ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರದಲ್ಲೇ ಸರ್ಕಾರಿ ವೈಮಾನಿಕ ಶಾಲೆ ಆರಂಭ: ಸಚಿವ ನಾರಾಯಣ ಗೌಡ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 01: ''ಶೀಘ್ರದಲ್ಲೇ ಸರ್ಕಾರಿ ವೈಮಾನಿಕ ಶಾಲೆ ಆರಂಭವಾಗಲಿದ್ದು, ಪೈಲಟ್ ಚಾಲನಾ ತರಬೇತಿ ಕೋರ್ಸ್‌ಗಾಗಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ, ಎಂದು ಕ್ರೀಡಾ ಮತ್ತು ಯುವಜನ ಸಬಲೀಕರಣ ಖಾತೆ ಸಚಿವ ಕೆ.ಸಿ ನಾರಾಯಣ ಗೌಡ ಹೇಳಿದ್ದಾರೆ.

Recommended Video

ಜಕ್ಕೂರು ವೈಮಾನಿಕ ಶಾಲೆ ಸದ್ಯದಲ್ಲೇ ಪುನರಾರಂಭ | Oneindia Kannada

ಜಕ್ಕೂರು ವಾಯುನೆಲೆಯಲ್ಲಿ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿ, ಒಂದು ವಾರದೊಳಗೆ ರನ್‍ವೇ ಕೆಲಸ ಮುಗಿಯಲಿದೆ. ನಂತರ ಅತಿಶೀಘ್ರದಲ್ಲಿ ಸರ್ಕಾರಿ ವೈಮಾನಿಕ ಶಾಲೆ ಆರಂಭವಾಗಲಿದೆ.
ಈಗಾಗಲೇ 34 ವಿದ್ಯಾರ್ಥಿಗಳು ವೈಮಾನಿಕ ಚಾಲನಾ ತರಬೇತಿ ಪಡೆಯಲು ಪ್ರವೇಶ ಪಡೆದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ಪಡೆದು, ಉತ್ತಮ ಉದ್ಯೋಗ ಪಡೆದುಕೊಳ್ಳಲು ಇದು ಅವಕಾಶವಾಗಬೇಕು ಎಂದರು.

Government Flying Training School will resume soon: KC Narayana Gowda

ರನ್ ವೇ ಮಾರ್ಗ, ವೈಮಾನಿಕ ಶಾಲೆ ಪುನರ್ ಆರಂಭ ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸುತ್ತೇವೆ ಎಂದು ಸಚಿವರು ಹೇಳಿದರು.

ಜಕ್ಕೂರು ವೈಮಾನಿಕ ತರಬೇತಿ ಶಾಲೆಯಲ್ಲಿ ಸದ್ಯ ಏಳು ಏರ್ ಕ್ರಾಫ್ಟ್ ಗಳಿವೆ. ಈ ಪೈಕಿ ಐದು ಕಾರ್ಯ ನಿರ್ವಹಿಸುತ್ತಿದ್ದು, ಹಾರಾಟ ನಡೆಸುತ್ತಿವೆ. ಈ ಐದು ವಿಮಾನಗಳಲ್ಲಿ ಮೂರು ಹಳೆ ಮಾದರಿ ಏರ್ ಕ್ರಾಫ್ಟ್ ಗಳಾಗಿದ್ದು, ಎರಡು ಹೊಸದಾಗಿ ಕೇಂದ್ರಕ್ಕೆ ಸೇರ್ಪಡೆಗೊಂಡಿವೆ.

Government Flying Training School will resume soon: KC Narayana Gowda

ಮೂವರು ನುರಿತ ಪೈಲಟ್ ಗಳು ಮೊದಲ ಬ್ಯಾಚಿನ ವಿದ್ಯಾರ್ಥಿಗಳಿಗೆ ಸಿಮ್ಯುಲೇಷನ್, ಹಾರಾಟ ತರಬೇತಿ ನೀಡಲಿದ್ದಾರೆ. ವಾರ್ಷಿಕವಾಗಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪಡೆದು ಪೈಲಟ್ ಗಳಾಗಿ ಈ ಕೇಂದ್ರದಿಂದ ಪಾಸಾಗಲಿದ್ದಾರೆ. ಈ ಮುಂಚೆ ಒಂದು ಬ್ಯಾಚಿನಲ್ಲಿ 40 ಮಂದಿಗೆ ಮಾತ್ರ ಅವಕಾಶ ಸಿಗುತ್ತಿತ್ತು.

Government Flying Training School will resume soon: KC Narayana Gowda

ಸುಮಾರು 18 ತಿಂಗಳ ಅವಧಿಯ ಈ ಕೋರ್ಸ್ ಸೇರ್ಪಡೆಗೊಳ್ಳಲು ಬಯಸುವ ಕರ್ನಾಟಕದ ವಿದ್ಯಾರ್ಥಿಗಳಿಗೆ 37 ಲಕ್ಷ ರು ಶುಲ್ಕ ನಿಗದಿಯಾಗಿದೆ. ಹೊರ ರಾಜ್ಯದವರಿಗೆ 42 ಲಕ್ಷ ರು ನಿಗದಿಯಾಗಿದೆ. ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಹಾಗೂ ಮೀಸಲಾತಿಗೆ ಅರ್ಹರಾದ ಕುಟುಂಬದ ವಿದ್ಯಾರ್ಥಿಗಳಿಗೆ 10 ಲಕ್ಷ ರು ಶುಲ್ಕ ವಿಧಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಹೊಸ ರನ್ ವೇ 974 ಮೀಟರ್ ಉದ್ದವಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣದ ಎಲಿವೇಟೆಡ್ ಕಾರಿಡಾರ್ ಯೋಜನೆಯಾಗಿ ರನ್ ವೇಗೆ ಮೀಸಲಾಗಿದ್ದ ಜಾಗವನ್ನು ಬಿಟ್ಟುಕೊಡಲಾಗಿತ್ತು. ಆದರೆ, ನಂತರ ಹೆಚ್ಚುವರಿ ಮೂರು ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಮೂಲ ಪ್ರಸ್ತಾವಿತ ಯೋಜನೆಯಂತೆ ರನ್ ವೇ ನಿರ್ಮಿಸಲಾಗಿದೆ. ಪೂರ್ವ ಭಾಗದಲ್ಲಿ 10 ಎಕರೆ ವಿಸ್ತೀರ್ಣ ಭಾಗವನ್ನು ರನ್ ವೇ ಹೊಂದಿದ್ದು, ಹೆಚ್ಚುವರಿ 3 ಎಕರೆ ಕೂಡಾ ಸೇರ್ಪಡೆಯಾಗಲಿದೆ ಎಂದರು.

English summary
Government Flying Training School will resume soon at Jakkur said Minister of youth Empowerment and Sports KC Narayana Gowda said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X