ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ್ವರವಿದ್ರೆ ಅಪಾರ್ಟ್‌ಮೆಂಟ್ ಒಳಗೆ ಬರಬೇಡಿ: ನಿವಾಸಿ ಅಸಮಾಧಾನ

|
Google Oneindia Kannada News

ಬೆಂಗಳೂರು, ಏಪ್ರಿಲ್ 30: 'ಜ್ವರ ಇದ್ದರೆ ಅಪಾರ್ಟ್‌ಮೆಂಟ್ ಒಳಗೆ ಬರಬೇಡಿ' ಎಂದು ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ನಿಯಮ ಹಾಕಲಾಗಿದೆ. ಇದರಿಂದ ನಿವಾಸಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್‌ನಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ಆತಂಕ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಿರುವ ಕಾರಣ ಆತಂಕ ಸಹಜ ಕೂಡ. ಆದರೆ, ಬೆಂಗಳೂರು ಜಕ್ಕೂರಿನಲ್ಲಿರುವ ಅಪಾರ್ಟ್‌ಮೆಂಟ್‌ವೊಂದು ಕೊರೊನಾ ಹಿನ್ನಲೆಯಲ್ಲಿ ಹೊಸ ಆದೇಶವನ್ನು ಹೊರಡಿಸಿದೆ. ನಿವಾಸಿಗಳಿಗೆ ಜ್ವರ ಇದ್ದರೆ ಒಳಗೆ ಪ್ರವೇಶ ನೀಡುವುದಿಲ್ಲ ಎಂದಿದೆ.

ನಿಮ್ಮ ದಮ್ಮಯ್ಯ.. ಯಾರಾದರೂ ಸಹಾಯ ಮಾಡಿ.. ಅಪಾರ್ಟ್ಮೆಂಟ್ ನಿವಾಸಿಗಳ ಅಳಲುನಿಮ್ಮ ದಮ್ಮಯ್ಯ.. ಯಾರಾದರೂ ಸಹಾಯ ಮಾಡಿ.. ಅಪಾರ್ಟ್ಮೆಂಟ್ ನಿವಾಸಿಗಳ ಅಳಲು

ಅಪಾರ್ಟ್‌ಮೆಂಟ್‌ನ ವೆಲ್ಫೇರ್ ಅಸೋಸಿಯೇಷನ್ ನಿವಾಸಿಗಳಿಗೆ ಸಂದೇಶ ಕಳುಹಿಸಿ, ಈ ಆದೇಶವನ್ನು ತಿಳಿಸಿದೆ. ಯಾವುದೇ ನಿವಾಸಿಯ ದೇಹದ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗಿದ್ದರೆ, ಕೋವಿಡ್ ಪರೀಕ್ಷೆ ಮಾಡಿಸಿ ಪ್ರಮಾಣಪತ್ರ ತರಬೇಕು ಎಂದಿದೆ. ಇಲ್ಲದಿದ್ದರೆ ಒಳಗೆ ಬಿಡಬೇಡಿ ಎಂದು ಸೂಚನೆ ನೀಡಿದೆ.

A Apartment In Bangalore Not Allowing Inside If Residents Suffering From Fever

ಈ ಬಗ್ಗೆ ಮಾತನಾಡಿರುವ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಅಲೋಕ್ ಜಿ ''ಕೊರೋನಾ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ನಾವು ಈ ರೀತಿ ಕ್ರಮ ಕೈಗೊಂಡಿದ್ದೇವೆ. ಒಬ್ಬರಿಗೆ ಸೊಂಕು ಬಂದರೂ, ಎಲ್ಲಾ 238 ಕುಟುಂಬಗಳನ್ನು ಕ್ವಾರಂಟೈನ್ ಮಾಡುವುದಿಲ್ಲ. ಎಲ್ಲರ ರಕ್ಷಣೆಯೇ ಇದರ ಹಿಂದಿನ ಉದ್ದೇಶ'' ಎಂದಿದ್ದಾರೆ.

ಈ ಆದೇಶದ ಬಗ್ಗೆ ಕುಸುಮ ಎಂಬ ನಿವಾಸಿ ಅಸಮಾಧಾನ ಹೊರ ಹಾಕಿದ್ದಾರೆ. ಕೊರೊನಾ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಸರಿ. ಆದರೆ, ''ಸಾಮಾನ್ಯ ಜ್ವರ ಬಂದವರು ಹೋಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಇನ್ನಷ್ಟು ಒತ್ತಡ ಹೇರಿದಂತಾಗುತ್ತದೆ.'' ಎಂದಿದ್ದಾರೆ.

''ಕೋವಿಡ್ ವರದಿ ಬರಲು 48 ಗಂಟೆಗಳು ಬೇಕಾಗುತ್ತದೆ. ಯಾರಾದರೂ ಹುಷಾರಿಲ್ಲದಿದ್ದರೆ ಮೊದಲಿಗೆ ಮನೆಗೆ ಕಳುಹಿಸುತ್ತಾರೆ, ಆದರೆ ಇಲ್ಲಿ ನಮ್ಮ ನಮ್ಮ ಮನೆಗಳಿಗೆ ಹೋಗಲು ಬಿಡುವುದಿಲ್ಲ.'' ಎಂದು ನಿವಾಸಿ ಕುಸುಮ ಬೇಸರ ಹೊರಹಾಕಿದ್ದಾರೆ.

English summary
A apartment in Bangalore not allowing inside if residents suffering from fever.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X