ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂಡಿಗೋ ವಿಮಾನದ ಸೀಟಿನ ಕೆಳಗೆ ಚಿನ್ನದ ಬಿಸ್ಕೆಟ್ ಪತ್ತೆ!

|
Google Oneindia Kannada News

ಬೆಂಗಳೂರು, ಜ. 06: ಭಾರತಕ್ಕೆ ರಫ್ತಾಗುವ ಚಿನ್ನದಲ್ಲಿ ಶೇ. 25 ರಷ್ಟು ಕಳ್ಳ ಮಾರ್ಗದಲ್ಲಿ ಬರುತ್ತದೆ. ಇದರಲ್ಲಿ ಶೇ. 75 ರಷ್ಟು ಚಿನ್ನ ಅರಬ್ ರಾಷ್ಟ್ರಗಳಿಂದ ಭಾರತಕ್ಕೆ ಕಳ್ಳ ಮಾರ್ಗಗಳ ಮೂಲಕ ಬಂದ ಚಿನ್ನವಾಗಿರುತ್ತದೆ. ಇಂಥದ್ದೊಂದು ಆತಂಕಕಾರಿ ಸಂಗತಿ ಕೆನಡಾ ಮೂಲದ ನಡೆಸಿದ ಅಧ್ಯಯನದಲ್ಲಿ ಹೊರ ಬಿದ್ದಿದೆ. ಏನೆಲ್ಲಾ ಕಟ್ಟು ನಿಟ್ಟಿನ ಕ್ರಮ ಜರುಗಿಸಿದರೂ ದುಬೈನಿಂದ ಸ್ಮಗ್ಲಿಂಗ್ ಆಗುವ ಚಿನ್ನದ ಕಳ್ಳದಾರಿಗೆ ಬ್ರೇಕ್ ಬಿದ್ದಿಲ್ಲ!

ಇಷ್ಟೆಲ್ಲಾ ಪೀಠಿಕೆ ಹಿಂದೆ ಒಂದು ಕಾರಣವಿದೆ. ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದ ಸೀಟಿನ ಕೆಳಗೆ ಬಚ್ಚಿಟ್ಟು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಕೋಟ್ಯಂತರ ಮೌಲ್ಯದ 2.8 ಕೆ.ಜಿ. ಚಿನ್ನದ ಬಿಸ್ಕೆಟ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಗೊ ವಿಮಾನದ ಸೀಟಿನ ಕೆಳಗೆ ಚಿನ್ನದ ಬಿಸ್ಕೆಟ್‌ಗಳನ್ನು ಅಡಗಿಸಿಡಲಾಗಿತ್ತು. ವಿಮಾನ ಸ್ವಚ್ಛಗೊಳಿಸುವ ಸಿಬ್ಬಂದಿ ಮೂಲಕ ಅಕ್ರಮ ಚಿನ್ನವನ್ನು ಹೊರಗೆ ಸಾಗಣೆ ಮಾಡಬೇಕಿತ್ತು.

ದುಬೈನಿಂದ ಅಕ್ರಮ ಸಾಗಣೆ

ಆದರೆ, ಸೀಟಿನ ಕೆಳಗೆ ಸ್ಮಗ್ಲರ್ಸ್ ಬಚ್ಚಿಟ್ಟಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಚಿನ್ನ ಜಪ್ತಿ ಮಾಡಿಕೊಂಡಿರುವ ವಿಮಾನ ನಿಲ್ದಾಣದ ಅಧಿಕಾರಿಗಳು ಇದರ ಜಾಡು ಪತ್ತೆಗೆ ಮುಂದಾಗಿದ್ದಾರೆ. ಇದೊಂದಲ್ಲ. ವರ್ಷದಲ್ಲಿ ಕನಿಷ್ಠ ಹತ್ತಕ್ಕೂ ಹೆಚ್ಚು ಪ್ರಕರಣದಲ್ಲಿ ಚಿನ್ನ ಅಕ್ರಮ ಸಾಗಣೆ ಮಾಡುವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ದುಬೈನಿಂದ ಅಕ್ರಮ ಸಾಗಣೆ ಮಾಡುತ್ತಿರುವುದು ವಿಶೇಷ. ಅಂದ ಹಾಗೆ ಇತ್ತೀಚೆಗೆ ಚೆನ್ನೈ ಮೂಲದ ವ್ಯಕ್ತಿಯನ್ನು ಸಹ ಚಿನ್ನದ ಅಕ್ರಮ ಸಾಗಣೆ ಪ್ರಕರಣದಲ್ಲಿ ಬಂಧಿಸಿದ್ದರು.

Bengaluru: 2.8 Kg Gold Biscuits found hidden under passenger seat on Indigo flight from Dubai
ಗೋಲ್ಡ್ ಸ್ಮಗ್ಲಿಂಗ್ ಕಥೆ: ಭಾರತ ವಾರ್ಷಿಕವಾಗಿ ವಿದೇಶಗಳಿಂದ 800 ರಿಂದ 900 ಟನ್ ಚಿನ್ನವನ್ನು ಅಮದು ಮಾಡಿಕೊಳ್ಳುತ್ತದೆ. ಆದರೆ, ಇದರಲ್ಲಿ ಶೇ. 25 ರಷ್ಟು ಸುಮಾರು 200 ರಿಂದ 225 ಕೆ.ಜಿ. ಚಿನ್ನ ಕಳ್ಳ ಮಾರ್ಗದ ಮೂಲಕ ಭಾರತಕ್ಕೆ ರವಾನೆಯಾಗುತ್ತದೆ. ಈ ಅಕ್ರಮವಾಗಿ ರವಾನೆಯಾಗಿರುವ ಚಿನ್ನದಿಂದ ಸರ್ಕಾರದ ಬೊಕ್ಕಸಕ್ಕೆ ದೊಟ್ಟ ನಷ್ಟವುಂಟಾಗಲಿದೆ. ಅದರಲ್ಲೂ ಶೇ. 75 ರಷ್ಟು ಚಿನ್ನ ಯುನೈಟೆಡ್ ಅರಬ್ ಎಮಿರೇರ್ಟ್ ಮೂಲಕವೇ ಬರುತ್ತದೆ ಎಂಬ ಸಂಗತಿ ಕೆನಡಾ ಮೂಲದ ಇಂಪ್ಯಾಕ್ಟ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಹೊರ ಬಿದ್ದಿತ್ತು.

Bengaluru: 2.8 Kg Gold Biscuits found hidden under passenger seat on Indigo flight from Dubai
ಭಾರತಕ್ಕೆ ಹೋಲಿಸಿದರೆ ದುಬೈನಲ್ಲಿ ಚಿನ್ನದ ಮೇಲಿನ ತೆರಿಗೆ ತೀರಾ ಕಡಿಮೆ. ಅಲ್ಲಿಂದ ರಫ್ತು ಕಾನೂನು ಬದ್ಧವಾಗಿ ರಫ್ತು ಮಾಡಿಕೊಂಡರೆ ಚಿನ್ನದ ದರ ಜಾಸ್ತಿಯಾಗುತ್ತದೆ. ಹೀಗಾಗಿ ತೆರಿಗೆ ತಪ್ಪಿಸಿ ಕಳ್ಳ ಮಾರ್ಗದ ಮೂಲಕ ದುಬೈನಿಂದ ಭಾರತಕ್ಕೆ ಚಿನ್ನ ತರಿಸಿಕೊಳ್ಳುವ ದೊಡ್ಡ ಜಾಲ ಹಬ್ಬಿದೆ. ಅದರಲ್ಲೂ ಕೇರಳದಲ್ಲಿ ಈ ಜಾಲ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ನಾನಾ ರೂಪದಲ್ಲಿ ಚಿನ್ನವನ್ನು ದುಬೈನಿಂದ ಭಾರತಕ್ಕೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತದೆ. ಅಕ್ರಮ ಸಾಗಣೆ ಮಾಡುವವರನ್ನೇ ಹುಟ್ಟುಹಾಕಿದ್ದಾರೆ.

Bengaluru: 2.8 Kg Gold Biscuits found hidden under passenger seat on Indigo flight from Dubai
ಭಾರತದಲ್ಲಿ ಗೋಲ್ಡ್ ಸ್ಮಗ್ಲಿಂಗ್ ಯಾಕೆ?: ಭಾರತದಲ್ಲಿ 1990 ರಲ್ಲಿ ಚಿನ್ನ ನಿಯಂತ್ರಣ ಕಾಯ್ದೆ ಜಾರಿಗೆ ತಂದ ಬಳಿಕ ಜನ ಸಾಮನ್ಯರು ಕೂಡ ವಿದೇಶದಿಂದ ಚಿನ್ನ ಅಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಚಿನ್ನಕ್ಕೆ ಎಲ್ಲಿಲ್ಲದ ಬೇಡಿಕೆ ಹುಟ್ಟಿದ್ದು, ಇದರ ಪರಿಣಾಮ ಚಿನ್ನದ ಅಕ್ರಮ ಸಾಗಣೆ ಜಾಲವೇ ಹುಟ್ಟಿಕೊಂಡಿತು ಎನ್ನುತ್ತದೆ ಅಧ್ಯಯನ. ಚಿನ್ನದ ಅಮದು ಸುಂಕದ ಮೇಲೆ ಹೆಚ್ಚು ಶುಲ್ಕ ವಿಧಿಸಿದ್ದು ಅಕ್ರಮ ಚಿನ್ನ ಸಾಗಣೆ ಜಾಲ ಹುಟ್ಟಿಕೊಳ್ಳಲು ಪ್ರಮುಖ ಕಾರಣ ಎಂಬುದರಲ್ಲಿ ಸಂದೇಹವಿಲ್ಲ.

Bengaluru: 2.8 Kg Gold Biscuits found hidden under passenger seat on Indigo flight from Dubai
ಹೀಗಾಗಿ ಸರ್ಕಾರ ಚಿನ್ನದ ಮೇಲಿನ ಅಮದು ಸುಂಕ ಕಡಿತಗೊಳಿಸಿ ಅಕ್ರಮ ಚಿನ್ನ ಸಾಗಣೆ ಜಾಲವನ್ನು ನಿಯಂತ್ರಿಸಲು ಯತ್ನಿಸಿತು. ಚಿನ್ನ ಕಳ್ಳ ಸಾಗಣೆಯಿಂದ ಆಗುವ ಲಾಭದ ಮುಂದೆ ಕೇಂದ್ರ ಸರ್ಕಾರದ ನಿಯಮಗಳು ಏನೂ ಅಲ್ಲ ಎಂಬಂತಾಯಿತು. 2013 ರಲ್ಲಿ ಕೇಂದ್ರ ಸರ್ಕಾರ ಚಿನ್ನ ಅಮದು ಸುಂಕದಲ್ಲಿ ಬದಲಾವಣೆ ತಂದಿದ್ದು, ಮತ್ತೆ ಚಿನ್ನದ ಅಕ್ರಮ ಸಾಗಣೆ ಜಾಲ ವಿಸ್ತರಿಸಿಕೊಂಡಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ. ಆದರೂ ಚಿನ್ನದ ಸ್ಮಗ್ಲಿಂಗ್ ನಿಂತಿಲ್ಲ!

English summary
Bengaluru: Gold biscuits weighing a total 2.80 kg found hidden under passenger seat on Indigo flight from Dubai. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X