ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೌಡಿ ಶೀಟರ್ ಲಿಸ್ಟ್‌ನಲ್ಲಿತ್ತು ಮಂತ್ರಿಗಳ ಫೋಟೊ, ಇದೀಗ ಫೋಟೊ ತೆಗೆದ ಪೊಲೀಸರು!

|
Google Oneindia Kannada News

ಬೆಂಗಳೂರು, ಫೆ. 29: ರೌಡಿ ಶೀಟರ್‌ಗಳ ಫೋಟೊಗಳನ್ನು LED ಪರದೆಗಳ ಮೇಲೆ ಬೆಂಗಳೂರು ಪೊಲೀಸರು ಪ್ರದರ್ಶನ ಮಾಡುತ್ತಿದ್ದಾರೆ. ಮಾಜಿ ರೌಡಿ ಶೀಟರ್ ಆಗಿದ್ದರೂ ರೌಡಿ ಶೀಟರ್ ಫೋಟೊ ಅಲ್ಬಮ್‌ನಿಂದ ಹಾಲಿ ಮಂತ್ರಿಯೊಬ್ಬರ ಫೋಟೊವನ್ನು ಸಿಸಿಬಿ ತೆಗೆದಿರಲಿಲ್ಲ. ಇದೀಗ ಆ ಶಾಸಕರು ಮಂತ್ರಿ ಆಗುತ್ತಿದ್ದಂತೆಯೆ ರೌಡಿ ಶೀಟರ್‌ಗಳೊಂದಿಗಿದ್ದ ಅವರ ಫೋಟೊವನ್ನು ಅಲ್ಬಮ್‌ನಿಂದ ತೆಗೆಯಲಾಗಿದೆ.

ಹಿಂದೆ ರೌಡಿ ಶೀಟರ್‌ಲಿಸ್ಟ್‌ನಲ್ಲಿ ಸೇರಿಕೊಂಡಿದ್ದ ಆಹಾರ ಸಚಿವ ಗೋಪಾಲಯ್ಯ ಅವರ ಫೋಟೊವನ್ನು ಪೊಲೀಸರು ರೌಡಿ ಶೀಟರ್‌ಲಿಸ್ಟ್‌ನಿಂದ ತೆಗೆದಿರಲಿಲ್ಲ. ಮೂರು ಬಾರಿ ಶಾಸಕರಾಗಿದ್ದರೂ ಅವರ ಫೋಟೊವನ್ನು ಅಲ್ಬಮ್‌ನಿಂದ ತೆಗೆಯಲು ಸಿಸಿಬಿ ಪೊಲೀಸರು ಮುಂದಾಗಿರಲಿಲ್ಲ.

'ಇದೇನು ಗೋಪಾಲಪ್ಪನ ಛತ್ರವೇ?'ಎಂದು ಪ್ರಶ್ನಿಸಿದ ಸಚಿವ ಗೋಪಾಲಯ್ಯ''ಇದೇನು ಗೋಪಾಲಪ್ಪನ ಛತ್ರವೇ?'ಎಂದು ಪ್ರಶ್ನಿಸಿದ ಸಚಿವ ಗೋಪಾಲಯ್ಯ'

ಇದೀಗ ಗೋಪಾಲಯ್ಯ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆಯೆ ಅವರ ಫೋಟೊವನ್ನು ಚಾಮರಾಜಪೇಟೆಯ ಸಿಸಿಬಿ ಮುಖ್ಯಕಚೇರಿಯ ಪ್ರದರ್ಶನ ಫಲಕದಿಂದ ತೆಗದು ಹಾಕಲಾಗಿದೆ.

LED ಪರದೆ ಮೇಲೆ ರೌಡಿಶೀಟರ್‌ಗಳ ಫೋಟೊ ಪ್ರದರ್ಶನ

LED ಪರದೆ ಮೇಲೆ ರೌಡಿಶೀಟರ್‌ಗಳ ಫೋಟೊ ಪ್ರದರ್ಶನ

ರೌಡಿ ಶೀಟರ್‌ಗಳ ಫೊಟೊಗಳನ್ನು ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಇದೀಗ ಅಲ್ಬಮ್‌ ಜೊತೆಗೆ ರೌಡಿ ಶೀಟರ್‌ಗಳ ಫೋಟೊವನ್ನು ಎಲ್‌ಇಡಿ ಪರದೆ ಮೇಲೆ ಪ್ರದರ್ಶನ ಮಾಡಲಾಗುತ್ತಿದೆ. ಜೊತೆಗೆ ಹೆಸರು ಹಾಗೂ ಇತರವ ವಿರಗಳನ್ನು, ಅಲಿಯಾಸ್ ಹೆಸರನ್ನು ಕೂಡ ಪ್ರದರ್ಶನ ಮಾಡಲಾಗುತ್ತದೆ. ರೌಡಿಗಳ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ಕೊಡುವುದು ಸೇರಿದಂತೆ ರೌಡಿಗಳನ್ನು ಸಾರ್ವಜನಿಕರು ಗುರುತಿಸಲು ಸಹಾಯವಾಗಲಿ ಎಂದು ಎಲ್‌ಇಡಿ ಪ್ರದರ್ಶನ ಆರಂಭಿಸಲಾಗಿದೆ.

ಬೆಂಗಳೂರು ಪಶ್ಚಿಮ ವಿಭಾಗದ ರೌಡಿ ಶೀಟರ್‌ಫೊಟೊಗಳು

ಬೆಂಗಳೂರು ಪಶ್ಚಿಮ ವಿಭಾಗದ ರೌಡಿ ಶೀಟರ್‌ಫೊಟೊಗಳು

ಬೆಂಗಳೂರು ಪಶ್ಚಿಮ ವಿಭಾಗದ ರೌಡಿ ಶೀಟರ್‌ಗಳ ಫೊಟೊ ಅಲ್ಬಮ್‌ನಲ್ಲಿ ಸಚಿವ ಗೋಪಾಲಯ್ಯ ಅವರ ಫೋಟೊ ಸೇರಿದಲಾಗಿತ್ತು. ಇದೀಗ ಅವರ ಫೋಟೊವನ್ನು ಅಲಲ್ಇಂದ ತೆಗೆಯಲಾಗಿದೆ. ಜೇಡರಹಳ್ಳಿ ಕೃಷ್ಣಪ್ಪ, ಮುಲಾಮ, ಹೆಬ್ಬೆಟ್ಟು ಮಂಜ, ದರಣಿ ಮತ್ತು ಬಸವ, ರಾಮ ಸೇರಿದಂತೆ ಹಲವು ರೌಡಿಗಳ ಫೋಟೊಗಳೊಂದಿಗೆ ಪ್ರದರ್ಶನ ಮಾಡಲಾಗುತ್ತಿತ್ತು.

ಕೆ. ಗೋಪಾಲಯ್ಯ ವಿರುದ್ಧ ಬಿಜೆಪಿ ಹೈಕಮಾಂಡ್‌ಗೆ ದೂರುಕೆ. ಗೋಪಾಲಯ್ಯ ವಿರುದ್ಧ ಬಿಜೆಪಿ ಹೈಕಮಾಂಡ್‌ಗೆ ದೂರು

ಹಲವು ರಂಗಗಳ ಪ್ರಭಾವಿಗಳ ಹೆಸರು ಇವೆ ಲಿಸ್ಟ್‌ನಲ್ಲಿ

ಹಲವು ರಂಗಗಳ ಪ್ರಭಾವಿಗಳ ಹೆಸರು ಇವೆ ಲಿಸ್ಟ್‌ನಲ್ಲಿ

ಚಾಮರಾಜಪೇಟೆಯ ಸಿಸಿಬಿ ಮುಖ್ಯ ಕಚೇರಿಯಲ್ಲಿ ಈಗಲೂ ಮಾಜಿ ಡಾನ್ ಮುತ್ತಪ್ಪ ರೈ, ಸಾಮಾಜಿಕ ಹೋರಾಟಗಾರ ಅಗ್ನಿ ಶ್ರೀಧರ್, ಬಚ್ಚನ್ ಸೇರಿದಂತೆ ಹಲವರ ಫೋಟೋಗಳು ಈಗಲೂ ಚಾಮರಾಜಪೇಟೆಯ ಸಿಸಿಬಿ ಕಚೇರಿಯ ರೌಟಿ ಶೀಟರ್‌ಗಳ ಫೋಟೊ ಅಲ್ಬಮ್‌ನಲ್ಲಿವೆ. ಇವರ ಫೊಟೊಗಳೊಂದಿಗೆ ಸಚಿವರವ ಫೋಟೊ ಕೂಡ ಇತ್ತು.

ರೌಡಿ ಶೀಟರ್ ಹೆಸರು ಹೇಗೆ ತೆರೆಯುತ್ತಾರೆ ಪೋಲಿಸರು?

ರೌಡಿ ಶೀಟರ್ ಹೆಸರು ಹೇಗೆ ತೆರೆಯುತ್ತಾರೆ ಪೋಲಿಸರು?

ಎ, ಬಿ ಹಾಗೂ ಸಿ ಹಂತಗಳಲ್ಲಿ ರೌಡಿ ಶೀಟರ್‌ಗಳನ್ನು ಪೊಲೀಸ್ ಮ್ಯಾನ್ಯುವಲ್ ಪ್ರಕಾರ ವಿಂಗಡಿಸಲಾಗಿರುತ್ತದೆ. ಸ್ಥಳೀಯವಾಗಿ ಅಪರಾಧ ಚಟುವಟಿಕೆಗಳಲ್ಲಿ ಪದೇಪದೇ ಕಾಣಿಸಿಕೊಳ್ಳುವವರನ್ನು 'ಎ' ಟೈಪ್ ಸೇರಿಸಲಾಗುತ್ತದೆ. ಬೇರೆ ಸ್ಥಳಗಳಿಂದ ಬಂದು ಅಪರಾಧ ಪ್ರಕರಣಗಳನ್ನು ಮಾಡುವವರನ್ನು ಬಿ ಟೈಪ್‌ ಗುಂಪಿನಲ್ಲಿ ಸೇರಿಸಲಾಗುತ್ತದೆ. ಇನ್ನು ಆಗತಾನೇ ಅಪರಾಧ ಲೋಕದಲ್ಲಿ ಕಾಣಿಸಿಕೊಳ್ಳುತ್ತಿರುವವರನ್ನು ಬಡ್ಡಿಂಗ್ ಕ್ರಿಮಿನಲ್ ಎಂದು ಗುರುತಿಸಿ ಸಿ ಗುಂಪಿಗೆ ಅವರನ್ನು ಸೇರಿಸಲಾಗುತ್ತದೆ. ಹಲವು ವರ್ಷಗಳ ಬಳಿಕ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದವರನ್ನು ರೌಡಿ ಶೀಟರ್ ಲಿಸ್ಟ್‌ನಿಂದ ಕೈಬಿಡಲಾಗುತ್ತದೆ.

English summary
Gopalaiah's photo was removed from the rowdy sheeter album of Chamarajapet's CCB headquarters after he became the minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X