ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Rally for Rivers ಗೆ ಮೈಸೂರು ಆನೆರಾಯನ ಬೆಂಬಲ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 1: ತಮಿಳುನಾಡಿನ ಕೋಯಿಮತ್ತೂರಿನಿಂದ ಇಂದು(ಸೆಪ್ಟೆಂಬರ್ 1) ಆರಂಭವಾಗಲಿರುವ ಸದ್ಗುರು ಜಗ್ಗಿ ವಾಸುದೇವ ಅವರ Rally for Rivers ಗೆ ಬೆಂಗಳೂರಿನಲ್ಲೂ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಶಾಲೆಯೊಂದರ ಮಕ್ಕಳು ರ್ಯಾಲಿ ಫಾರ್ ರಿವರ್ಸ್ ಘೋಷಣೆಯೊಂದಿಗೆ ಮೆರವಣಿಗೆ ಮಾಡಿ ಗಮನ ಸೆಳೆದರು.

ಸೆ.1 ರಿಂದ ಸದ್ಗುರು ನೇತೃತ್ವದಲ್ಲಿ Rally for Rivers ಆರಂಭಸೆ.1 ರಿಂದ ಸದ್ಗುರು ನೇತೃತ್ವದಲ್ಲಿ Rally for Rivers ಆರಂಭ

ಭವಿಷ್ಯಕ್ಕಾಗಿ ನದಿಗಳನ್ನು ಉಳಿಸುವ ಬಗ್ಗೆ ಮಕ್ಕಳೇ ಕಾಳಜಿ ವಹಿಸಿ, ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು. ಹಾಗೆಯೇ ಬೆಂಗಳೂರಿನ ಹಲವು ರಸ್ತೆಗಳಲ್ಲಿ ನೀಲಿ ಬಣ್ಣದ ಬಟ್ಟೆ ತೊಟ್ಟ ಜನ ರ್ಯಾಲಿ ಫಾರ್ ರಿವರ್ಸ್ ಗೆ ಬೆಂಬಲ ನೀಡುತ್ತಿದ್ದುದು ಕಂಡುಬಂತು.

ರಾಜಧಾನಿ ಬೆಂಗಳೂರಿನ ವಿವಿಧ ವೃತ್ತಗಳಲ್ಲಿ ರ್ಯಾಲಿ ಫಾರ್ ರಿವರ್ಸ್ ಬ್ಯಾನರ್ ನೊಂದಿಗೆ ನಿಂತಿದ್ದ ಕಾರ್ಯಕರ್ತರು 80009 80009 ನಂಬರ್ ಗೆ ಮಿಸ್ ಕಾಲ್ ನೀಡುವ ಮೂಲಕ ರ್ಯಾಲಿಗೆ ಬೆಂಬಲ ನೀಡುವಂತೆ ಕೇಳಿದರು.

ಮಕ್ಕಳಿಂದ ಮೆರವಣಿಗೆ

'ನದಿ ಉಳಿಸಿ' ಎಂದು ಪುಟ್ಟ ಮಕ್ಕಳು ಮೆರವಣಿಗೆ ಮಾಡುತ್ತಿದ್ದ ದೃಶ್ಯವನ್ನು ದಿವ್ಯಶ್ರೀ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ನದಿ ಉಳಿವಿಗಾಗಿ ಇಡೀ ದಿನ ನಿಲ್ಲಬಲ್ಲೆ!

ನಮ್ಮ ನದಿಯನ್ನು ಉಳಿಸುವುದಕ್ಕಾಗಿ, ಅಗತ್ಯವಿದ್ದರೆ ಇಡೀ ದಿನ ಬೇಕಾದರೂ ನಾನು ಹೀಗೆಯೇ ನಿಲ್ಲಬಲ್ಲೆ ಎಂದು ಶಾಜನ್ ಸಾಮ್ಯುಯೆಲ್ ಎಂಬುವವರು ತಮ್ಮ ಫೋಟೋದೊಡನೆ ಟ್ವೀಟ್ ಮಾಡಿದ್ದಾರೆ.

ನೀಲಿ ಬಟ್ಟೆಯೊಂದಿಗೆ ನದಿ ಉಳಿಸುವ ಪಣ

ಬೆಂಗಳೂರಿನ ಜಂಕ್ಷನ್ ವೊಂದರಲ್ಲಿ ನೀಲಿ ಶರ್ಟ್ ತೊಟ್ಟು Rally for rivers ಗೆ ವ್ಯಕ್ತಿಯೊಬ್ಬರು ಬೆಂಬಲ ನೀಡುತ್ತಿರುವುದನ್ನು ಸಾಯಿಕೃಷ್ಣ ರಾವ್ ಎನ್ನುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇಶಾ ಫೌಂಡೇಶನ್ ನಿಂದ ವಿನೂತನ ಕಾರ್ಯ

ಇಶಾ ಫೌಂಡೇಶನ್ ನಿಂದ ವಿನೂತನ ಕಾರ್ಯ

ಸದಾ ಒಂದಿಲ್ಲೊಂದು ಸಾಮಾಜಿಕ ಕಾರ್ಯಗಳ ಮೂಲಕ ಹೆಸರಾಗಿರುವ ಇಶಾ ಫೌಂಡೇಶನ್, ನದಿ ಉಳಿಸುವುದಕ್ಕಾಗಿ Rally for Rivers ಎಂಬ ವಿನೂತನ ಕಾರ್ಯಕ್ರಮವೊಂದನ್ನು ಆರಂಭಿಸಿದೆ. ಸೆಪ್ಟೆಂಬರ್ 1 ರಿಂದ ತಮಿಳುನಾಡಿನ ಕೋಯಿಮತ್ತೂರಿನಿಂದ ಆರಂಭವಾಗಲಿರುವ ಈ ರ್ಯಾಲಿ 16 ರಾಜ್ಯಗಳ ಮೂಲಕ ಹಾದುಹೋಗಿ ಅಕ್ಟೋಬರ್ 2 ರಂದು ದೆಹಲಿ ತಲುಪಿ ಮುಕ್ತಾಯವಾಗಲಿದೆ.

ನದಿ ರಕ್ಷಣೆಗೆ ಆನೆಯದೂ ಬೆಂಬಲ!

ಮೈಸೂರು ಅರಮನೆಯ ಆನೆಯೊಂದು ರ್ಯಾಲಿ ಫಾರ್ ರಿವರ್ಸ್ ಗೆ ಬೆಂಬಲ ನೀಡಿದ್ದು ಹೀಗೆ!

English summary
Isha foundation of spiritual leader Sadguru Jaggi Vasudev has organised rally for river from Sep 1st to Oct 2nd, from Tamil Nadu's Coimbatore to Delhi. The main aim of the rally is to create awareness about our depleting river. The rally go good response in Karnataka capital Bengaluru also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X