ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಬ್ಯಾಂಕ್‌ ಲಾಕರ್‌ನಿಂದ 1.75 ಕೆಜಿ ಚಿನ್ನ ನಾಪತ್ತೆ!

|
Google Oneindia Kannada News

ಬೆಂಗಳೂರು, ಆಗಸ್ಟ್ 03 : ಬೆಂಗಳೂರಿನ ಜಯನಗರದ ಖಾಸಗಿ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ 1.75 ಕೆಜಿ ಚಿನ್ನ ನಾಪತ್ತೆಯಾಗಿದೆ. ಬ್ಯಾಂಕ್ ಸಿಬ್ಬಂದಿ ವಿರುದ್ಧ ಉದ್ಯಮಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಜೆ. ಪಿ. ನಗರದ ನಿವಾಸಿಯಾದ 52 ವರ್ಷದ ಉದ್ಯಮಿ ಚಿನ್ನ ಕಳೆದುಕೊಂಡವರು. 2020ರ ಫೆಬ್ರವರಿ 6ರಂದು ಉದ್ಯಮಿ ಜಯನಗರ ಖಾಸಗಿ ಬ್ಯಾಂಕ್ ಲಾಕರ್‌ನಲ್ಲಿ ಆಭರಣಗಳನ್ನು ಇಟ್ಟಿದ್ದರು.

ಕೇರಳ ಚಿನ್ನ ಸಾಗಣೆ ಪ್ರಕರಣ; 3 ಮಹತ್ವದ ಬೆಳವಣಿಗೆಗಳು ಕೇರಳ ಚಿನ್ನ ಸಾಗಣೆ ಪ್ರಕರಣ; 3 ಮಹತ್ವದ ಬೆಳವಣಿಗೆಗಳು

ಜುಲೈ 22ರಂದು ಅವರು ಬ್ಯಾಂಕ್‌ಗೆ ಭೇಟಿ ನೀಡಿ ಲಾಕರ್ ಪರಿಶೀಲನೆ ನಡೆಸಿದಾಗ ಚಿನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಅವರು ಬ್ಯಾಂಕ್ ಸಿಬ್ಬಂದಿ ವಿರುದ್ಧ ಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಕೇರಳದ ಚಿನ್ನ ಸ್ಮಗಲಿಂಗ್: ದುಬೈನಲ್ಲಿ ಆರೋಪಿ ಫೈಜಲ್ ಬಂಧನ ಕೇರಳದ ಚಿನ್ನ ಸ್ಮಗಲಿಂಗ್: ದುಬೈನಲ್ಲಿ ಆರೋಪಿ ಫೈಜಲ್ ಬಂಧನ

Gold Jewellery Missing From Private Bank Locker

ಫೆಬ್ರವರಿ 6ರಂದು ಆಭರಣಗಳನ್ನು ಲಾಕರ್‌ನಲ್ಲಿ ಇಟ್ಟ ಬಳಿಕ ಫೆಬ್ರವರಿ 27ರಂದು ಉದ್ಯಮಿ ಬ್ಯಾಂಕ್‌ಗೆ ಆಗಮಿಸಿದ್ದರು. ಮದುವೆ ಇರುವ ಕಾರಣ ಕೆಲವು ಆಭರಣಗಳನ್ನು ತೆಗೆದುಕೊಂಡು ಹೋಗಿದ್ದರು. ಬಳಿಕ ಲಾಕ್ ಡೌನ್ ಜಾರಿಗೊಂಡಿತು.

ಕೇರಳದ ಚಿನ್ನ ಸ್ಮಗಲಿಂಗ್ ಕೇಸ್: ಬೆಂಗಳೂರಲ್ಲಿ ಆರೋಪಿ ಸ್ವಪ್ನ ಬಂಧನಕೇರಳದ ಚಿನ್ನ ಸ್ಮಗಲಿಂಗ್ ಕೇಸ್: ಬೆಂಗಳೂರಲ್ಲಿ ಆರೋಪಿ ಸ್ವಪ್ನ ಬಂಧನ

ಜುಲೈ 22ರಂದು ಅವರು ಬ್ಯಾಂಕ್‌ಗೆ ಬಂದು ಲಾಕರ್ ಪರಿಶೀಲನೆ ನಡೆಸಿದಾಗ ಚಿನ್ನದ ಆಭರಣಗಳು ನಾಪತ್ತೆಯಾಗಿವೆ. ನಾಪತ್ತೆಯಾದ ಆಭರಣಗಳ ಮೌಲ್ಯ ಸುಮಾರು 85 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಬ್ಯಾಂಕ್‌ನ ಸಿಬ್ಬಂದಿಗಳೇ ಚಿನ್ನ ಕಳವು ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಉದ್ಯಮಿ ನೀಡಿದ ದೂರಿನ ಅನ್ವಯ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

English summary
Bengaluru J. P. Nagar base businessman filed the complaint to Jayanagar police that his 1.75 kg of gold jewellery missing from private bank locker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X