ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಲಹಳ್ಳಿ ಅಯ್ಯಪ್ಪಸ್ವಾಮಿ ದೇವಾಲಯ ಗರ್ಭದಗುಡಿ ಗೋಪುರಕ್ಕೆ ಚಿನ್ನದ ಲೇಪನ..!

|
Google Oneindia Kannada News

ಬೆಂಗಳೂರು, ಮೇ 7: ಬೆಂಗಳೂರು ಜಾಲಹಳ್ಳಿಯಲ್ಲಿರುವ ಅಯ್ಯಪ್ಪ ದೇವಸ್ಥಾನದ 55ನೇ ವಾರ್ಷಿಕೋತ್ಸವದ ಹಿನ್ನೆಲೆ, ಗರ್ಭಗುಡಿಗೆ ಮಾಡಿರುವ ಚಿನ್ನದ ಲೇಪನವನ್ನ ಇಂದು ಲೋಕಾರ್ಪಣೆ ಮಾಡಲಾಯಿತು.

ಕೇರಳದ ಶಬರಿ ಮೆಲೆ ದೇವಾಲಯದ ತಂತ್ರಿ ಬ್ರಹ್ಮಶ್ರೀ ತಾಳಮನ್ ಮಡಮ್ ರಾಜೀ ಅವರು ಧಾರ್ಮಿಕ ಪದ್ಧತಿಯಂತೆ ಕಳಸದ ಪ್ರತಿಷ್ಠಾಪನೆ ಮಾಡಿದರು. 11 ಕೆ.ಜಿ ಚಿನ್ನವನ್ನು ಬಳಸಿಕೊಂಡು ದೇವಾಲದ ಗರ್ಭಗುಡಿಗೆ ಮಾಡಿರುವ ಚಿನ್ನದ ಲೇಪನದ ತಗಡನ್ನ ನೂರಾರು ಅಯ್ಯಪ್ಪ ಭಕ್ತರ ಸಮ್ಮುಕದಲ್ಲಿ ಯಶಸ್ವಿಯಾಗಿ ಅಳವಡಿಕೆ ಮಾಡಲಾಯಿತು.

ದಕ್ಷಿಣ ಭಾರತದಲ್ಲಿ ಕೇರಳದ ಶಬರಿಮಲೆ ಬಿಟ್ಟರೆ ಅತ್ಯಂತ ಪ್ರಸಿದ್ಧ ಪಡೆದಿರುವ ಈ ದೇಗುಲಕ್ಕೆ ದಿನನಿತ್ಯ ಹೆಚ್ಚಿನ ಭಕ್ತರ ದಂಡು ಇಲ್ಲಿಗೆ ಬತರುತ್ತದೆ. ಸುಮಾರು 15 ವರ್ಷಗಳಿಂದ ಚಿನ್ನದ ಲೇಪನ ಮಾಡಿಸುವ ದೇವಸ್ಥಾನದ ಆಡಳಿತ ಮಂಡಳಿಯ ಕನಸು ಇಂದು ನೆರವೇರಿತು. ದೇವಸ್ಥಾನ ಪ್ರತಿಷ್ಠಾಪನೆ ಅಂಗವಾಗಿ 55ನೇ ವಾರ್ಷಿಕೋತ್ಸವದ ಕಾರ್ಯಕ್ರಮ ಬಹಳ ವಿಜೃಂಬಣೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಕೇರಳದ ಶಬರಿ ಮೆಲೆ ದೇವಾಲಯದ ತಂತ್ರಿ ಬ್ರಹ್ಮಶ್ರೀ ತಾಳಮನ್ ಮಡಮ್ ರಾಜೀ ಭಾಗವಹಿಸಿದರು.

Gold plating for Jalahalli Ayyappa Swamy Temple

ಬೆಂಗಳೂರಿನ ಜಾಲಹಳ್ಳಿ ಪಶ್ಚಿಮದಲ್ಲಿ ಭಾಗದಲ್ಲಿ ಈ ದೇವಾಲಯ ಕೇರಳ ರಾಜ್ಯದ ಹೊರತುಪಡಿಸಿ 1967 ರ ಏಪ್ರಿಲ್ 17 ಬೆಂಗಳೂರಿನಲ್ಲಿ ಸ್ಥಾಪಿತವಾದ ಮೊದಲ ಅಯ್ಯಪ್ಪ ದೇವಸ್ಥಾನ ಇದಾಗಿದೆ. ಜಾಲಹಳ್ಳಿ ಸ್ಥಾಪಿತವಾಗಿರುವ ಈ ದೇಗುಲದಲ್ಲಿ ಧರ್ಮಶಾಸ್ತ ಅಯ್ಯಪ್ಪ ದೇವರ ಭವ್ಯವಾದ ಮತ್ತು ಭಕ್ತರನ್ನ ಬೆರಗುಗೊಳಿಸುವ ಪಂಚಲೋಹದ ವಿಗ್ರಹವನ್ನು ಪ್ರಸಿದ್ಧ ಶಿಲ್ಪಿ ದಿವಂಗತ ಟಿ.ಎಂ. ಚೆಂಗನ್ನೂರಿನ ನೀಲಕಂಠ ಪಣಿಕ್ಕರ್ ಕೆತ್ತಿದ್ದರು.

Recommended Video

ಮಂಡ್ಯ ಮೇಲೆ ಕಣ್ಣಿಟ್ಟ ಬಿಜೆಪಿ: ಸುಮಲತಾ ಮಗನಿಗೆ ಮಣೆ ಹಾಕಲು ರೆಡಿಯಾದ ಬಿಜೆಪಿ | Oneindia Kannada

ದಕ್ಷಿಣ ಮತ್ತು ಉತ್ತರ ಭಾರತದ ಇತರ ರಾಜ್ಯಗಳಲ್ಲಿ ಮಾತ್ರವಲ್ಲದೆ ಇತರೆ ದೇಶಗಳಲ್ಲಿಯೂ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಗಳಿದ್ದು, ಸರಿಸುಮಾರು 55 ವರ್ಷಗಳ ಇತಿಹಾಸವುಳ್ಳ ದೇವಸ್ಥಾನ ಇದಾಗಿದೆ. ಪರಿಣಿತ ಮರ ಮತ್ತು ಕಲ್ಲಿನ ಕುಶಲಕರ್ಮಿಗಳ ಅದ್ಭುತವಾದ ದೇವಸ್ತಾನದ ಕಟ್ಟ ನವೀಕರಿಸಿರುವುದು ದೇವಾಲಯದ ಪ್ರತಿಯೊಂದು ರಚನೆಯಲ್ಲಿ ಭಕ್ತರ ಕಣ್ಮನ ಸೆಳೆಯುತ್ತದೆ. ವಿಶ್ವವಿಖ್ಯಾತ ನಿಲಂಬೂರ್ ಅರಣ್ಯದಿಂದ ವಿಶೇಷ ತೇಗದ ಮರದಿಂದ ದೇವಸ್ಥಾನ ನಿರ್ಮಿಸಲಾಗಿದೆ.

English summary
Gold Coated to Bengaluru Jalahalli Ayyappa Temple. A gold plating for the sanctum sanctorum was unveiled today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X