ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಬಸ್‌ ನಿಲ್ದಾಣದ ಇತಿಹಾಸದ ಬಗ್ಗೆ ಮಾಹಿತಿ ನೀಡಿ, ಬಹುಮಾನ ಗೆಲ್ಲಿ

|
Google Oneindia Kannada News

ಬೆಂಗಳೂರು, ಮೇ 18: ಸಾಮಾನ್ಯವಾಗಿ ಬೆಂಗಳೂರಿಗೆ ಬರುವವರಿಗೆ ಅಥವಾ ಇಲ್ಲಿಯೇ ಇರುವವರಿಗೆ ಕೆಂಪೇಗೌಡ ಬಸ್‌ ನಿಲ್ದಾಣವೆಂದರೆ ತಿಳಿದಿದೆ.

ಆದರೆ ಈ ನಿಲ್ದಾಣದ ಮಹತ್ವ ಎಷ್ಟು ಮಂದಿಗೆ ಗೊತ್ತಿದೆ ಹೇಳಿ. ದಿನಾ ಸಾವಿರಾರು ಮಂದಿ ಬಸ್ ನಿಲ್ದಾಣಕ್ಕೆ ಬರುತ್ತಾರೆ ಆದರೆ ಬಸ್ ನಿಲ್ದಾಣದ ಇತಿಹಾಸದ ಬಗ್ಗೆ ತಿಳಿದಿರುವುದು ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕೆಎಸ್‌ಆರ್‌ಟಿಸಿ ಕೆಂಪೇಗೌಡ ಬಸ್‌ ನಿಲ್ದಾಣವು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹೆಮ್ಮೆಯ ಪ್ರತೀಕ ಕೆಂಪೇಗೌಡದ ಇತಿಹಾಸದ ಬಗ್ಗೆ ಮಾಹಿತಿ ನೀಡಿ , ಉಚಿತ ಪ್ರಯಾಣದ ಅವಕಾಶವನ್ನು ಗೆಲ್ಲಲು ಅವಕಾಶ ಮಾಡಿಕೊಟ್ಟಿದೆ.

Give information about kempegowda bus station history and win prize

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹುಟ್ಟು, ಮತ್ತು ವಿಕಸನವು ಹಲವು ರೋಚಕ ಮಾಹಿತಿಯನ್ನು ಹೊಂದಿದೆ. ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಪ್ರಯಾಣಿಕರ ಸಂಪರ್ಕ ನಾಡಿಯಾಗಿದ್ದು, ಗ್ರಾಮಾಂತರ ಸಾರಿಗೆ,ನಗರ ಸಾರಿಗೆ, ರೈಲ್ವೆ, ಮೆಟ್ರೋ ಹೀಗೆ ಎಲ್ಲಾ ರೀತಿಯ ಸಾರಿಗೆ ಸಂಪರ್ಕವನ್ನು ಕಲ್ಪಿಸುವ ದೇಶದ ಏಕೈಕ ಬಸ್ ನಿಲ್ದಾಣ ಎನ್ನುವ ಹಿರಿಮೆಗೆ ಪಾತ್ರವಾಗಿದೆ.

ಈ ಬಸ್ ನಿಲ್ದಾಣದ ವರ್ಷಗಳ ಸುದೀರ್ಘ ಪಯಣದ ಬಗ್ಗೆ ಮೌಲ್ಯಾಧಾರಿತ ಮತ್ತು ಅಧಿಕೃತ ಮಾಹಿತಿ , ಇತಿಹಾಸ, ಚಿತ್ರಗಳು, ಕತೆಗಳು, ಲೇಖನಗಳನ್ನು ನಾಗರಿಕರಿಂದ ಆಹ್ವಾನಿಸಲಾಗಿದೆ.

ಬಿಎಂಟಿಸಿ ವಿದ್ಯಾರ್ಥಿ ಪಾಸ್‌ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಬಿಎಂಟಿಸಿ ವಿದ್ಯಾರ್ಥಿ ಪಾಸ್‌ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

ವಿಜೇತರಿಗೆ ಕೆಎಸ್‌ಆರ್‌ಟಿಸಿ ಅಂಬಾರಿ ಡ್ರೀಮ್ ಕ್ಲಾಸ್, ಮಲ್ಟಿ ಆಕ್ಸೆಲ್ ಸ್ಲೀಪರ್ ಬಸ್‌ನಲ್ಲಿ ಅವರ ಆಯ್ಕೆಯ ಒಂದು ಮಾರ್ಗದಲ್ಲಿ- ಎರ್ನಾಕುಲಂ, ಪುಣೆ, ಸಿಕಂದರಾಬಾದ್, ವಿಜಯವಾಡಕ್ಕೆ ಹೋಗಿಬರುವ ಪ್ರಯಾಣಕ್ಕೆ ಉಚಿತ ಟಿಕೆಟ್ ನೀಡಲಾಗುತ್ತದೆ.

ವಿವರಗಳನ್ನು [email protected], Facebook: facebook/KSRTC.Karnataka

Twitter- Twitter/KSRTC_journeys ಗೆ ಮೇ 25ರೊಳಗೆ ಕಳುಹಿಸಬೇಕು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ ತಿಳಿಸಿದ್ದಾರೆ.

English summary
Here is the chance, Give some valuable information about Majastic Kempegowda KSRTC Bus station history. and you will get Free ticket for the Ernakulam, pune, sikhanderabad, vijayavada one of the place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X