ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಸಿದ ವೃದ್ದೆಗೆ ದಿನಸಿ ನೀಡಿದ ಗಿರಿ ನಗರ ಪೊಲೀಸರು

|
Google Oneindia Kannada News

ಬೆಂಗಳೂರು, ಮೇ 13: ಎರಡು ದಿನದಿಂದ ಉಪವಾಸವಿದ್ದ ವೃದ್ದೆಗೆ ದಿನಸಿ ಸಾಮಗ್ರಿಗಳನ್ನು ನೀಡಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಗಿರಿ ನಗರ ಪೊಲೀಸರು ವೃದ್ದೆಗೆ ಸಹಾಯ ಮಾಡಿದ್ದಾರೆ.

ಲಾಕ್‌ಡೌನ್ ನಿಂದ ವಿದ್ಯಾನಗರದ ಪದ್ಮಾ ಎಂಬ ವೃದ್ಧೆ ಹಸಿವಿನಿಂದ ಬಳಲುತ್ತಿದ್ದರು. ದಿನಸಿ ಇಲ್ಲದೆ, ಊಟಕ್ಕಾಗಿ ಪರದಾಟ ನಡೆಸಿದ್ದರು. ಎರಡು ದಿನದಿಂದ ತುಂಬ ಕಷ್ಟವಾಗಿತ್ತು. ಆಗ ತಮ್ಮ ಸಮಸ್ಯೆಯನ್ನು ನಗರ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಬಳಿ ಹೇಳಿಕೊಂಡಿದ್ದರು.

ಅನಾಥ ಶವಗಳಿಗೆ ಮುಕ್ತಿದಾತ ಚಾಮರಾಜನಗರದ ಈ ಪೊಲೀಸ್‌ ಅಧಿಕಾರಿಅನಾಥ ಶವಗಳಿಗೆ ಮುಕ್ತಿದಾತ ಚಾಮರಾಜನಗರದ ಈ ಪೊಲೀಸ್‌ ಅಧಿಕಾರಿ

ಸಮಸ್ಯೆ ಆಲಿಸಿ ಗಿರಿ ನಗರ ಪೊಲೀಸರಿಗೆ ಸಹಾಯ ಮಾಡುವಂತೆ ಡಿಸಿಪಿ ನಿಶಾ ಜೇಮ್ಸ್ ಸೂಚನೆ ನೀಡಿದ್ದರು. ಬಳಿಕ ಇನ್ ಸ್ಪೆಕ್ಟರ್ ಸಿದ್ದಲಿಂಗಯ್ಯ ಅವರಿಂದ ವೃದ್ದೆ ರೇಷನ್ ವಿತರಣೆ ಮಾಡಲಾಗಿದೆ. ಅಕ್ಕಿ, ಗೋಧಿ, ಬೇಳೆ ಸೇರಿದಂತೆ ದಿನಸಿ ಪದಾರ್ಥಗಳ ವಿತರಣೆ ನೀಡಿದ್ದಾರೆ.

Girinagar Police Distributed Ration To Old Woman

ದಿನಸಿ ತೆಗೆದುಕೊಂಡು ವೃದ್ಧೆ ಸಂತೋಷಗೊಂಡರು. ಕಷ್ಟದಲ್ಲಿ ಸಹಾಯ ಮಾಡಿದ ಪೊಲೀಸರಿಗೆ ಆರ್ಶೀವಾದ ಮಾಡಿದರು. ಲಾಕ್‌ಡೌನ್‌ನಿಂದ ಊಟಕ್ಕೆ ಕಷ್ಟಪಡುತ್ತಿದ್ದ ವೃದ್ದೆ ಸ್ವಲ್ಪ ದಿನವಾದರೂ ಸಮಾಧಾನವಾಗಿ ಇರುವಂತಾಗಿದೆ.

English summary
Girinagar police station police distributed ration to old woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X