ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಟ್ ಅಂದ್ರೆ ಬಾಯಿ ಚಪ್ಪರಿಸುವ ಕರ್ನಾಟಕದ ಮಂದಿ

By Prasad
|
Google Oneindia Kannada News

ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗ ತಾನು ಮದುವೆಯಾಗಬೇಕಿದ್ದ ಹುಡುಗಿಯನ್ನು ಒಂದು ದಿನ ಬೆಂಗಳೂರಿನಲ್ಲಿದ್ದ ಹೋಟೆಲೊಂದಕ್ಕೆ ಕರೆದುಕೊಂಡು ಹೋಗುತ್ತಾನೆ. ಅದೂಇದೂ ಮಾತನಾಡುತ್ತ, "ಯಾವ ಚಾಟ್ ನಿನಗಿಷ್ಟ?" ಅಂತ ಕೇಳ್ತಾನೆ. ಉಡುಪಿಯ ಹುಡುಗಿ ಕಕ್ಕಾಬಿಕ್ಕಿ! ಆಕೆಗೆ ಚಾಟ್ ಎಂದರೇನೇ ಗೊತ್ತಿಲ್ಲ. 'ಚಾಟ್' ಎಂದರೇನೇ ಗೊತ್ತಿಲ್ಲದ್ದ ಹುಡುಗಿ ನನಗೆ 'ಯೋಗ್ಯಳಲ್ಲ' ಎಂಬ ತೀರ್ಮಾನಕ್ಕೂ ಆ ಹುಡುಗ ಬರುತ್ತಾನೆ.

ಇದು ಸತ್ಯ ಘಟನೆ. ಕೆಲ ವರ್ಷಗಳ ಹಿಂದೆ ತಿನ್ನುವ ವಿಷಯದಲ್ಲಿ 'ಚಾಟ್' ಎಂಬ ಪದ ಬೆಂಗಳೂರನ್ನು ಹೊರತುಪಡಿಸಿದರೆ ಇತರ ಪ್ರದೇಶದವರಿಗೆ ಅಷ್ಟು ಬೇಗನೆ ಅರ್ಥವಾಗುವ ಪದವೂ ಆಗಿರಲಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ ಸಂಗತಿ. ಈಗಂತೂ ಚಾಟ್ ಎಂಬ ಪದ ಸರ್ವಾಂತರ್ಯಾಮಿಯಾಗಿಬಿಟ್ಟಿದೆ. ಬೆಂಗಳೂರಿಗರ ವಿಷಯಕ್ಕೆ ಬಂದರೆ, 'ಚಾಟ್' ಎಂಬ ಪದ ಕೇಳಿದ ಕೂಡಲೆ ಬಾಯಲ್ಲಿ ನೀರೂರಲು ಆರಂಭವಾಗುತ್ತದೆ.

'ಚಾಟ್' ತಿನ್ನುವುದು ಆರೋಗ್ಯಕ್ಕೆ ಎಷ್ಟು ಮಾರಕ ಎಂಬುದು ತಿಳಿದಿದ್ದರೂ ಕರ್ನಾಟಕದ ಜನತೆ ಈ ವಿಷಯದಲ್ಲಿ ತ್ರಿವಿಕ್ರಮ ಸಾಧಿಸಿದ್ದಾರೆ. ಅರ್ಥಾತ್, ಗೂಗಲ್ ನಡೆಸಿದ ಸಮೀಕ್ಷೆಯ ಪ್ರಕಾರ, ಕರ್ನಾಟಕದವರು ತಿಂಡಿ ತಿನಿಸಿನ (ಚಾಟ್) ವಿಷಯದಲ್ಲಿ ಭಾರತದ ಉಳಿದೆಲ್ಲ ರಾಜ್ಯಗಳ ಜನತೆಯನ್ನು ಹಿಂದಿಕ್ಕಿದ್ದಾರೆ. ಇದರರ್ಥ ಅನಾರೋಗ್ಯದ ವಿಷಯದಲ್ಲಿಯೂ ಉಳಿದೆಲ್ಲ ರಾಜ್ಯಗಳಿಗಿಂತ ಕರ್ನಾಟಕದವರು ಮುಂದಿದ್ದಾರೆ!

ಗೂಗಲ್ ಟ್ರೆಂಡ್ಸ್ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸುತ್ತಿರುತ್ತದೆ. ಬೀದಿ ಬದಿಯ ತಿಂಡಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ನಿಂದ ನವೆಂಬರ್ ತಿಂಗಳಲ್ಲಿ ನಡೆಸಿದ ಸರ್ವೆಯಲ್ಲಿ, ಚಾಟ್ ಎಂಬ ಪದದ ಅಡಿಯಲ್ಲಿ ಬರುವ ನಾನಾ ತಿಂಡಿಗಳನ್ನು ಗೂಗಲ್ ಸರ್ಚ್ ಮಾಡುವಲ್ಲಿ ಕರ್ನಾಟಕದವರು ಎಲ್ಲರಿಗಿಂತ ಮುಂದಿದ್ದಾರೆ. ದೆಹಲಿ ಎರಡನೇ ಸ್ಥಾನ ಮತ್ತು ಮಹಾರಾಷ್ಟ್ರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.

ಅತಿ ಹೆಚ್ಚು ಸರ್ಚ್ ಮಾಡಿದ ತಿಂಡಿ ಯಾವುದು?

ಅತಿ ಹೆಚ್ಚು ಸರ್ಚ್ ಮಾಡಿದ ತಿಂಡಿ ಯಾವುದು?

ಚಾಟ್ ಅಡಿಯಲ್ಲಿ ನಾನಾ ತಿನಿಸುಗಳು ಬರುತ್ತವೆ. ಅವನ್ನೆಲ್ಲ ಪಟ್ಟಿ ಮಾಡುತ್ತ ಹೋದರೆ ಇಲ್ಲಿ ಸ್ಥಳ ಸಾಕಾಗುವುದಿಲ್ಲ. ಕಾಂಗ್ರೆಸ್ ಮಸಾಲಾ ಅಂತೆ, ಬೋಟಿ ಮಸಾಲಾ ಅಂತೆ, ತ್ರೀ ಇನ್ ಒನ್ ಅಂತೆ, ಪಕೋಡಿ ಭೇಲ್ ಅಂತೆ... ಆದರೆ, ಎಲ್ಲಕ್ಕಿಂತ ಹೆಚ್ಚು ಇಷ್ಟಪಡುವ ಚಾಟ್ ಯಾವುದು ಗೊತ್ತಾ? ಸವಿಯಲ್ಲಿ ಎಂದೂ ಮೋಸ ಮಾಡದ ಸಮೋಸಾ! ಅಚ್ಚರಿಯಾಯ್ತಾ? ಸಮೋಸಾ ಭಾರತದಲ್ಲಿ ಮಾತ್ರವಲ್ಲ ಕೆನಡಾ, ಯುಕೆ, ಆಸ್ಟ್ರೇಲಿಯಾದಲ್ಲೂ ಜನಪ್ರಿಯ.

ಎರಡನೇ ಸ್ಥಾನದಲ್ಲಿ ಪಾವ್ ಭಾಜಿ

ಎರಡನೇ ಸ್ಥಾನದಲ್ಲಿ ಪಾವ್ ಭಾಜಿ

ಸಮೋಸಾ ಎಲ್ಲ ಚಾಟ್ ಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಗಳಿಸಿದ್ದರೆ, ಸ್ವಲ್ಪ ದುಬಾರಿ ಎನಿಸುವ ಪಾವ್ ಭಾಜಿ, ಎನಗಿಂತ ರುಚಿಯಲ್ಲಿ ಸರಿಸಾಟಿ ಯಾರು ಎಂದು ಗರ್ವದಿಂದ ಬೀಗುತ್ತಿದೆ. ಬಿಸಿಬಿಸಿ ಭಾಜಿಗೆ ಹಸಿ ಈರುಳ್ಳಿ ಬೆರೆಸಿ ಮೇಲೊಂದಿಷ್ಟು ನಿಂಬೆ ರಸ ಹಿಂಡಿ, ಬೆಣ್ಣೆ ಸವರಿ ಸ್ವಲ್ಪ ಫ್ರೈ ಮಾಡಿದ ಪಾವ್ ಹಚ್ಚಿಕೊಂಡು ತಿನ್ನುತ್ತಿದ್ದರೇ.... ರೀ, ಸುಮ್ನೆ ಯಾಕ್ರೀ ಬಾಯಲ್ಲಿ ನೀರು ತರಿಸ್ತೀರಾ? [ಫೋಟೋ ಕೃಪೆ : ಪ್ರಸಾದ್ ಎಸ್ಆರ್]

ಪಾವ್ ಭಾಜಿಗೆ ಪೈಪೋಟಿ ನೀಡಿದ್ದ ಕಚೋರಿ

ಪಾವ್ ಭಾಜಿಗೆ ಪೈಪೋಟಿ ನೀಡಿದ್ದ ಕಚೋರಿ

ತಮಾಷೆ ಅಂದ್ರೆ, ಎರಡನೇ ಸ್ಥಾನಕ್ಕೆ ಬೀದಿ ಬದಿ ಸ್ಟಾಲ್ ಗಳಲ್ಲಿ ಹೆಚ್ಚು ಮಾರಾಟವಾಗುವ ಕಚೋರಿ ಮತ್ತು ಪಾವ್ ಭಾಜಿ ನಡುವೆ ಜಿದ್ದಾಜಿದ್ದಿನ ಬಾಜಿ ನಡೆದಿತ್ತು. ಮಧ್ಯದಲ್ಲಿ ತಗ್ಗು ಮಾಡಿ ಮಸಾಲಾ ತುಂಬಿ ತಿಂದರೆ ಮತ್ತೊಂದು ಬೇಕು ಎನಿಸುವ ಕಚೋರಿ ಆರಂಭದಲ್ಲಿ ಭಾರೀ ಮುನ್ನಡೆ ಸಾಧಿಸಿತ್ತು. ಆದರೆ, ಕೊನೆಗೆ ಪಾವ್ ಭಾಜಿ ನೀಡಿದ ಪೈಪೋಟಿಗೆ ಸರಿಸಾಟಿಯಾಗದೆ ನಾಲ್ಕನೇ ಸ್ಥಾನದ ಸಮಾಧಾನಕರ ಬಹುಮಾನ ಪಡೆಯಿತು.

ಚಾಟ್ ಕರ್ನಾಟಕದ ಕಲ್ಚರ್ ಅಲ್ಲವೇ ಅಲ್ಲ

ಚಾಟ್ ಕರ್ನಾಟಕದ ಕಲ್ಚರ್ ಅಲ್ಲವೇ ಅಲ್ಲ

ಅಂದ ಹಾಗೆ, ಚಾಟ್ ಸಂಸ್ಕೃತಿಯ ಹಕ್ಕುದಾರ ಕರ್ನಾಟಕ ಅಲ್ಲವೇ ಅಲ್ಲ. ಉತ್ತರ ಭಾರತದಿಂದ ಬಳುವಳಿಯಾಗಿ ಪಡೆದಂತಹ ಸಂಸ್ಕೃತಿ ಚಾಟ್. ಇತರ ರಾಜ್ಯದವರನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಳ್ಳುವುದರಲ್ಲಿ ದೊಡ್ಡತನ ತೋರಿಸುವ ಕರ್ನಾಟಕದವರು ಸಹಜವಾಗಿ ಚಾಟ್ ಸಂಸ್ಕೃತಿಯನ್ನೂ ಅಪ್ಪಿಕೊಂಡಿದ್ದಾರೆ. ಹೆಚ್ಚಾಗುತ್ತಿರುವ ನಾರ್ತಿಗಳ ಹಾವಳಿಯೂ ಇದಕ್ಕೆ ಕಾರಣ ಎಂದರೆ ತಪ್ಪಾಗಲಾರದು.

ಚಾಟ್ ಅಂದ್ರೆ ಬಾಯಿಬಿಡುವ ಬೆಂಗಳೂರಿಗರು

ಚಾಟ್ ಅಂದ್ರೆ ಬಾಯಿಬಿಡುವ ಬೆಂಗಳೂರಿಗರು

ಚಾಟ್ ಬಗ್ಗೆ ಎಷ್ಟೇ ಎಚ್ಚರಿಕೆಯ ಮಾತುಗಳನ್ನಾಡಿದರೂ ಅದು ಬೆಂಗಳೂರಿಗರ ಕಿವಿಗೆ ಬಿದ್ದಿಲ್ಲ, ಬೀಳಿಸಿಕೊಳ್ಳಲು ಅವರು ತಯಾರೂ ಇಲ್ಲ. ಮೊದಲು ವೀಕೆಂಟ್ ಫಂಡಾ ಆಗಿದ್ದ ಚಾಟ್ ಇಂದು ದಿನನಿತ್ಯ ಜಿಹ್ವಾ ಚಾಪಲ್ಯವನ್ನು ತಣಿಸುತ್ತಿದೆ. ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡ್ರೂ ಪರವಾಗಿಲ್ಲ, ಫುಡ್ ಪಾಯ್ಸನಿಂಗ್ ಆದ್ರೂ ಪರವಾಗಿಲ್ಲ, ಲೂಸ್ ಮೋಷನ್ ಆದರೂ ಪರವಾಗಿಲ್ಲ ಪ್ರತಿದಿನ ಒಂದಿಲ್ಲೊಂಡು ಚಾಟ್ ಹೊಟ್ಟೆಗೆ ಬೀಳಲೇಬೇಕು.

ಅತಿಯಾದ ಸೇವನೆ ಅನಾರೋಗ್ಯಕ್ಕೆ ಆಹ್ವಾನ

ಅತಿಯಾದ ಸೇವನೆ ಅನಾರೋಗ್ಯಕ್ಕೆ ಆಹ್ವಾನ

ಇಂಥ ಚಾಟ್ ಗಳನ್ನು ಅತಿಯಾಗಿ ತಿನ್ನುತ್ತಿರುವುದರಿಂದ ಬೊಜ್ಜು, ರಕ್ತದೊತ್ತಡ, ಮಧುಮೇಹ, ಹೃದಯಬೇನೆ, ಕ್ಯಾನ್ಸರ್ ಮುಂತಾದ ರೋಗಗಳಿಗೆ ತಿಂಡಿಪೋತರು ಗುರಿಯಾಗುತ್ತಿದ್ದಾರೆ ಎನ್ನುತ್ತಾರೆ ವೈದ್ಯರು. ಕರ್ನಾಟಕದಲ್ಲಿ ಹೆಚ್ಚಾಗಿ ಬೆಂಗಳೂರಿನಲ್ಲಿ ಚಾಟ್ ದಾಸರಲ್ಲಿ ಈ ರೋಗಗಳು ಕಂಡುಬರುತ್ತಿರುವುದು ಬೇಸರದ ಸಂಗತಿ. ಗೂಗಲ್ ಮಾಡಿರುವ ಈ ಸರ್ವೇಯಿಂದಲಾದರೂ ಬೆಂಗಳೂರಿನ ಜನತೆ ಎಚ್ಚೆತ್ತುಕೊಳ್ಳುವುದು ಶ್ರೇಯಸ್ಕರ.

ಆದರೂ, ಕೊನೆಯಲ್ಲೊಂದು ಎಚ್ಚರಿಕೆ!

ಆದರೂ, ಕೊನೆಯಲ್ಲೊಂದು ಎಚ್ಚರಿಕೆ!

ಆಹಾರ ತಜ್ಞರು ಏನು ಹೇಳುತ್ತಾರೆಂದರೆ, ಜಂಕ್ ಫುಡ್ ಕೆಟಗರಿಗೆ ಬರುವ ಚಾಟ್ ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ. ಅತಿಯಾಗಿ ಮಸಾಲಾ, ಉಪ್ಪು ಬಳಸುವ ಈ ಚಾಟ್ ಗಳು ಗುಣಮಟ್ಟದಲ್ಲಿಯೂ ಉತ್ತಮವಾಗಿರುವುದಿಲ್ಲ. ಎಂಥ ಎಣ್ಣೆ, ಎಂಥ ತರಕಾರಿ ಬಳಸಿ ಎಂಥ ಕೈಗಳಿಂದ ಇವುಗಳನ್ನು ತಯಾರಿಸಿರುತ್ತಾರೋ ಬಲ್ಲವರಾರು? ಬಾಯಿ ರುಚಿ ಮಾತ್ರವಲ್ಲ, ಶುಚಿಯೂ ಆಗಿರಬೇಕಲ್ಲ?

English summary
In a survey conducted by Google on Indian street food Karnataka has beaten all the states in India. Google trend analytics shows Samosa is the most favoured junk food in India followed by Pav Bhaji. Though chaat culture belongs to Uttar Pradesh Bangaloreans have made is as their own.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X