ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಗೋ ಏರ್ ವಿಮಾನ 10 ಗಂಟೆ ವಿಳಂಬ; ಪ್ರಯಾಣಿಕರ ಆಕ್ರೋಶ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 9: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಹಾರದ ಪಾಟ್ನಾಗೆ ಹಾರಾಟ ಮಾಡಬೇಕಾಗಿದ್ದ ಗೋ ಏರ್ ವಿಮಾನ 10 ಗಂಟೆ ವಿಳಂಬವಾಗಿದ್ದರಿಂದ, ಪ್ರಯಾಣಿಕರು ಪರದಾಡಿದ ಘಟನೆ ಶನಿವಾರ ನಡೆದಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನದ ವಿಳಂಬದ ಕುರಿತು ಯಾವುದೇ ಸ್ಪಷ್ಟನೆ ಪ್ರಯಾಣಿಕರಿಗೆ ನೀಡಲಾಗಿಲ್ಲ ಎಂದು ಸಾಮಾಜಿಕ ತಾಣದಲ್ಲಿ ಹೇಳಿಕೊಳ್ಳಲಾಗಿದೆ. ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯೂ ಸರಿಯಾಗಿ ಉತ್ತರ ಕೊಡದೆ ಉದ್ದಟತನ ತೋರಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಕಾದು ಕಾದು ರೋಸಿ ಹೋದ ಪ್ರಯಾಣಿಕರು ಅನ್ಯ ಮಾರ್ಗವಿಲ್ಲದೆ ಪರಸ್ಪರ ಹರಟೆ ಹೊಡೆಯುತ್ತಾ ಸಮಯ ಕಳೆಯಬೇಕಾಗಿದೆ ಎಂದು ಸಾಮಾಜಿಕ ತಾಣ 'ಕೂ' ನಲ್ಲಿ ಬರೆದುಕೊಳ್ಳಲಾಗಿದೆ.

Bengaluru: Go Air Flight Delayed By 10 Hours; Passenger Outrage

Recommended Video

ಕೆ. ಎಲ್ ರಾಹುಲ್ RCBಯ ನೆಕ್ಟ್ಸ್ ಕ್ಯಾಪ್ಟನ್ ಆಗೋದು ಕನ್ಫರ್ಮ್!! | Oneindia Kannada

"ಗೋ ಏರ್ ಒಂದು ಕೆಟ್ಟ ಅನುಭವವಾಗಿದ್ದು, ಜಿ8873 ವಿಮಾನ 10 ಗಂಟೆ ತಡವಾದರೂ ಯಾವುದೇ ಸುಳಿವಿಲ್ಲ. ಗೋ ಏರ್ ಜಿ 8873 ವಿಮಾನವು ಬೆಂಗಳೂರು ವಿಮಾನ ನಿಲ್ದಾಣದಿಂದ 10 ಗಂಟೆಗಳ ಕಾಲ ವಿಳಂಬ ಮಾಡಿದೆ ಮತ್ತು ಇನ್ನೂ ಸ್ಪಷ್ಟತೆ ಇಲ್ಲ. ಡ್ಯೂಟಿ ಸ್ಟಾಫ್ ಸಂಜೀವ್ ದುರಹಂಕಾರಿಯಾಗಿದ್ದು, ಅಸಭ್ಯವಾಗಿ ವರ್ತಿಸಿದರಲ್ಲದೆ, ಯಾವುದೇ ಸ್ಪಷ್ಟನೆ ನೀಡಲಿಲ್ಲ. ವಿಮಾನಕ್ಕಾಗಿ ಬಡ ಪ್ರಯಾಣಿಕರು ಹರಸಾಹಸಪಟ್ಟರು," ಎಂದು ಕುಮಾರ್ ಎಂಬುವರು ಕೂ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Bengaluru: Go Air Flight Delayed By 10 Hours; Passenger Outrage
English summary
The Go Air flight from Bengaluru's Kempegowda International Airport to Patna in Bihar was delayed by 10 hours as passengers were Outraged by the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X