ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಹನ ವಿಮೆ ನವೀಕರಣದಲ್ಲಿ ವಿನಾಯಿತಿ ಇಲ್ಲ: ಜಿಐ ಕೌನ್ಸಿಲ್ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಆಗಸ್ಟ್ 29: ವಾಹನಗಳ ವಿಮೆ ಪಾಲಿಸಿಗಳು ಆಯಾ ಸಮಯಕ್ಕೆ ಸರಿಯಾಗಿ ನವೀಕರಣಗೊಳ್ಳಬೇಕು ಎಂದು ಜನರಲ್ ಇನ್ಶೂರೆನ್ಸ್ ಕೌನ್ಸಿಲ್ ಸ್ಪಷ್ಟಪಡಿಸಿದೆ.

ಚಾಲನಾ ಪರವಾನಗಿ, ಫಿಟ್ನೆಸ್ ಸರ್ಟಿಫಿಕೇಟ್ ಮತ್ತು ಇತರೆ ಸಂಬಂಧಿತ ದಾಖಲೆಗಳು ಸೇರಿದಂತೆ ಎಲ್ಲ ವಾಹನ ದಾಖಲಾತಿಗಳ ವ್ಯಾಲಿಡಿಟಿಯನ್ನು 2020ರ ಫೆಬ್ರವರಿಯಿಂದ 2020ರ ಡಿಸೆಂಬರ್ 31ರವರೆಗೆ ವಿಸ್ತರಿಸಿ ರಸ್ತೆ ಸಾರಿಗೆ ಸಚಿವಾಲಯ ಸೂಚನೆ ಹೊರಡಿಸಿತ್ತು. ಆದರೆ ಇದರೊಳಗೆ ವಾಹನ ವಿಮೆ ಪತ್ರಗಳು ಒಳಗೊಳ್ಳುವುದಿಲ್ಲ ಎಂದು ಜಿಐ ಕೌನ್ಸಿಲ್ ತಿಳಿಸಿದೆ.

ವಿಮೆ ಕಾಯ್ದೆ 1938ರ ಅಡಿ ಸ್ಥಾಪನೆಯಾದ ವಿಮಾ ಕಂಪೆನಿಗಳ ಪ್ರಾತಿನಿಧಿಕ ಸಂಸ್ಥೆ ಜಿಐ ಕೌನ್ಸಿಲ್, ಮೋಟಾರ್ ವಿಮೆಗಳು ಈ ಹಿಂದಿನಂತೆಯೇ ಮೊದಲೇ ನವೀಕರಣಗೊಳ್ಳಬೇಕಿದೆ ಎಂದು ಹೇಳಿದೆ.

GI Council Clarifies Vehicle Insurance Policies To Be Renewed On Time

'ರಸ್ತೆ ಸಾರಿಗೆ ಸಚಿವಾಲಯವು 2020ರ ಆಗಸ್ಟ್ 24ರಂದು ರಾಜ್ಯ ಸರ್ಕಾರಗಳಿಗೆ ನೀಡಿರುವ ಸಲಹೆಯಲ್ಲಿ ವಾಹನ ದೃಢತೆ ಪ್ರಮಾಣಪತ್ರ, ಪರವಾನಗಿ, ಚಾಲನಾ ಪರವಾನಗಿ ಮತ್ತು ನೋಂದಣಿ ಪ್ರಮಾಣಪತ್ರಗಳ ಅವಧಿಯ ವಿಸ್ತರಣೆಗಷ್ಟೇ ತಿಳಿಸಿದೆ' ಎಂದು ಜಿಐ ಕೌನ್ಸಿಲ್ ಹೇಳಿಕೆ ನೀಡಿದೆ.

'ಎಲ್ಲ ವಾಹನ ವಿಮೆ ಹೊಂದಿರುವ ಜನರಿಗೆ ತಿಳಿಸುವುದೇನೆಂದರೆ ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿರುವ ಪತ್ರ ಮೋಟಾರು ವಿಮೆ ಪಾಲಿಸಿಗಳನ್ನು ಒಳಗೊಂಡಿರುವುದಿಲ್ಲ. ಹೀಗಾಗಿ ಅವುಗಳನ್ನು ನವೀಕರಣದ ದಿನಾಂಕಕ್ಕೆ ಸರಿಯಾಗಿ ನವೀಕರಣ ಮಾಡಲೇಬೇಕು. ಎಲ್ಲ ವಾಹನ ಮಾಲೀಕರು ವಿಮೆ ಪಾಲಿಸಿಗಳನ್ನು ಅದರ ಅಂತಿಮ ದಿನಾಂಕದ ಒಳಗೆ ನವೀಕರಣ ಮಾಡುವ ಮೂಲಕ ವಿಮೆ ಪಾಲಿಸಿಗಳ ವ್ಯಾಲಿಡಿಟಿಯನ್ನು ಮುಂದುವರಿಸಿಕೊಳ್ಳಬೇಕು' ಎಂದು ತಿಳಿಸಿದೆ.

English summary
GI Council said the Ministry of Road Transport notification of extending validity of all vehicle documents does not include insurance policies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X