ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 18 ಅಡಿ ಗಾಂಧಿ ಪ್ರತಿಮೆ ಅನಾವರಣ

By Rajendra
|
Google Oneindia Kannada News

ಬೆಂಗಳೂರು, ಫೆ.3: ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ದೈತ್ಯ ಬ್ರಿಗೇಡ್ ಗ್ರೂಪ್ ವರ್ಷಗಳಿಂದ ಸಮುದಾಯ ನಿರ್ಮಾಣದತ್ತ ಅರ್ಥಪೂರ್ಣ ಕೊಡುಗೆಗಳನ್ನು ನೀಡುತ್ತಿದೆ. ಮತ್ತು ಹೊಸ ಕೊಡುಗೆಯಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ಬ್ರಿಗೇಡ್ ಗೇಟ್ ವೇ ಆವರಣದಲ್ಲಿ ಸ್ಥಾಪಿಸಿದೆ.

ಮಹಾತ್ಮ ಗಾಂಧಿ ಮೊಮ್ಮಗ ಹಾಗೂ 2004ರಿಂದ 2009ರ ತನಕ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಗೋಪಾಲಕೃಷ್ಣ ಗಾಂಧಿ ಅವರು ಮಹಾತ್ಮ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಪದ್ಮ ವಿಭೂಷಣ ಡಾ.ಕೆ. ಕಸ್ತೂರಿರಂಗನ್ ಹಾಗೂ ಎಂ.ಆರ್.ಜೈಶಂಕರ್, ಬ್ರಿಗೇಡ್ ಗ್ರೂಪ್ ಸಿಎಂಡಿ ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Gopalkrishna Gandhi Unveiled Gandhiji Statue at Brigade Gateway

ಇಂತಹ ಒಂದು ಪ್ರತಿಮೆಯ ಸ್ಥಾಪನೆಗೆ ಬ್ರಿಗೇಡ್ ಗೇಟ್ ವೇ ಪ್ರತಿ ವರ್ಷ 20 ದಶಲಕ್ಷ ಮಂದಿ ಪ್ರವಾಸಿಗರನ್ನು ಸೆಳೆಯುವಂತಹ ನಗರದ ಕೇಂದ್ರ ಸ್ಥಳವನ್ನು ಆಯ್ಕೆ ಮಾಡಿಕೊಂಡಿದೆ. ವರ್ಲ್ಡ್ ಟ್ರೇಡ್ ಸೆಂಟರ್ ಬೆಂಗಳೂರು, ಶೆರಟಾನ್ ಬೆಂಗಳೂರು ಹೋಟೆಲ್ ಹಾಗೂ ಒರಾಯನ್ ಮಾಲ್ ಬ್ರಿಗೇಡ್ ಗೇಟ್ ವೇಯ ಇದೇ ಆವರಣದಲ್ಲಿದ್ದು ದೇಶ ಹಾಗೂ ವಿದೇಶಾದ್ಯಂತದ ಸಂದರ್ಶಕರನ್ನು ಕಾಣುತ್ತದೆ.

18 ಅಡಿ ಎತ್ತರದ ಈ ಪ್ರತಿಮೆಯು ಈ ಎಲ್ಲಾ ವಯೋಮಾನದ ಸಂದರ್ಶಕರಿಗೆ ಸ್ವತಂತ್ರ ಭಾರತಕ್ಕಾಗಿ ಮಹಾತ್ಮ ಗಾಂಧಿ ಅವರ ನಾಯಕತ್ವ ಹಾಗೂ ತ್ಯಾಗವನ್ನು ನೆನಪಿಸುತ್ತದೆ, ಅವರ ಅಹಿಂಸೆ ತತ್ವ ಇಂದಿಗೂ ಪ್ರಸ್ತುತ ಎಂಬುದನ್ನು ಸಾರುತ್ತದೆ.

ಪ್ರತಿಮೆ ಅನಾವರಣ ಕುರಿತು ಮಾತನಾಡಿದ ಎಂ.ಆರ್. ಜೈಶಂಕರ್, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಬ್ರಿಗೇಡ್ ಗ್ರೂಪ್, "ಬ್ರಿಗೇಡ್ ಗೇಟ್ ವೇ ಆವರಣದಲ್ಲಿ ಮಹಾತ್ಮ ಗಾಂಧಿ ಅವರ ಸ್ಥಾಪನೆಯು ಕೋಟ್ಯಂತರ ಭಾರತೀಯರನ್ನು ಒಂದುಗೂಡಿಸಿದ ಮತ್ತು ಅಸಾಧ್ಯವನ್ನು ಸಾಧಿಸುವಲ್ಲಿ ಮುನ್ನಡೆಸಿದ ಮಹಾತ್ಮ ಗಾಂಧೀಜಿ ಅವರಿಗೆ ನಾವು ಸಲ್ಲಿಸುತ್ತಿರುವ ವಿನಮ್ರ ಗೌರವವಾಗಿದೆ..."

Gopalkrishna Gandhi Unveiled Gandhiji Statue at Brigade Gateway

"ಹಿಂಸೆ ಹಾಗೂ ದ್ವೇಷವು ವಿಶ್ವವನ್ನು ನಡುಗಿಸುತ್ತಿರುವ ಈ ಸಂದರ್ಭವು, ಮಹಾತ್ಮ ಗಾಂಧಿ ಅವರು ಬೋಧಿಸಿದ ಹಾಗೂ ಆಚರಿಸಿದ ಅಹಿಂಸೆ ಮತ್ತು ಸ್ವೀಕಾರ್ಹತೆ ತತ್ವಗಳನ್ನು ನಾವು ಅನುಸರಿಸಲು ಸೂಕ್ತ ಸಮಯ ಎಂಬ ಭಾವನೆ ನಮಗಿದೆ'' ಎಂದು ಹೇಳಿದರು.

ಬ್ರಿಗೇಡ್ ಗ್ರೂಪ್ ಗಾಗಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ವಿಶೇಷವಾಗಿ ಕೆತ್ತಲಾಗಿದೆ. ಈ ಪ್ರತಿಮೆಯನ್ನು ಪ್ರಸಿದ್ಧ ಶಿಲ್ಪಿ ಕಲಬುರ್ಗಿಯ ಮಾನಯ್ಯ ಎನ್. ಬಡಿಗೇರ್ ಅವರು 6 ಮಂದಿ ಯುವ ಶಿಲ್ಪಿಗಳು ಹಾಗೂ 25 ಜನರ ಕಲಾವಿದರ ತಂಡದ ಸಹಾಯದೊಂದಿಗೆ ನಿರ್ಮಿಸಿದ್ದಾರೆ.

ಪ್ರತಿಮೆಯ ನಿರ್ಮಾಣಕ್ಕೆ ಒಂದು ವರ್ಷ ತಗುಲಿದೆ. ಹಿತ್ತಾಳೆ ಮತ್ತು ತಾಮ್ರದ ಮಿಶ್ರಲೋಹದಿಂದ ತಯಾರಿಸಲಾಗಿದ್ದು ಇದರ ತೂಕ 1000 ಕೆ.ಜಿಯಷ್ಟಿದೆ. 4. 6 ಅಡಿ ಎತ್ತರದ ಗ್ರಾನೈಟ್ ಪೀಠದ ಮೇಲೆ 11 ಅಡಿಯ ಪ್ರತಿಮೆ ಸ್ಥಾಪಿಸಲಾಗಿದ್ದು, ಒಟ್ಟಾರೆ 17 ಅಡಿ ಎತ್ತರವಿದೆ. (ಒನ್ಇಂಡಿಯಾ ಕನ್ನಡ)

English summary
Gopalkrishna Gandhi ,the grandson of Mahatma Gandhi and Governor of West Bengal from 2004 to 2009 unveiled an iconic bronze statue of the ‘Father of the Nation’ Mahatma Gandhi, at the Brigade Gateway campus Bengaluru in the presence of Padma Vibhushan Dr. K Kasturirangan and Mr. M.R. Jaishankar, CMD of Brigade Group .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X