ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರಗಳ್ಳರ ವಿರುದ್ಧ ಗೂಂಡಾ ಕಾಯ್ದೆ : ಎಂಎನ್ ರೆಡ್ಡಿ

|
Google Oneindia Kannada News

ಬೆಂಗಳೂರು, ಜೂ.23 : ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ತಪ್ಪಿಸಲು ಗೂಂಡಾ ಕಾಯ್ದೆ ಜಾರಿಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ. ಸರಗಳ್ಳರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹೇಳಿದರು.

ಮಂಗಳವಾರ ಆಗ್ನೇಯ ವಿಭಾಗದ ಪೊಲೀಸರು ಕಳೆದ 5 ತಿಂಗಳಿನಿಂದ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿ ವಶಪಡಿಸಿಕೊಂಡ ಸುಮಾರು 7ಕೋಟಿ ರೂ. ಮೌಲ್ಯದ ವಸ್ತುಗಳನ್ನು ವೀಕ್ಷಿಸಿ ಮಾತನಾಡಿದ ಪೊಲೀಸ್ ಆಯುಕ್ತರು, ಸರಗಳ್ಳರ ವಿರುದ್ಧ ಶೀಘ್ರದಲ್ಲೇ ಗೂಂಡಾ ಕಾಯ್ದೆ ಜಾರಿಗೊಳಿಸುತ್ತೇವೆ ಎಂದರು. [1 ಗಂಟೆಯಲ್ಲಿ 10 ಕಡೆ ಸರಗಳ್ಳತನ]

mn reddi

ಸರಗಳ್ಳರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಎಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಲಾಗಿದೆ. ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ ಎಂದು ಹೇಳಿದರು. ಸ್ಥಳೀಯರು ಮತ್ತು ಹೊರ ರಾಜ್ಯಗಳಿಂದ ಬಂದು ಸರಗಳ್ಳತನ ಮಾಡುವವರ ವಿರುದ್ಧ ಪೊಲೀಸರು ನಿಗಾ ವಹಿಸಿದ್ದಾರೆ ಎಂದು ತಿಳಿಸಿದರು. [ಸರಗಳ್ಳತನ: ಸಿಸಿಬಿ ಪೊಲೀಸರಿಗೆ ಮಹತ್ವದ ಸುಳಿವು]

ಸರಗಳ್ಳತನ ಹೆಚ್ಚಾಗಿದೆ : ಜೂನ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸರಗಳ್ಳತನ ಹೆಚ್ಚಾಗಿದೆ. ಜೂನ್ 11ರ ಗುರುವಾರ 1 ಗಂಟೆಯ ಅವಧಿಯಲ್ಲಿ 10 ಕಡೆ ಸರಗಳ್ಳತನ ನಡೆದಿತ್ತು. ಜೂನ್ 12ರಂದು 4 ಕಡೆ ಸರಗಳ್ಳತನ ವಾಗಿತ್ತು. ಪಲ್ಸರ್ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯ ವೆಸಗುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. [ಏನಿದು ಗೂಂಡಾ ಕಾಯ್ದೆ?]

ಬೆಂಗಳೂರಿನಲ್ಲಿ ನಡೆಯುತ್ತಿರುವ ಸರಗಳ್ಳತನದ ಹಿಂದೆ ಇರಾನಿ ಗ್ಯಾಂಗ್ ಕೈವಾಡವಿದೆ ಎಂದು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಳಗಾವಿಗೆ ತೆರಳಿ ಅಲ್ಲಿನ ಪೊಲೀಸರ ವಶದಲ್ಲಿರುವ ಇರಾನಿ ಗ್ಯಾಂಗ್‌ನ ಸದಸ್ಯ ಮೊಹಮದ್ ಇರಾನಿಯನ್ನು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದರು.

ಅಂದಹಾಗೆ ಮಂಗಳವಾರ ಬೆಂಗಳೂರಿನಲ್ಲಿ ಎರಡು ಕಡೆ ಸರಗಳ್ಳತನ ನಡೆದಿದೆ. ಬನಶಂಕರಿ ಮತ್ತು ಗಂಗಮ್ಮನ ಗುಡಿ ಸಮೀಪ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಸರ ದೋಚಿ ಪರಾರಿಯಾಗಿದ್ದಾರೆ. ಬನಶಂಕರಿ 2ನೇ ಹಂತದಲ್ಲಿ ನೇಹಾ ಎಂಬುವವರ 30 ಗ್ರಾಂ ಚಿನ್ನದ ಸರವನ್ನು ದೋಚಲಾಗಿದೆ.

English summary
Bengaluru police commissioner M.N. Reddi said, we will book chain-snatchers under goonda act, direction regarding this sent to all police stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X