ಚಲು ತಾಂತ್ರಿಕ ತೊಂದರೆ ಇರುವುದಾಗಿ ಖೇಣಿ ಹೇಳಿದ್ದಾರೆ. ಅದನ್ನೆಲ್ಲಾ ಸರಿಪಡಿಸಿಕೊಂಡು ರಸ್ತೆಯ ಗುಂಡಿ ಮುಚ್ಚುವಂತೆ ಸೂಚಿಸಲಾಗಿದೆ" ಎಂದು ಅಶ್ವಥ್ ನಾರಾಯಣ ಹೇಳಿದರು.

ತುಮಕೂರು ರಸ್ತೆಯಿಂದ ಕೆಂಗೇರಿವರೆಗಿನ ರಸ್ತೆ ಇನ್ನೂ ಹದಗೆಟ್ಟಿದೆ. ಅದನ್ನೂ, ಉಪಮುಖ್ಯಮಂತ್ರಿಗಳು ವೀಕ್ಷಿಸಬೇಕಿತ್ತು ಎನ್ನುವ ಕೂಗು ಸಾರ್ವಜನಿಕರಿಂದ ಕೇಳಿಬಂದಿತು.

English summary
Karnataka Government Given One Week Deadline To Fill The Pothole In Nice Road (Tumkuru Road - Electronic City)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X