ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶದಿಂದ ಚಿನ್ನ ಅಕ್ರಮ ಸಾಗಣೆ: ಎಂಟು ಮಂದಿ ಕಸ್ಟಮ್ಸ್ ಬಲೆಗೆ

|
Google Oneindia Kannada News

ಬೆಂಗಳೂರು, ಜನವರಿ 29: ದುಬೈನಿಂದ ಕಳ್ಳ ಮಾರ್ಗದಲ್ಲಿ ಚಿನ್ನ ತರಿಸಿ ಭಾರತದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ಸದ್ದಿಲ್ಲದೇ ನಡೆಯುತ್ತಲೇ ಇದೆ. ಚಿನ್ನ ಅಕ್ರಮ ಸಾಗಣೆ ಮಾಡಿ ಬಚಾವ್ ಆದ್ರೆ ಲಾಟರಿ ಹೊಡೆದಂಗೆ.. ತಪ್ಪಿದ್ರೆ ಜೈಲಿಗೆ ಹೋದಂಗೆ ! ಇಲ್ಲಿ ಪ್ರಯಾಣಿಕರ ಸೋಗಿನಲ್ಲಿ ಚಿನ್ನ ಅಕ್ರಮ ಸಾಗಣೆ ಮಾಡಲು ಹೋಗಿ ಎಂಟು ಮಂದಿ ಸಿಕ್ಕಿಬಿದ್ದಿದ್ದಾರೆ.

ಸೌಂದರ್ಯ ವರ್ಧಕಗಳಲ್ಲಿ ಚಿನ್ನ ಇಟ್ಟು ಅಕ್ರಮ ಸಾಗಣೆಗೆ ಯತ್ನಿಸಿದ ಎಂಟು ಮಂದಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ 38 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಲೇಬಲ್ ಇಲ್ಲದ ಸಿಗರೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಅಕ್ರಮವಾಗಿ ವಿದೇಶಿ ಸಿಗರೇಟ್ ಹಾಗೂ ಚಿನ್ನವನ್ನು ಸಾಗಣೆ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಎಕ್ಸ್‌ ರೇ ಸ್ಕ್ಯಾನ್ ಮಾಡಿದ್ದರು.

ಈ ವೇಳೆ ಸಿಗರೇಟ್ ಮಾರಾಟದ ಎಚ್ಚರಿಕೆ ನಿಯಮ ಉಲ್ಲದ 73,600 ಸ್ಟಿಕ್ ವಿದೇಶಿ ಸಿಗರೇಟ್ ಸಿಕ್ಕಿದೆ. ಇದೇ ವೇಳೆ ಸೌಂದರ್ಯ ವರ್ಧಕಗಳಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 438 ಗ್ರಾಂ ಚಿನ್ನ ಅಕ್ರಮ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಎಂಟು ಮಂದಿ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

gold smuggling: eight persons locked by customs officials in bengaluru airport

ಮೊದಲಿನಿಂದಲೂ ದಂಧೆ: ಭಾರತಕ್ಕೆ ಹೋಲಿಸಿದರೆ ವಿದೇಶದಲ್ಲಿ ಚಿನ್ನದ ಬೆಲೆ ಕಡಿಮೆ. ಆದರೆ ಕಾನೂನು ಬದ್ಧವಾಗಿ ಚಿನ್ನವನ್ನು ತರಿಸಿ ಮಾರಾಟ ಮಾಡಿದರೆ ನಷ್ಟ ವುಂಟಾಗುತ್ತದೆ. ಹೀಗಾಗಿ ಚಿನ್ನದ ವ್ಯಾಪಾರಿಗಳು ದುಬೈ ಪ್ರವಾಸದ ಹೆಸರಿನಲ್ಲಿ ಕೆಲವರನ್ನು ವಿದೇಶಕ್ಕೆ ಕಳಿಸುತ್ತಾರೆ.

ಪ್ರವಾಸದ ಹೆಸರಿನಲ್ಲಿ ಮಹಿಳೆಯರನ್ನು ಕಳುಹಿಸಿ ಅವರು ವಾಪಸು ಬರುವಾಗ ಚಿನ್ನವನ್ನು ತರಿಸುತ್ತಾರೆ. ಹೀಗೆ ಅಡ್ಡ ಮಾರ್ಗದಲ್ಲಿ ಚಿನ್ನ ತರಿಸಿ ಮಾರಾಟ ಮಾಡುವ ದಂಧೆ ಮೊದಲಿನಿಂದಲೂ ನಡೆಯುತ್ತಿದೆ. ಕೆಲವುರಂತೂ ದೇಹದೊಳಗೆ ಚಿನ್ನ ಇಟ್ಟುಕೊಂಡು ಅಕ್ರಮವಾಗಿ ಸಾಗಣೆ ಮಾಡಿದ ಪ್ರಕರಣಗಳು ವರದಿಯಾಗಿವೆ. ಇದೀಗ ಅಂತದ್ದೇ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

English summary
Eight people were arrested by customs officials for smuggling gold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X