ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ಲ್ಲಿ ತಪ್ಪಿದ ವಿಮಾನ ದುರಂತ

|
Google Oneindia Kannada News

ಬೆಂಗಳೂರು, ನವೆಂಬರ್ 15: ರನ್‌ವೇ ಬಿಟ್ಟು ಹುಲ್ಲು ನೆಲಕ್ಕೆ ವಿಮಾನ ಜಾರಿದ ಘಟನೆ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ನಡೆದಿದೆ.

ಪೈಲಟ್ ಹುಲ್ಲಿನ ಮೇಲೆಯೇ ಚಲಾಯಿಸಿ ಟೇಕಾಫ್ ಮಾಡಿದ ಕಾರಣ 180 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಮಂಜು ಹಾಗೂ ಎಂಜಿನ್‌ನ ತಾಂತ್ರಿಕ ದೋಷವೇ ಕಾರಣ ಎನ್ನುವ ಮಾಹಿತಿ ಲಭ್ಯವಾಗಿದೆ.

ನಾಗಪುರದಿಂದ ಬೆಂಗಳೂರಿಗೆ 180 ಪ್ರಯಾಣಿಕರೊಂದಿಗೆ ಬರುತ್ತಿದ್ದ ಗೋ ಏರ್ ವಿಮಾನವು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಮೇಲೆ ಇಳಿಯದೇ ಪಕ್ಕದ ಹುಲ್ಲು ಹಾಸಿನ ಮೇಲೆ ಇಳಿದು ಸುಮಾರು ದೂರ ಸಾಗಿರುವ ಘಟನೆ ನಡೆದಿದೆ.

ಬೆಂಗಳೂರಿನಿಂದ ಕಲಬುರಗಿಗೆ ವಿಮಾನ ಹಾರಾಟ: ಟಿಕೆಟ್ ದರ ಎಷ್ಟು? ಬೆಂಗಳೂರಿನಿಂದ ಕಲಬುರಗಿಗೆ ವಿಮಾನ ಹಾರಾಟ: ಟಿಕೆಟ್ ದರ ಎಷ್ಟು?

ಬಳಿಕ ಹೈದರಾಬಾದ್‌ಗೆ ವಿಮಾನವನ್ನು ಹಾರಿಸಲಾಯಿತು. ಹೈದರಾಬಾದ್‌ಗೆ ಬಂದಿಳಿದ ಬಳಿಕ ವಿಮಾನವನ್ನು ಪರಿಶೀಲಿಸಲಾಗಿದ್ದು, ಲ್ಯಾಂಡಿಂಗ್ ಗಿಯರ್‌ನಲ್ಲಿ ಮಣ್ಣು ಹಾಗೂ ಹುಲ್ಲು ಸಿಕ್ಕಿಹಾಕಿಕೊಂಡಿದ್ದು, ಕಂಡುಬಂದಿದೆ.

ಇದು ವಿಮಾನವು ರನ್‌ವೇ ಬದಲು ಹುಲ್ಲು ಹಾಸಿನ ಮೇಲೆ ಲ್ಯಾಂಡಿಂಗ್ ಆಗಿದ್ದನ್ನು ಸಾಬೀತುಪಡಿಸಿತು.
ವಿಮಾನದ ಡಿಜಿಟಲ್ ಫ್ಲೈಟ್ ಡಾಟಾ ರೆಕಾರ್ಡರ್ ಯಂತ್ರವನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಲಾಯಿತು.

180 ಪ್ರಯಾಣಿಕರು ಸುರಕ್ಷಿತ

180 ಪ್ರಯಾಣಿಕರು ಸುರಕ್ಷಿತ

ಸುದೈವವಶಾತ್ , ತಪ್ಪಿನ ಅರಿವಾಗಿ ವಿಮಾನವನ್ನು ಪೈಲಟ್ ಕೂಡಲೇ ಮತ್ತೆ ಮೇಲೇರುವಂತೆ ಮಾಡಿದ್ದು, ಹೈದರಾಬಾದ್‌ನತ್ತ ತಿರುಗಿಸಿ ಅಲ್ಲಿನ ಏರ್‌ಪೋರ್ಟ್‌ನಲ್ಲಿ ಇಳಿಸಿದ್ದಾನೆ. ಎಲ್ಲಾ 180 ಪ್ರಯಾಣೀಕರೂ ಕೂಡ ಸುರಕ್ಷಿತವಾಗಿದ್ದಾರೆ.

ಪೈಲಟ್ ಅಮಾನತು

ಪೈಲಟ್ ಅಮಾನತು

ವಿಮಾನವನ್ನು ಸೂಕ್ತ ರೀತಿಯಲ್ಲಿ ಭೂಸ್ಪರ್ಶ ಮಾಡಿಸದ ಕಾರಣ ಪೈಲಟ್‌ನನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ವಿಮಾನಯಾನ ನಿರ್ದೇಶನಾಲಯವು ತನಿಖೆಗೆ ಆದೇಶಿಸಿದೆ.

ಘಟನೆ ನಡೆದಿದ್ದು ಹೇಗೆ?

ಘಟನೆ ನಡೆದಿದ್ದು ಹೇಗೆ?

ಬೆಳಗ್ಗೆ ನಾಗಪುರದಿಂದ ಹೊರಟ ಜಿ8-811 ವಿಮಾನವು ಕೆಲವು ಗಂಟೆಗಳ ಬಳಿಕ ಬೆಂಗಳೂರಿನಲ್ಲಿ ಇಳಿಬೇಕಿತ್ತು. ಆದರೆ ಬೆಂಗಳೂರಿನಲ್ಲಿ ಮಂಜು ಮುಸುಕಿದ ಮಬ್ಬು ವಾತಾವರಣ ಇದ್ದ ಕಾರಣ ತಕ್ಷಣ ಲ್ಯಾಂಡ್ ಆಗದೇ ಸುಮಾರು ಹೊತ್ತು ಆಗಸದಲ್ಲೇ ಗಿರಕಿ ಹೊಡೆಯಿತು. ಕೊನೆಗೆ ಏರ್ ಟ್ರಾಫಿಕ್ ಕಂಟ್ರೋಲ್ ಕೊಠಡಿಯ ಅನುಮತಿ ದೊರಕಿದ ಬಳಿಕ ಲ್ಯಾಂಡ್ ಮಾಡಲು ಪೈಲಟ್ ಯತ್ನಿಸಿದ್ದಾರೆ. ಆದರೆ ವಿಮಾನ ರನ್‌ ವೇ ಮೇಲೆ ಬರದೇ ಪಕ್ಕದಲ್ಲೇ ಇದ್ದ ಹುಲ್ಲಿನ ಮೇಲೆ ಸುಮಾರು ದೂರ ಸಾಗಿದೆ. ಎಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷವೇ ಹೀಗೆ ಲ್ಯಾಂಡ್ ಆಗಲು ಕಾರಣ ಎನ್ನಲಾಗಿದೆ.

ಎಂಜಿನ್ ವೇಗವನ್ನು ಹೆಚ್ಚಿಸಿದ್ದ ಪೈಲಟ್

ಎಂಜಿನ್ ವೇಗವನ್ನು ಹೆಚ್ಚಿಸಿದ್ದ ಪೈಲಟ್

ಪೈಲಟ್‌ಗೆ ತಪ್ಪಿನ ಅರಿವಾಗಿ ಎಂಜಿನ್‌ ವೇಗವನ್ನು ಹೆಚ್ಚಿಸಿದ್ದಾರೆ. ಆದಾಗ್ಯೂ ಆತ ಧೈರ್ಯ ತೋರಿಸಿ ವಿಮಾನ ಎಂಜಿನ್ ವೇಗವನ್ನು ಹೆಚ್ಚಿಸಿದ್ದಾರೆ. ಸುದೈವವಶಾತ್ ವಿಮಾನವು ಹುಲ್ಲು ಹಾಸಿನಿಂದಲೇ ಮೇಲೇರಿದೆ. ಮೇಲೇರಿದ ವಿಮಾನವನ್ನು ಹೈದರಾಬಾದ್‌ಗೆ ತಿರುಗಿಸುವಂತೆ ಪೈಲಟ್‌ಗೆ ಸೂಚಿಸಲಾಗಿದ್ದು, ಆತ ಅದನ್ನು ಹೈದರಾಬಾದ್‌ನಲ್ಲಿ ಸುರಕ್ಷಿತ ಭೂಸ್ಪರ್ಶ ಮಾಡಿದ್ದಾರೆ. ಆಗ ವಿಮಾನದಲ್ಲಿದ್ದ ಸಿಬ್ಬಂದಿ ಹಾಗೂ ಎಲ್ಲಾ 180 ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

English summary
In a near mishap, a GoAir flight arriving in Bengaluru from Nagpur landed just off the runway at the Kempegowda International Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X