ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರಿಮಿನಲ್ಸ್ ಜೊತೆ ಮೋದಿ ಚಿತ್ರ, ಗೂಗಲ್ ಕ್ಷಮೆ..ಆದರೆ

By Mahesh
|
Google Oneindia Kannada News

ಬೆಂಗಳೂರು, ಜೂ.4: ಜಾಗತಿಕ ಟಾಪ್ 10 ಕ್ರಿಮಿನಲ್ ಗಳನ್ನು ತೋರಿಸುವಂತೆ ಸರ್ಚ್ ಇಂಜಿನ್ ಗೂಗಲ್ ನಲ್ಲಿ ಹುಡುಕಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರ ಕಾಣಿಸಿಕೊಂಡಿದ್ದು ಎಲ್ಲರಿಗೂ ತಿಳಿದೇ ಇದೆ. ಈ ಬಗ್ಗೆ ಗೂಗಲ್ ಕ್ಷಮೆಯಾಚಿಸಿದೆ.

ಅದರೆ, ಇನ್ನೂ ಸರ್ಚ್ ರಿಸಲ್ಟ್ ನಲ್ಲಿ ಮೋದಿ ಚಿತ್ರ ಕಾಣಿಸಿಕೊಳ್ಳುತ್ತಿದೆ. ಹಾಗೂ ಚಿತ್ರ ತೆಗೆದರೂ ಟ್ರೆಂಡಿಂಗ್ ನಿಲ್ಲಿಸುವುದು ಕಷ್ಟ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. [#Top10Criminals, ಗೂಗಲ್ ಸರ್ಚ್ ನಲ್ಲಿ ಮೋದಿ ಚಿತ್ರ]

ವಿಶ್ವದ ಟಾಪ್ 10 ಕ್ರಿಮಿನಲ್ ಗಳ ಪಟ್ಟಿಯಲ್ಲಿರುವ ಒಸಾಮಾ ಬಿನ್ ಲಾಡೆನ್, ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್ ಮುಂತಾದವರ ಜೊತೆ ಮೋದಿ ಅವರ ಚಿತ್ರ ಕಾಣಿಸಿಕೊಂಡಿತ್ತು.

ಇದರಿಂದ ಮೋದಿ ಅಭಿಮಾನಿಗಳು ಸಿಟ್ಟಿಗೆದ್ದರು, ಸರಣಿ ಟ್ವೀಟ್ ಮಾಡಿ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ #Top10Criminals ಟ್ರೆಂಡಿಂಗ್ ಇರುವಂತೆ ಮಾಡಿದರು. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಗೂಗಲ್ ಗೂ ಆಗ್ರಹಿಸಿದರು.

ಕೊನೆಗೆ ಗೂಗಲ್ ಪ್ರತಿಕ್ರಿಯೆ ನೀಡಿ

ಕೊನೆಗೆ ಗೂಗಲ್ ಪ್ರತಿಕ್ರಿಯೆ ನೀಡಿ

These results don't reflect Google's opinion or our beliefs; our algorithms automatically matched the query to web pages with these images ಎಂದು ಸರ್ಚ್ ರಿಸಲ್ಟ್ ಜೊತೆ ಹಾಕಲು ಶುರು ಮಾಡಿತು. ಇದು ಗೂಗಲ್ ಅಭಿಪ್ರಾಯದ ಪ್ರತಿಫಲನವಲ್ಲ. ನಾವು ಇದಕ್ಕಾಗಿ ಕ್ಷಮೆ ಯಾಚಿಸುತ್ತೇವೆ' ಎಂದಿದೆ.

ಸರ್ಚ್ ಇಂಜಿಂಗ್ ಕಾರ್ಯ ನಿರ್ವಹಣೆ ಹೀಗೆ

ಸರ್ಚ್ ಇಂಜಿಂಗ್ ಕಾರ್ಯ ನಿರ್ವಹಣೆ ಹೀಗೆ

ಸುಮಾರು 200ಕ್ಕೂ ಅಧಿಕ ಅಂಶಗಳನ್ನು ಹೊಂದಿಸಿ ನಾವು ಕೇಳುವ ಪ್ರಶ್ನೆ (query) ಸರ್ಚ್ ಇಂಜಿನ್ ಉತ್ತರಿಸುತ್ತದೆ. ಒಂದು ವೇಳೆ ಯಾವುದೋ ವೆಬ್ ಸೈಟ್ ನಲ್ಲಿ ಮೋದಿ ಚಿತ್ರ ಬೇಡದ ಲೇಖನಕ್ಕೆ ತಗಲು ಹಾಕಿಕೊಂಡಿದ್ದರೆ ಅಥವಾ ಪುಟದ ಇಂಡೆಕ್ಸ್ ಪರಿವಿಡಿಯಲ್ಲಿ ಮೋದಿ ಹೆಸರು ಇದ್ದರೆ, ಮೆಟಾ ಡೇಟಾದಲ್ಲಿ ಕಾಣಿಸಿಕೊಂಡರೆ ಮೋದಿ ಹೆಸರು ಮೊದಲಿಗೆ ಬರುತ್ತದೆ.

ಮೋದಿ ಚಿತ್ರ ತೆಗೆದರೂ ಮತ್ತೆ ಕಾಣಿಸಿಕೊಳ್ಳುವುದೇ

ಮೋದಿ ಚಿತ್ರ ತೆಗೆದರೂ ಮತ್ತೆ ಕಾಣಿಸಿಕೊಳ್ಳುವುದೇ

ಮೋದಿ ಚಿತ್ರವನ್ನು ತೆಗೆದರೂ ಮತ್ತೆ ಸರ್ಚ್ ಮಾಡಿದಾಗ ಕಾಣಿಸಿಕೊಳ್ಳುತ್ತಿದೆ. ಮೊದಲೇ ಹೇಳಿದಂತೆ 200ಕ್ಕೂ ಅಧಿಕ ಅಂಶಗಳಲ್ಲಿ ಹೋಲಿಕೆ ಮಾಡಿ ರಿಸಲ್ಟ್ ನೀಡಲಾಗುತ್ತದೆ. ಇದಕ್ಕೆ ವೆಬ್ ಸೈಟ್ ನ ಗುಣಮಟ್ಟ, ಪುಟದ ವಿನ್ಯಾಸ, ಪ್ರಾದೇಶಿಕತೆ, ವೆಬ್ ಇತಿಹಾಸ ಎಲ್ಲವೂ ಗಣನೆಗೆ ಬರುತ್ತದೆ. ಎಲ್ಲಿಯಾದರೋ ಒಂದು ಕಡೆ ಲೋಪವಿದ್ದರೂ ಹಳೆ ಸರ್ಚ್ ರಿಸಲ್ಟ್ ನಂತೆ ಫಲಿತಾಂಶ ಸಿಗಲಿದೆ.

ಟ್ರೆಂಡಿಂಗ್ ನಿಲ್ಲಿಸಿ, ಸುಮ್ಮನಿರಿ ಸರಿಹೋಗುತ್ತೆ

ಟ್ರೆಂಡಿಂಗ್ ನಿಲ್ಲಿಸಿ, ಸುಮ್ಮನಿರಿ ಸರಿಹೋಗುತ್ತೆ

ಗೂಗಲ್ ಹಾಗೂ ಟ್ವಿಟ್ಟರ್ ನಡುವೆ 2015ರ ಜನವರಿಯಲ್ಲಿ ಆದ ಒಪ್ಪಂದದಂತೆ ಟ್ವಿಟ್ಟರ್ ನ ಟ್ರೆಂಡಿಂಗ್ ಟಾಪಿಕ್ ವಿವರಗಳು ಗೂಗಲ್ ಗೆ ಮೊದಲಿಗೆ ಸಿಗುತ್ತದೆ. ರಿಯಲ್ ಟೈಮ್ ನಲ್ಲಿ ಟ್ವೀಟ್ ಗಳು ಏರಿಕೆಯಾಗುತ್ತಿದ್ದಂತೆ ಗೂಗಲ್ ಸರ್ಚ್ ಫಲಿತಾಂಶದಲ್ಲೂ ಕಾಣಿಸಿಕೊಳ್ಳಲಿದೆ. ಹೀಗಾಗಿ, #Top10Criminals ಟ್ರೆಂಡಿಂಗ್ ಮಾಡುವುದರಿಂದ ಗೂಗಲ್ ಸರ್ಚ್ ನಲ್ಲಿ ಮತ್ತೆ ಮತ್ತೆ ಮೋದಿ ಚಿತ್ರ ಕಾಣಿಸಿಕೊಳ್ಳುವ ಸಂಭವ ಹೆಚ್ಚಾಗುತ್ತದೆ.

ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಕ್ಷಣ ಕ್ಷಣಕ್ಕೆ ಬದಲು

ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಕ್ಷಣ ಕ್ಷಣಕ್ಕೆ ಬದಲಾಗುತ್ತದೆ. ಇಂದು #TopLeaderNamo ಟ್ರೆಂಡಿಂಗ್ ಜಾರಿಯಲ್ಲಿದೆ.

English summary
Internet giant Google on Wednesday apologised “for any confusion or misunderstanding” caused after Prime Minister Narendra Modi’s images started appearing in image search results for query on “Top 10 criminals in India”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X