ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಕೆವಿಕೆಯ ಕೃಷಿ ಇಂಜಿನಿಯರಿಂಗ್ ಕಾಲೇಜು ಇನ್ನು ಕೃಷಿ ಮಹಾವಿದ್ಯಾಲಯ

By Gururaj
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10 : ಜಿಕೆವಿಕೆಯ ಕೃಷಿ ಇಂಜಿನಿಯರಿಂಗ್ ವಿಭಾಗವನ್ನು ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯವಾಗಿ ಉನ್ನತೀಕರಿಸಲು ಕರ್ನಾಟಕ ಸರ್ಕಾರ ಆದೇಶ ನೀಡಿದೆ. ಕೃಷಿ ಇಂಜಿನಿಯರಿಂಗ್ ವಿಭಾಗ ಕೃಷಿ ಮಹಾವಿದ್ಯಾಲಯದ ಪ್ರಮುಖ ವಿಭಾಗಗಳಲ್ಲಿ ಒಂದು ಎಂದು ಗುರುಸಲ್ಪಟ್ಟಿದೆ.

ಕೃಷಿ ಇಂಜಿನಿಯರಿಂಗ್ ವಿಭಾಗದ ಬೆಳವಣಿಗೆಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಕೃಷಿ ಅನುಸಂದಾನ ಪರಿಷತ್ತು ನೇಮಕಮಾಡಿರುವ ಉನ್ನತ ಮಟ್ಟದ ರಾಷ್ಟ್ರೀಯ ಅಕ್ರಿಡಿಯೇಷನ್ ಸಮಿತಿಯು 2016 ರಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ಆವರಣದಲ್ಲಿ ಕೃಷಿ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿತ್ತು.

ಉತ್ತಮ ರೈತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದ ಬೆಂಗಳೂರು ಕೃಷಿ ವಿವಿಉತ್ತಮ ರೈತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದ ಬೆಂಗಳೂರು ಕೃಷಿ ವಿವಿ

ಈ ಶಿಫಾರಸ್ಸಿನ ಆಧಾರದ ಮೇಲೆ ಶೈಕ್ಷಣಿಕ ಪರಿಷತ್ತು ಮತ್ತು ವ್ಯವಸ್ಥಾಪಕ ಆಡಳಿತ ಮಂಡಳಿಯು ಕೃಷಿ ಇಂಜಿನಿಯರಿಂಗ್ ವಿಭಾಗವನ್ನು ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯವಾಗಿ ಉನ್ನತೀಕರಿಸಲು ಶಿಫಾರಸ್ಸು ಮಾಡಿತ್ತು.

ಜೇನಿನ ಝೇಂಕಾರದಲ್ಲಿ ಲಾಭ ಕಂಡ ಕೊಪ್ಪಳ ರೈತನ ಕಥೆ!ಜೇನಿನ ಝೇಂಕಾರದಲ್ಲಿ ಲಾಭ ಕಂಡ ಕೊಪ್ಪಳ ರೈತನ ಕಥೆ!

ಕೃಷಿ ವಿಶ್ವವಿದ್ಯಾನಿಲಯವು 29.05.2017 ರಲ್ಲಿ ನಡೆದ 374 ನೇ ವ್ಯವಸ್ಥಾಪಕ ಆಡಳಿತ ಮಂಡಳಿಯ ಸಭೆಯಲ್ಲಿ ಸರ್ಕಾರಕ್ಕೆ ಪ್ರಸ್ತಾಪವನ್ನು ಸಲ್ಲಿಸುವಂತೆ ಶಿಫಾರಸ್ಸು ಮಾಡಿರುತ್ತದೆ. ಶಿಫಾರಸ್ಸಿನ ಅನ್ವಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದ್ದು, ಮನವಿಯನ್ನು ಪುರಷ್ಕರಿಸಿ ಕರ್ನಾಟಕ ಸರ್ಕಾರ 11.07.2018 ರಂದು ಕೃಷಿ ಇಂಜಿನಿಯರಿಂಗ್ ವಿಭಾಗವನ್ನು ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯವಾಗಿ ಉನ್ನತೀಕರಿಸಲು ಆದೇಶ ಜಾರಿಗೊಳಿಸಿದೆ.

ಕೈ ಕೊಟ್ಟ ತಂಬಾಕು, ರೈತರ ಜೇಬು ತುಂಬಿಸಿದ ಪರ್ಯಾಯ ಬೆಳೆಕೈ ಕೊಟ್ಟ ತಂಬಾಕು, ರೈತರ ಜೇಬು ತುಂಬಿಸಿದ ಪರ್ಯಾಯ ಬೆಳೆ

1965ರಲ್ಲಿ ಸ್ಥಾಪನೆ

1965ರಲ್ಲಿ ಸ್ಥಾಪನೆ

1963ರ ಘನ ರಾಜ್ಯ ಸರ್ಕಾರದ ಶಾಸನ ಸಭೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯವು ಅಂಗೀಕರಿಸಲ್ಪಟ್ಟು, ವಿಶ್ವವಿದ್ಯಾಲಯ ಕಾಯ್ದೆಯ (1963ರ ಕಾಯ್ದೆ 22) ಪ್ರಕಾರ ಸ್ಥಾಪಿಸಲ್ಪಟ್ಟಿತು. ಇದು ಅಕ್ಟೋಬರ್ 1, 1965 ರಿಂದ ಹೆಬ್ಬಾಳ ಆವರಣದಲ್ಲಿ ಕಾರ್ಯರಂಭಗೊಂಡಿತು. ವಿಶ್ವವಿದ್ಯಾನಿಲಯ ಕಾಯ್ದೆಯ ಅನ್ವಯ ಕೃಷಿ ಇಂಜಿನಿಯರಿಂಗ್ ವಿಭಾಗವನ್ನು ಕೃಷಿ ಮಹಾವಿದ್ಯಾಲಯದ ಪ್ರಮುಖ ವಿಭಾಗಗಳಲ್ಲಿ ಒಂದು ಎಂದು ಗುರುಸಲ್ಪಟ್ಟಿದೆ.

ಈ ವಿಶ್ವವಿದ್ಯಾನಿಲಯವು 1965 ರಲ್ಲಿ ಮೊದಲ ಬಾರಿಗೆ ವಿಭಾಗದ ಮುಖ್ಯಸ್ಥರನ್ನಾಗಿ ಪ್ರೊ.ಆರ್.ಎಫ್.ಪಾಟೀಲ್ ಅವರನ್ನು ನೇಮಕ ಮಾಡಿತು ಮತ್ತು ಅವರು ಸತತವಾಗಿ 1976 ಆಗಸ್ಟ್ ರವರೆಗೆ ಸೇವೆ ಸಲ್ಲಿಸಿರುತ್ತಾರೆ. ಪ್ರೊ..ಆರ್.ರಾಮಯ್ಯ ವಿಭಾಗದ ಮುಖ್ಯಸ್ಥರಾಗಿ ಫೆಬ್ರವರಿ 1995 ರವರೆಗೆ ಸೇವೆ ಸಲ್ಲಿಸಿರುತ್ತಾರೆ. ಒಟ್ಟಾರೆ, ಇಲ್ಲಿಯವರೆಗೆ ಹನ್ನೊಂದು ಪ್ರಾಧ್ಯಾಪಕರು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ಹೆಬ್ಬಾಳಕ್ಕೆ ಸ್ಥಳಾಂತರಗೊಂಡಿತು

ಹೆಬ್ಬಾಳಕ್ಕೆ ಸ್ಥಳಾಂತರಗೊಂಡಿತು

ಆರಂಭಿಕ ಹಂತದಲ್ಲಿ ಕೃಷಿ ಇಂಜಿನಿಯರಿಂಗ್ ವಿಭಾಗವು ಹೆಬ್ಬಾಳದ ಆಗ್ರೋ-ಇಂಡಸ್ಟ್ರೀಸ್ ಕಾರ್ಪೊರೇಷನ್ ಕಟ್ಟಡದಲ್ಲಿ ಸ್ಥಾಪಿತಗೊಂಡಿತ್ತು. ತರುವಾಯ ವಿಭಾಗವು ಮುಖ್ಯ ಸಂಶೋಧನಾ ಕೇಂದ್ರ ಹೆಬ್ಬಾಳದಲ್ಲಿ ಸ್ಥಳಾಂತರಗೊಂಡು ಭೋಧನೆಯ ಜೊತೆಯಲ್ಲಿಯೇ ಕೃಷಿ ಯಂತ್ರೋಪಕರಣಗಳ ಕುರಿತಾದ ಸಂಶೋಧನೆ ಮತ್ತು ಕೃಷಿ ಯಂತ್ರೋಪಕರಣಗಳ ದುರಸ್ಥಿ ಮತ್ತು ಕಾರ್ಯ ನಿರ್ವಣೆಯ ಸೇವಾ ಕೇಂದ್ರದ ಜವಬ್ದಾರಿಯನ್ನು ವಹಿಸಿಕೊಂಡು 1991 ರವರೆಗೆ ಕಾರ್ಯನಿರ್ವಹಿಸಿರುತ್ತದೆ. ತದನಂತರ ಜಿ.ಕೆ.ವಿ.ಕೆ., ಆವರಣಕ್ಕೆ ಸ್ಥಳಾಂತರಗೊಂಡಿತು.

ಮೊದಲಿನಿಂದ ಕೃಷಿ ಇಂಜಿನಿಯರಿಂಗ್ ವಿಭಾಗವು ಬಿ.ಎಸ್ಸಿ (ಕೃಷಿ) ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದರಲ್ಲಿ ತೊಡಗಿಸಿಕೊಂಡು ತರುವಾಯ 1974-75 ರಲ್ಲಿ ಎಂ.ಎಸ್ಸಿ (ಕೃಷಿ ಇಂಜಿನಿಯರಿಂಗ್) ಮಣ್ಣು ಮತ್ತು ನೀರು ಸಂರಕ್ಷಣೆ ಇಂಜಿನಿಯರಿಂಗ್ ಸ್ನಾತ್ತಕೋತ್ತರ ಪದವಿಯನ್ನು ಕೃಷಿ ಮಹಾವಿದ್ಯಾಲಯ ಧಾರವಾಡದಲ್ಲಿ ಆರಂಭಿಸಲಾಯಿತು.

ಕೃಷಿ ವಿಶ್ವವಿದ್ಯಾನಿಯಲ ವಿಭಜನೆ

ಕೃಷಿ ವಿಶ್ವವಿದ್ಯಾನಿಯಲ ವಿಭಜನೆ

ಆ ಸಮಯದಲ್ಲಿ ಹೆಚ್ಚಿನವರು ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ನಿಯೋಜನೆ ಅಡಿಯಲ್ಲಿ ವಿದ್ಯಾಭ್ಯಾಸ ಮಾಡಲು ಬಂದಿರುತ್ತಾರೆ. ನಂತರ 1985-86 ರಲ್ಲಿ ಕೃಷಿ ವಿಶ್ವವಿದ್ಯಾನಿಲಯವು ವಿಭಜನೆಗೊಂಡು ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಮತ್ತು ಕೃಷಿ ವಿಶ್ವವಿದ್ಯಾನಿಲಯ ಧಾರವಾಡ ಎಂದು ಭಾಗವಾಯಿತು.

ತದನಂತರ ಎಂ.ಎಸ್ಸಿ (ಕೃಷಿ ಇಂಜಿನಿಯರಿಂಗ್) ಸ್ನಾತ್ತಕೋತ್ತರ ಪದವಿಯನ್ನು ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇಲ್ಲಿ ಪ್ರಾರಂಭ ಮಾಡಲಾಯಿತು ಮತ್ತು 1992-93 ರಲ್ಲಿ ಎಂ.ಎಸ್ಸಿ (ಕೃಷಿ ಇಂಜಿನಿಯರಿಂಗ್)ನಲ್ಲಿ ಸಂಸ್ಕರಣೆ ಮತ್ತು ಆಹಾರ ಇಂಜಿನಿಯರಿಂಗ್ ಸ್ನಾತ್ತಕೋತ್ತರ ಪದವಿಯನ್ನು ಪ್ರಾರಂಭಿಸಲಾಯಿತು.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಕೃಷಿ ಇಂಜಿನಿಯರಿಂಗ್ ವಿಷಯದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಬಿ.ಟೆಕ್ (ಕೃಷಿ ಇಂಜಿನಿಯರಿಂಗ್) ಸ್ನಾತಕ ಪದವಿಯನ್ನು 1995-96 ನೇ ಸಾಲಿನಲ್ಲಿ 20 ವಿದ್ಯಾರ್ಥಿಗಳೊಂದಿಗೆ ಪ್ರಾರಂಭಿಸಿತು.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ

ಮುಂದಿನ ವರ್ಷಗಳಲ್ಲಿ ಕೃಷಿ ಇಂಜಿನಿಯರಿಂಗ್‍ನ ಬೇಡಿಕೆ ಹೆಚ್ಚಾಗಿ, ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಾಗತೊಡಗಿತು. ಈ ವರ್ಷ ವಿಧ್ಯಾರ್ಥಿಗಳ ಒಟ್ಟಾರೆ ಪ್ರವೇಶವನ್ನು 82ಕ್ಕೆ ಏರಿಕೆ ಮಾಡಲಾಗಿದೆ. ಇಲ್ಲಿಯವರೆಗೆ 544 ಬಿ.ಟೆಕ್ (ಕೃಷಿ ಇಂಜಿನಿಯರಿಂಗ್) ಸ್ನಾತಕ ಪದವಿಗಳನ್ನು, ಎಂ.ಟೆಕ್ (ಕೃಷಿ ಇಂಜಿನಿಯರಿಂಗ್)ನ ವಿಷಯಗಳಾದ ಮಣ್ಣು ಮತ್ತು ನೀರು ಇಂಜಿನಿಯರಿಂಗ್‍ನಲ್ಲಿ 113 ಮತ್ತು ಸಂಸ್ಕರಣೆ ಆಹಾರ ಇಂಜಿನಿಯರಿಂಗ್‍ನಲ್ಲಿ 106 ಸ್ನಾತ್ತಕೋತ್ತರ ಪದವಿಗಳನ್ನು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಿಗೆ ನೀಡಿರುತ್ತದೆ.

ಕೃಷಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚಿನ ಗೌರವ ಮತ್ತು ಪ್ರಶಸ್ತಿಗಳನ್ನು ಕೃಷಿ ವಿಶ್ವವಿದ್ಯಾನಿಲಯಕ್ಕೆ ತಂದುಕೊಟ್ಟಿರುವುದಲ್ಲದೇ ದೇಶದಾದ್ಯಂತ ಗುರುತಿಸಿಕೊಂಡಿದ್ದಾರೆ. ಕೃಷಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ದೇಶದ ಪ್ರಸಿದ್ಧ ಸಂಸ್ಥೆಗಳಾದ ಐ.ಎ.ಆರ್.ಐ, ಐ.ಐ.ಟಿ ಮತ್ತು ಐ.ಐ.ಎಂ. ನಂತಹ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶವನ್ನೂ ಪಡೆದಿದ್ದಾರೆ.

ಬಿ.ಟೆಕ್ (ಕೃಷಿ ಇಂಜಿನಿಯರಿಂಗ್) ವಿದ್ಯಾರ್ಥಿಗಳು 2016 ಮತ್ತು 2017 ನೇ ಸಾಲಿನಲ್ಲಿ ಸತತ ಎರಡು ವರ್ಷ ತಾಂತ್ರಿಕತೆ ಮತ್ತು ಇಂಜಿನಿಯರಿಂಗ್ ಗುಂಪಿನಲ್ಲಿ ಐ.ಸಿ.ಎ.ಆರ್ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಅತೀ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.

ಹೊಸ ತಂತ್ರಜ್ಞಾನದ ಸಂಶೋಧನೆ

ಹೊಸ ತಂತ್ರಜ್ಞಾನದ ಸಂಶೋಧನೆ

ಕೃಷಿಯಲ್ಲಿ ಹಲವು ತಂತ್ರಜ್ಞಾನ ಬಳಕೆಯಲ್ಲಿದ್ದು ಅವುಗಳನ್ನು ನಮ್ಮ ರಾಜ್ಯದ ಕೃಷಿಯಲ್ಲೂ ಅತೀ ಬೇಗನೆ ಮಾಡಬೇಕಾಗಿರುತ್ತದೆ. ಮುಂದುವರಿದು ಇಂದಿನ ಸಮಸ್ಯೆಗಳಾದ ಹವಾಮಾನ ವೈಪರೀತ್ಯ ಮತ್ತು ಬದಲಾದ ಹವಾಮಾನ ಪರಿಸ್ಥಿತಿಗೆ ಬೇಕಾದ ಸಮರ್ಥನೀಯ ಬೇಸಾಯ ಪದ್ಧತಿಗಳು, ಹಸಿರು ಮನೆ ಮತ್ತು ಜಲ ಕೃಷಿಗಳ ತಂತ್ರಜ್ಞಾನಗಳು ಅತೀ ಪ್ರಾಮುಖ್ಯವಾಗಿವೆ.

ಕೃಷಿ ಉತ್ಪನ್ನಗಳು ಉತ್ತಮವಾಗಿ ಲಾಭದಾಯಕವಾಗಬೇಕಾದರೆ ರೈತರು ಬೆಳೆದಂತಹ ಬೆಳೆಯ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಆಗಬೇಕಾಗುತ್ತದೆ. ಈ ದಿಸೆಯಲ್ಲಿ ನ್ಯಾನೋ ತಂತ್ರಜ್ಞಾನ, ಆಧುನಿಕ ತಂತ್ರಜ್ಞಾನ, ಆಹಾರದ ಭದ್ರತೆ ಹಾಗೂ ಸುರಕ್ಷತೆ ಕ್ರಮಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಿ, ಅಳವಡಿಸಿ ಹೆಚ್ಚು ಹೆಚ್ಚು ರಫ್ತು ಮಾಡಲು ಅನುವು ಮಾಡಿಕೊಡಬೇಕಾಗಿರುತ್ತದೆ. ಈ ಎಲ್ಲಾ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಕೃಷಿ ಇಂಜಿನಿಯರಿಂಗ್ ಪದವೀಧರರ ಪಾತ್ರ ಬಹು ಮುಖ್ಯವಾಗಿದೆ.

English summary
Karnataka government ordered to convert GKVK agricultural college to Agricultural University. Agricultural University established in 1965 at Gandhi Krishi Vignana Kendra (GKVK) Hebbal, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X