ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಗೋಲ್ಡ್ ಮನ್ ಸಾಚ್ಸ್ ಉಪಾಧ್ಯಕ್ಷ ಬಂಧನ

|
Google Oneindia Kannada News

ಬೆಂಗಳೂರು, ಸೆ. 10: ವಂಚನೆ ಹಾಗೂ ಹಣ ದುರ್ಬಳಕೆ ಆರೋಪದ ಮೇಲೆ ಗೋಲ್ಡ್ ಮನ್ ಸಾಚ್ಸ್ ಸಂಸ್ಥೆಯ ಉಪಾಧ್ಯಕ್ಷನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಆನ್ ಲೈನ್ ಗೇಮ್ ಪೋಕರ್ ಆಟದಲ್ಲಿ ಸೋತು ಸಾಲ ಮಾಡಿಕೊಂಡಿದ್ದ ಅಶ್ವನಿ ಜುಂಜನ್ ವಾಲ, ಸಂಸ್ಥೆಯ ಖಾತೆಯಿಂದ ಖಾಸಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. 10 ನಿಮಿಷದಲ್ಲಿ 38 ಕೋಟಿ ರು(5.4 ಮಿಲಿಯನ್ ಡಾಲರ್ ) ಗಳನ್ನು ಸೆ.04ರಂದು ವರ್ಗಾವಣೆ ಮಾಡಿದ ಆರೋಪವನ್ನು ಅಶ್ವನಿ ಹೊತ್ತುಕೊಂಡಿದ್ದಾರೆ.

ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದ ಅಶ್ವನಿಯನ್ನು ಮಂಗಳವಾರ ಬೆಳಗ್ಗೆ ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಅಶ್ವನಿ ವಿರುದ್ಧ ಐಪಿಸಿ ಸೆಕ್ಷನ್ 419, 420, 408 ಹಾಗೂ 409 ಅನ್ವಯ ಪ್ರಕರಣ ದಾಖಲಿಸಲಾಗಿದೆ.

Goldman Sachas VP arrested in Bengaluru on charges of siphoning Rs 38 crore

ವೈಯಕ್ತಿಕ ಸಾಲವನ್ನು ತೀರಿಸಲು ಈ ರೀತಿ ಕೃತ್ಯ ಎಸಗಿದ್ದಾಗಿ ಅಶ್ವನಿ ತಪ್ಪೊಪ್ಪಿಕೊಂಡಿದ್ದಾನೆ. ಅಮೆರಿಕ ಮೂಲದ ಬಹುರಾಷ್ಟ್ರೀಯ ಹೂಡಿಕೆ ಹಾಗೂ ಆರ್ಥಿಕ ಸೇವಾ ಸಂಸ್ಥೆಯಾದ ಗೋಲ್ಡ್ ಮನ್ ಸಾಚ್ಸ್ ನ ಅಧಿಕೃತ ಖಾತೆಯಿಂದ ಹಾಂಗ್ ಕಾಂಗಿನ ಸಿನರ್ಜಿ ವಿಸ್ಡಮ್ ಲಿಮಿಟೆಡ್ ಕಂಪನಿಗೆ ಹಣ ರವಾನೆಯಾಗಿದೆ. ಇದೇ ರೀತಿ ಈ ಹಿಂದೆ ಮಾಜಿ ಉದ್ಯೋಗಿಯೊಬ್ಬರು ಅಕ್ರಮವಾಗಿ ಹಣ ರವಾನೆ ಮಾಡಿಕೊಂಡಿದ್ದರು ಎಂಬ ಗುಮಾನಿಯೂ ಬಂದಿದೆ ಈ ಬಗ್ಗೆ ತನಿಖೆ ಜಾರಿಯಲ್ಲಿದೆ ಎಂದು ಡಿಸಿಪಿ ಅನುಚೇತ್ ಹೇಳಿದ್ದಾರೆ.

English summary
The Vice President of Goldman Sachs has been arrested by the Bengaluru police on charges of fraud and misappropriation of funds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X