ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಕ್ ಪರ ಘೋಷಣೆ, ಆರೋಪಿಗಳಿಗೆ ವಾದಕ್ಕೆ ಅವಕಾಶ ಕೊಡಿ: ಹೈಕೋರ್ಟ್

|
Google Oneindia Kannada News

ಬೆಂಗಳೂರು, ಫೆಬ್ರವರಿ 26: ಪಾಕಿಸ್ತಾನ ಸೇನೆ ಹೊಗಳುವ ಹಾಡು ಹಾಡಿದ್ದ ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳಿಗೆ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಹೈಕೋರ್ಟ್ ಸೂಚಿಸಿದೆ.

'ಉಗ್ರ ಕಸಬ್‌ ಗೆ ತನ್ನ ವಾದ ಮಂಡಿಸಲು ಅವಕಾಶ ಮಾಡಿಕೊಟ್ಟ ದೇಶ ನಮ್ಮದು, ಹಾಗಾಗಿ ಈ ವಿದ್ಯಾರ್ಥಿಗಳಿಗೆ ವಾದ ಮಂಡಿಸಲು ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೈಕೋರ್ಟ್ ಹೇಳಿದೆ.

ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದವರನ್ನು ಮತ್ತೆ ಬಂಧಿಸಿದ ಪೊಲೀಸರುಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದವರನ್ನು ಮತ್ತೆ ಬಂಧಿಸಿದ ಪೊಲೀಸರು

ಪಾಕ್ ಪರ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಪರವಾಗಿ ವಕಾಲತ್ತು ವಹಿಸದಿರುವಂತೆ ಹುಬ್ಬಳ್ಳಿ ವಕೀಲರ ಸಂಘ ನಿರ್ಧರಿಸಿದ್ದಲ್ಲದೆ, ಯಾವ ವಕೀಲರು ವಕಾಲತ್ತು ವಹಿಸಬಾರದೆಂದು ಹೇಳಿತ್ತು, ಇದರ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ.

Give Chance To Accussed To Defend Their Act: High Court

'ಜಾಮೀನು ಕೊಡುವುದು ಬಿಡುವುದು ಕೆಳನ್ಯಾಯಾಲಯದ ವಕೀಲರ ವಿವೇಚನೆ ಹಾಗೂ ಕಾನೂನಿಗೆ ಬಿಟ್ಟದ್ದು, ವಕಾಲತ್ತು ಹಾಕುವುದನ್ನೇ ತಡೆಯುವುದು ಸರಿಕಾಣುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಓಕಾ ಅಭಿಪ್ರಾಯಪಟ್ಟರು.

ಒಂದು ವೇಳೆ ಹುಬ್ಬಳ್ಳಿಯಲ್ಲಿ ಯಾರೂ ವಕಾಲತ್ತು ವಹಿಸಲಿಲ್ಲವೆಂದರೆ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಿ, ಬೆಂಗಳೂರಿಗೆ ವರ್ಗಾಯಿಸುವಂತಿದ್ದರೆ ಆ ಬಗ್ಗೆ ನಾಳೆಯೇ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಎಂದು ನ್ಯಾಯಾಧೀಶರು ಹೇಳಿದರು.

ಪಾಕಿಸ್ತಾನ ಪರ ಘೋಷಣೆ; ಹುಬ್ಬಳ್ಳಿಯ ವಿದ್ಯಾರ್ಥಿಗಳು ಬಿಡುಗಡೆಪಾಕಿಸ್ತಾನ ಪರ ಘೋಷಣೆ; ಹುಬ್ಬಳ್ಳಿಯ ವಿದ್ಯಾರ್ಥಿಗಳು ಬಿಡುಗಡೆ

ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನ ಸೇನೆಯನ್ನು ಹೊಗಳುವ ಹಾಡನ್ನು ಹಾಡಿ ಅದರ ವಿಡಿಯೋ ರೆಕಾರ್ಡ್ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು, ಕಾಲೇಜಿನ ಪ್ರಾಂಶುಪಾಲರೇ ವಿದ್ಯಾರ್ಥಿಗಳ ವಿರುದ್ಧ ಕೇಸು ದಾಖಲಿಸಿದ್ದರು. ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

English summary
High court said, give chance defend their act to Kashmiri students who said pro Pakistan slogans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X