ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಡಿಯುವುದಕ್ಕೆ ಮುಂಚೆಯೇ ಅಂಗಡಿ ಮುಂದೆ ತಲೆತಿರುಗಿ ಬಿದ್ದ ಯುವತಿ

|
Google Oneindia Kannada News

ಬೆಂಗಳೂರು, ಮೇ 4: ಸರ್ಕಾರ ಇಂದಿನಿಂದ ಮಧ್ಯ ಮಾರಾಟಕ್ಕೆ ಅವಕಾಶ ನೀಡಿದೆ. ರಾಜ್ಯದ ಬಹುತೇಕ ಜಿಲ್ಲೆಯ ಬಾರ್‌ಗಳ ಮುಂದೆ ಜನ ಕ್ಯೂ ನಿಂತು ಮದ್ಯ ಖರೀದಿಗೆ ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿಯೂ ಜನ ಮದ್ಯದ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಂತಿದ್ದಾರೆ. ಎಂ ಜಿ ರೋಡ್‌ನಲ್ಲಿರುವ ಬಾರ್‌ವೊಂದರ ಮುಂದೆ ಯುವತಿ ತಲೆತಿರುಗಿ ಬಿದ್ದಿದ್ದಾರೆ. ಟಾನಿಕ್ ವೈನ್ ಶಾಪ್ ಮುಂದೆ ಈ ಘಟನೆ ನಡೆದಿದೆ.

ರಾಜ್ಯಾದ್ಯಂತ ಮದ್ಯ ಮಾರಾಟ ಆರಂಭ; ಎಣ್ಣೆ ಎಫೆಕ್ಟ್ ಯಾವ ಜಿಲ್ಲೆಯಲ್ಲಿ ಹೇಗಿದೆ?ರಾಜ್ಯಾದ್ಯಂತ ಮದ್ಯ ಮಾರಾಟ ಆರಂಭ; ಎಣ್ಣೆ ಎಫೆಕ್ಟ್ ಯಾವ ಜಿಲ್ಲೆಯಲ್ಲಿ ಹೇಗಿದೆ?

ಇಂದಿನಿಂದ ಮದ್ಯ ಖರೀದಿ ಮಾರಬಹುದಾಗಿದ್ದು, ಯುವತಿ ತನ್ನ ಸ್ನೇಹಿತೆಯೊಂದಿಗೆ ಮದ್ಯ ಖರೀದಿ ಮಾಡಲು ಎಂ ಜಿ ರೋಡ್‌ನಲ್ಲಿರುವ ಟಾನಿಕ್ ವೈನ್ ಶಾಪ್‌ಗೆ ಬಂದಿದ್ದರು. ಆದರೆ, ಮದ್ಯ ಖರೀದಿಗೆ ಮೊದಲೇ, ಅಂಗಡಿಯ ಮುಂದೆ ತಲೆ ಸುತ್ತಿ ಬಿದ್ದಿದ್ದಾರೆ.

Girl Fell Down Headache In Tonic Shop MG Road

ತಲೆ ತಿರುಗಿ ಬಿದ್ದ ಯುವತಿಯ ಸಹಾಯಕ್ಕೆ ಅಲ್ಲೇ ಇದ್ದ ಜನರು ಬಂದಿದ್ದಾರೆ. ಆಕೆಯನ್ನು ಕುರ್ಚಿ ಮೇಲೆ ಕೂರಿಸಿ ನೀರು ನೀಡಿದ್ದಾರೆ. ಬೆಳಗ್ಗೆಯಿಂದ ತಿಂಡಿ ತಿನ್ನದೆ ಕ್ಯೂನಲ್ಲಿ ನಿಂತಿದ್ದ ಕಾರಣ ತಲೆಸುತ್ತು ಬಂದಿದೆ ಎಂದು ಯುವತಿ ಹೇಳಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇರಲಿಲ್ಲ. ಇಂದಿನಿಂದ ಮದ್ಯ ಸಿಗುತ್ತದೆ ಎನ್ನುವ ಖುಷಿಯಲ್ಲಿ ತಿಂಡಿ ತಿನ್ನದೆ ಬಂದ ಯುವತಿ ಅಂಗಡಿ ಮುಂದೆ ತಲೆ ಸತ್ತಿ ಬಿದ್ದಿದ್ದಾರೆ.

ಇಂದಿನಿಂದ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡದೆ. ಪಾರ್ಸಲ್ ತೆಗೆದುಕೊಂಡು ಹೋಗಿ ಮನೆಯಲ್ಲಿ ಮದ್ಯ ಸೇವನೆ ಮಾಡಬಹುದಾಗಿದೆ. ಬಾರ್‌ ಅಥವಾ ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವನೆ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.

English summary
A girl fell down headache in tonic shop mg road, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X