• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಡಿ ಚಂದನದಿಂದ ಸೆನ್ಸಾರ್: ಸಿದ್ದರಾಮಯ್ಯ ಆರೋಪ

|

ಬೆಂಗಳೂರು, ಅಕ್ಟೋಬರ್ 12: ವಿಧಾನಸಭಾ ಕಲಾಪದಲ್ಲಿ ಪಾಲ್ಗೊಂಡ ಆಡಳಿತ ಪಕ್ಷದ ಸದಸ್ಯರು, ಸರ್ಕಾರದ ವೈಫಲ್ಯದ ಬಗ್ಗೆ ಆಡಿದ ಮಾತುಗಳು ಮತ್ತು ಅವರ ಮುಖಗಳನ್ನು ಸರ್ಕಾರಿ ಕೃಪಾಪೋಷಿತ ಡಿಡಿ ಚಂದನ ಸೆನ್ಸಾರ್ ಮಾಡಿ ಬಿತ್ತರಿಸುತ್ತಿರುವುದು ಖಂಡನೀಯ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು , ವಿರೋಧಪಕ್ಷಗಳ ದನಿಯನ್ನು ದಮನಿಸಿ ಆಡಳಿತ ಪಕ್ಷಕ್ಕೆ ನೆರವಾಗುವ ಉದ್ದೇಶದಿಂದಲೇ ಸ್ಪೀಕರ್ ಅವರು ಟಿವಿ ಚಾನೆಲ‌್‌ಗಳ ಕ್ಯಾಮೆರಾಗಳಿಗೆ ನಿರ್ಬಂಧ ಹೇರಿರುವುದು ಕಳೆದೆರಡು ದಿನಗಳ ಕಲಾಪದಿಂದ ಸ್ಪಷ್ಟವಾಗಿದೆ ಎಂದಿದ್ದಾರೆ.

ಆಡಳಿತ ಪಕ್ಷದ ನಾಯಕರೇ ಸರ್ಕಾರದ ವಿರುದ್ಧ ಮಾತನಾಡಿದರೂ ಕೂಡ 'ಚಂದನ'ವಾಹಿನಿ ಅದನ್ನು ಹೈ ಲೈಟ್ ಮಾಡಿಲ್ಲ, ಅಷ್ಟೇ ಅಲ್ಲದೆ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಮಾತನಾಡುತ್ತಿರುವ ಸಂದರ್ಭದಲ್ಲಿ ನಾಯಕರ ಮೇಲೆ ಕ್ಯಾಮರಾ ಫೋಕಸ್ ಮಾಡಿರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕೇಂದ್ರದಿಂದ ಕೇಳುತ್ತಿರುವುದು ಭಿಕ್ಷೆ ಅಲ್ಲ

ಕೇಂದ್ರದಿಂದ ಕೇಳುತ್ತಿರುವುದು ಭಿಕ್ಷೆ ಅಲ್ಲ

ಕೇಂದ್ರದಿಂದ ಕೇಳುತ್ತಿರುವುದು ಭಿಕ್ಷೆ ಅಲ್ಲ, ರೂ.35,160 ಕೋಟಿ ನಷ್ಟಕ್ಕೆNDRF ನಿಯಮ ಪ್ರಕಾರವೇ ರೂ.9891ಕೋಟಿ ಮಧ್ಯಂತರ ಪರಿಹಾರ ಕೊಡಬೇಕಿತ್ತು, ಕೊಟ್ಟಿರುವುದು ರೂ.1200 ಕೋಟಿ. ಇದನ್ನೇ ಮೋದಿಯವರನ್ನು ಕೇಳಿದರೆ ಆಕಾಶ ನೋಡಿ ಉಗುಳಿದರೆ ನಿಮ್ಮ ಮುಖಕ್ಕೆ ಬೀಳುತ್ತೆ ಎಂದು ಹೇಳ್ತೀರಿ ಎಂದು ಗುಡುಗಿದ್ದಾರೆ.

21 ಸಾವಿರ ಕಿ.ಮೀ ರಸ್ತೆ ಕೊಚ್ಚಿ ಹೋಗಿವೆ

21 ಸಾವಿರ ಕಿ.ಮೀ ರಸ್ತೆ ಕೊಚ್ಚಿ ಹೋಗಿವೆ

21,000 ಕಿ.ಮೀ.ರಸ್ತೆ ಕೊಚ್ಚಿಹೋಗಿದವೆ, ಇದಕ್ಕೆ ಎನ್‌ಡಿಆರ್‌ಎಫ್ ಹಣ ಬಳಸಲಿಕ್ಕೆ ಆಗೊಲ್ಲ. ಲೋಕೋಪಯೋಗಿ ಇಲಾಖೆಯೇ ಇದನ್ನು ದುರಸ್ತಿ ಮಾಡಬೇಕು. ಆದ್ಯತೆ ಮೇಲೆ ಶಾಲಾ ಕಟ್ಟಡಗಳನ್ನು ತಕ್ಷಣ ದುರಸ್ತಿಗೊಳಿಸಿ,ಪಠ್ಯಪುಸ್ತಕಗಳನ್ನು ಒದಗಿಸಿ ಶಾಲೆ ಶುರು ಮಾಡಬೇಕು.

ಸಿದ್ದರಾಮಯ್ಯ ಒತ್ತಾಯವೇನು?

ಸಿದ್ದರಾಮಯ್ಯ ಒತ್ತಾಯವೇನು?

ಪ್ರವಾಹದಿಂದ ಶೇ. 25ಕ್ಕಿಂತ ಹೆಚ್ಚು ಹಾನಿಯಾದ ಮನೆಗಳಿಗೆ ರೂ.5 ಲಕ್ಷ, ಪೂರ್ಣ ನಾಶವಾದ ಮನೆಗಳಿಗೆ ರೂ.10 ಲಕ್ಷ ಪರಿಹಾರ ನೀಡಬೇಕು. ಪೂರ್ಣ ಮತ್ತು ಭಾಗಶ: ಮುಳುಗಡೆಯಾಗಿರುವ 1000 ಹಳ್ಳಿಗಳನ್ನು ಸ್ಥಳಾಂತರಿಬೇಕು.‌ ಕೂಡು ಕುಟುಂಬದಲ್ಲಿರುವ ಅಣ್ಣ-ತಮ್ಮಂದಿರ ಕುಟುಂಬಗಳಿಗೆ ಪ್ರತ್ಯೇಕ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಖಜಾನೆ ಲೂಟಿಯಾಗಿದೆ ಅಂದರೇನು?

ಖಜಾನೆ ಲೂಟಿಯಾಗಿದೆ ಅಂದರೇನು?

ಖಜಾನೆ ಲೂಟಿ ಆಗಿದೆ ಎಂದರೇನು? ಯಾರೋ ಚೀಲ ತಕ್ಕೊಂಡು ಬಂದು ಹಣ ತುಂಬಿಸ್ಕೊಂಡು ಹೋಗೋದಾ? ಎಂತಹ ಮಾತು? ಆರ್ಥಿಕವಾಗಿ ಸದೃಡವಾಗಿರುವ ದೇಶದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಒಂದು. ಈ ಬಾರಿಯ ಬಜೆಟ್ ಗಾತ್ರ 2.30 ಲಕ್ಷ ಕೋಟಿ. ಹಣದ ಕೊರತೆ ಖಂಡಿತ ಇಲ್ಲ, ಜನರಿಗೆ ಸ್ಪಂದಿಸುವ ಮನಸ್ಸು ಸರ್ಕಾರಕ್ಕಿಲ್ಲ ಎಂದಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ನೆರೆ ಶುರುವಾಗಿತ್ತು. ರೂ.25,160ಕೋಟಿ ನಷ್ಟ ಎಂದು ಕೇಂದ್ರಕ್ಕೆ ವರದಿ ಸಲ್ಲಿಸಿದ್ದು ಸೆ.9ರಂದು. ರೂ.52,000 ಕೋಟಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. 2 ತಿಂಗಳ ನಂತರ ಕೇಂದ್ರ ಸರ್ಕಾರ ರೂ.1,200 ಪರಿಹಾರ ನೀಡಿದೆ. ಇದು ಬಿಜೆಪಿ ಸರ್ಕಾರದ ಜನಪರ ಕಾಳಜಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Opposition Leader Siddaramaiah Said that The latest media blockade by speaker seems to be in the direction to mute the opinions of Opposition. Live relay of Assembly by DDChandanaNews was partial towards ruling party members. Most of the times, when opposition speaks, the camera is not focused on the one who speaks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more