ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೋಪ, ಮುಷ್ಕರ: ಕರವೇ, ವೈದ್ಯರ ನಡುವೆ ಏನಿದು ಕಿತ್ತಾಟ?

|
Google Oneindia Kannada News

ಬೆಂಗಳೂರು, ನವೆಂಬರ್ 4: ಮಿಂಟೋ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಡೆಸಿರುವ ಹಲ್ಲೆ ಖಂಡಿಸಿ ಇಂದು ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆಗಿಳಿಯಲಿದ್ದಾರೆ.

ಕರವೇ ಕಾರ್ಯಕರ್ತರು ವೈದ್ಯರ ಮೇಲೆ ನಡೆಸಿದ ಹಲ್ಲೆ ಖಂಡಿಸಿ, ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಕಾವು ಹೆಚ್ಚಾಗಿದ್ದು, ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ಹೀಗಾಗಿ ಇಂದು ರಾಜ್ಯವ್ಯಾಪಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಕರವೇ ವಿರುದ್ಧ ಸಿಡಿದೆದ್ದ ವೈದ್ಯರು; ಇಂದು ಮುಷ್ಕರಕ್ಕೆ ಕರೆಕರವೇ ವಿರುದ್ಧ ಸಿಡಿದೆದ್ದ ವೈದ್ಯರು; ಇಂದು ಮುಷ್ಕರಕ್ಕೆ ಕರೆ

ರಾಜ್ಯವ್ಯಾಪಿ ಪ್ರತಿಭಟನೆಗೆ ಮುಂದಾಗಿದ್ದು ಇಂದು ಒಪಿಡಿ ಬಂದ್ ಮಾಡಿದ್ದಾರೆ. ಈ ಮಧ್ಯೆ ಕಣ್ಣು ಕಳೆದುಕೊಂಡವರಿಗೆ 3 ಲಕ್ಷ ಪರಿಹಾರ ಘೋಷಿಸಿರುವ ಅಶ್ವಥ್ ನಾರಾಯಣ, ದೃಷ್ಟಿ ದೋಷ ಇರುವವರಿಗೆ ಸರ್ಕಾರದಿಂದಲೇ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಹೆಚ್ಚಿನ ಸಿಸಿಟಿವಿ ಅಳವಡಿಕೆ, ವೈದ್ಯರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಕರ್ನಾಟಕ ಭದ್ರತಾ ಪಡೆಗಳಿಂದ ಭದ್ರತೆ ನೀಡಲು ಡಿಸಿಎಂ ಸೂಚಿಸಿದ್ದಾರೆ.

ಘಟನೆ ಏನು?

ಘಟನೆ ಏನು?

ನವೆಂಬರ್ 1ರಂದು ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ ನೇತೃತ್ವದಲ್ಲಿ ಕರವೇ ತಂಡದ ಕಾರ್ಯಕರ್ತರು ಮಿಂಟೋ ಆಸ್ಪತ್ರೆಗೆ ಹೋಗಿ ಗಲಾಟೆ ಮಾಡಿದ್ದರು. ಆಸ್ಪತ್ರೆಯ ಕಿರಿಯ ವೈದ್ಯರು ಕನ್ನಡ ಮಾತನಾಡುತ್ತಿಲ್ಲವೆಂದು ತಗಾದೆ ತೆಗೆದಿದ್ದರು. ಕರವೇಯ ಅಶ್ವಿನಿ ಗೌಡ ಅವರು ಕಿರಿಯ ವೈದ್ಯೆಯೊಬ್ಬರ ಮೇಲೆ ಕೈ ಕೂಡ ಮಾಡಿದ್ದರು ಎನ್ನಲಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನಾ ಮೆರವಣಿಗೆ

ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನಾ ಮೆರವಣಿಗೆ

ಇತ್ತ ವೈದ್ಯರ ನಡೆಯನ್ನು ಖಂಡಿಸಿ ಕರವೇ ಕಾರ್ಯಕರ್ತರು ಸಹ ಪ್ರತಿಭಟನೆ ನಡೆಸಲಿದ್ದಾರೆ. ಟೌನ್‌ಹಾಲ್‌ನಿಂದ ಫ್ರೀಡಂಪಾರ್ಕ್ ವರೆಗೆ ಕರವೇ ರ‍್ಯಾಲಿ ನಡೆಸಲಿದ್ದಾರೆ. ರ‍್ಯಾಲಿ ಸಾಗುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಗಳಿವೆ.

ಮಿಂಟೋ ಆಸ್ಪತ್ರೆ ವೈದ್ಯರಿಂದ ಮುಷ್ಕರ

ಮಿಂಟೋ ಆಸ್ಪತ್ರೆ ವೈದ್ಯರಿಂದ ಮುಷ್ಕರ

ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಿಂಟೋ ಆಸ್ಪತ್ರೆಯ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಗಲಾಟೆ ಮಾಡಿದ ಕರವೇ ಕಾರ್ಯಕರ್ತರ ವಿರುದ್ಧ ಕ್ರಮ ಜರುಗಿಸಬೇಕು. ಹಲ್ಲೆ ಎಸಗಿದ ಅಶ್ವಿನಿ ಗೌಡ ಅವರನ್ನು ಬಂಧಿಸಬೇಕು ಎಂಬುದು ವೈದ್ಯರು ಆಗ್ರಹವಾಗಿದೆ.

ಅಶ್ವತ್ಥ ನಾರಾಯಣ ಸಂಧಾನಕ್ಕೂ ಒಪ್ಪಿಗೆ ಇಲ್ಲ

ಅಶ್ವತ್ಥ ನಾರಾಯಣ ಸಂಧಾನಕ್ಕೂ ಒಪ್ಪಿಗೆ ಇಲ್ಲ

ಡಿಸಿಎಂ ಅಶ್ವಥ್ ನಾರಾಯಣ ಅವರ ಸಂಧಾನಕ್ಕೂ ವೈದ್ಯರು ಒಪ್ಪಿಲ್ಲ. ಇದೀಗ ರಾಜ್ಯವ್ಯಾಪಿ ಪ್ರತಿಭಟನೆಗೆ ಮುಂದಾಗಿದ್ದು ಇಂದು ಒಪಿಡಿ ಬಂದ್ ಮಾಡಿದ್ದಾರೆ. ಈ ಮಧ್ಯೆ ಕಣ್ಣು ಕಳೆದುಕೊಂಡವರಿಗೆ 3 ಲಕ್ಷ ಪರಿಹಾರ ಘೋಷಿಸಿರುವ ಅಶ್ವಥ್ ನಾರಾಯಣ, ದೃಷ್ಟಿ ದೋಷ ಇರುವವರಿಗೆ ಸರ್ಕಾರದಿಂದಲೇ ಚಿಕಿತ್ಸೆ ನೀಡುತ್ತೇವೆ ಅಂದಿದ್ದಾರೆ. ಆಸ್ಪತ್ರೆಯಲ್ಲಿ ಹೆಚ್ಚಿನ ಸಿಸಿಟಿವಿ ಅಳವಡಿಕೆ, ವೈದ್ಯರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಕರ್ನಾಟಕ ಭದ್ರತಾ ಪಡೆಗಳಿಂದ ಭದ್ರತೆ ನೀಡಲು ಡಿಸಿಎಂ ಸೂಚಿಸಿದ್ದಾರೆ.

English summary
Government Doctors Strike Today , Hospital service to be hit across the Karnataka, doctor demand action against Karnataka Rakshana Vedike Members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X