ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ : ಎಲ್ಲಿ, ಏನು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 08 : ಅಕ್ಟೋಬರ್‌ನಿಂದ ಬೆಂಗಳೂರು ನಗರದಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಗೊಳಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ನಗರದ ಹೃದಯ ಭಾಗದಲ್ಲಿನ 85 ರಸ್ತೆಗಳ ಪೈಕಿ 56 ರಸ್ತೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಪಾರ್ಕಿಂಗ್ ನೀತಿಯನ್ನು ರೂಪಿಸಿತ್ತು. ಹಿಂದೆಯೇ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದ್ದು, ಅಕ್ಟೋಬರ್‌ನಿಂದ ಇದನ್ನು ಜಾರಿಗೆ ತರಲು ನಿರ್ಧರಿಸಲಾಗಿದ್ದು, ಟೆಂಡರ್ ಕರೆಯಲಾಗಿದೆ. [ಬೆಂಗಳೂರಲ್ಲಿ ಪಾರ್ಕಿಂಗ್ ಗೆ ಶುಲ್ಕ ಕಟ್ಟಬೇಕು]

ನಗರದ ಹೃದಯ ಭಾಗದ 56 ರಸ್ತೆಗಳಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ಬರಲಿದೆ. ಇದಕ್ಕಾಗಿ ರಸ್ತೆಗಳನ್ನು ಎ (ಪ್ರೀಮಿಯಂ), ಬಿ (ವಾಣಿಜ್ಯ), ಸಿ (ಸಾಮಾನ್ಯ) ಎಂದು ವಿಂಗಡನೆ ಮಾಡಲಾಗಿದೆ. ಎ ಪ್ಯಾಕೇಜ್ ರಸ್ತೆಯಲ್ಲಿ ದ್ವಿಚಕ್ರವಾಹನವನ್ನು 1 ಗಂಟೆ ನಿಲ್ಲಿಸಲು 15 ರೂ., ಕಾರನ್ನು ಒಂದು ಗಂಟೆ ನಿಲ್ಲಿಸಲು 30 ರೂ. ಪಾವತಿ ಮಾಡಬೇಕು. [ಬೆಂಗಳೂರು ಪಾರ್ಕಿಂಗ್ ವ್ಯವಸ್ಥೆ ಸರಿ ಮಾಡಿ]

ಸಿರ್ಸಿ ಸರ್ಕಲ್, ನಗರ ರೈಲು ನಿಲ್ದಾಣ, ಲಾಲ್ ಬಾಗ್, ಕಬ್ಬನ್ ಪಾರ್ಕ್, ಹಲಸೂರು, ಗಾಲ್ಫ್ ಕೋರ್ಸ್ ಸೇರಿದಂತೆ ಹಲವು ರಸ್ತೆಗಳಲ್ಲಿ ಈಗಾಗಲೇ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ತರಲು ಪರಿಶೀಲನೆ ನಡೆಸಲಾಗಿದೆ. ಯಾವ ರಸ್ತೆಗಳಲ್ಲಿ ಇದು ಜಾರಿಗೆ ಬರಲಿದೆ....ಇಲ್ಲಿವೆ ವಿವರ

56 ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ಕಟ್ಟಬೇಕು

56 ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ಕಟ್ಟಬೇಕು

ಬೆಂಗಳೂರು ನಗರದ 56 ರಸ್ತೆಗಳಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಪಾರ್ಕಿಂಗ್ ನೀತಿಯನ್ನು ರೂಪಿಸಿತ್ತು. ಇದಕ್ಕೆ ಬಿಬಿಎಂಪಿ ಕೌನ್ಸಿಲ್ ಸಭೆ ಒಪ್ಪಿಗೆ ನೀಡಿದ್ದು, ಅಕ್ಟೋಬರ್‌ನಿಂದ ಜಾರಿಗೆ ಬರುವ ಸಾಧ್ಯತೆ ಇದೆ.

ಪಾರ್ಕಿಂಗ್‌ಗೆ ಆಧುನಿಕ ವ್ಯವಸ್ಥೆಗಳು

ಪಾರ್ಕಿಂಗ್‌ಗೆ ಆಧುನಿಕ ವ್ಯವಸ್ಥೆಗಳು

ಶುಲ್ಕ ವಿಧಿಸುವ ಮೀಟರ್‌, ಮೊಬೈಲ್‌ ಅಪ್ಲಿಕೇಶನ್‌, ರಸ್ತೆ ಮಾರ್ಗಸೂಚಿ, ನಿಲುಗಡೆ ವ್ಯವಸ್ಥೆ ಹೊಂದಿದ ರಸ್ತೆಗಳ ಸ್ಥಳಾವಕಾಶದ ಕ್ಷಣ ಕ್ಷಣದ ಮಾಹಿತಿ, ಪಾರ್ಕಿಂಗ್‌ ಅಂಕಣಗಳಲ್ಲಿ ಸಿ.ಸಿ ಕ್ಯಾಮೆರಾಗಳ ಅಳವಡಿಕೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಸ್ಮಾರ್ಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕವೂ ಹಣ ಪಾವತಿ ಮಾಡಲು ಅವಕಾಶ ನೀಡಲಾಗುತ್ತದೆ.

ರಸ್ತೆಗಳನ್ನು ವಿಂಗಡನೆ ಮಾಡಲಾಗಿದೆ

ರಸ್ತೆಗಳನ್ನು ವಿಂಗಡನೆ ಮಾಡಲಾಗಿದೆ

ಮೊದಲ ಹಂತದಲ್ಲಿ ನಗರದ ಹೃದಯ ಭಾಗದಲ್ಲಿನ 85 ರಸ್ತೆಗಳ ಪೈಕಿ 56 ರಸ್ತೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದಕ್ಕಾಗಿ ರಸ್ತೆಗಳನ್ನು ಇದಕ್ಕಾಗಿ ರಸ್ತೆಗಳನ್ನು ಎ (ಪ್ರೀಮಿಯಂ), ಬಿ (ವಾಣಿಜ್ಯ), ಸಿ (ಸಾಮಾನ್ಯ) ಎಂದು ವಿಂಗಡನೆ ಮಾಡಲಾಗಿದೆ. ಎ ಪ್ಯಾಕೇಜ್ ರಸ್ತೆಯಲ್ಲಿ ದ್ವಿಚಕ್ರವಾಹನವನ್ನು 1 ಗಂಟೆ ನಿಲ್ಲಿಸಲು 15 ರೂ., ಕಾರನ್ನು ಒಂದು ಗಂಟೆ ನಿಲ್ಲಿಸಲು 30 ರೂ. ಪಾವತಿ ಮಾಡಬೇಕು. ಸೈಕಲ್‌ಗೆ ಪಾರ್ಕಿಂಗ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

'ಎ' ಶ್ರೇಣಿಯ ರಸ್ತೆಗಳು

'ಎ' ಶ್ರೇಣಿಯ ರಸ್ತೆಗಳು

ಎ ಶ್ರೇಣಿಯ ರಸ್ತೆಯಲ್ಲಿ 1 ಗಂಟೆ ಕಾರು ಪಾರ್ಕ್ ಮಾಡಲು 30 ಮತ್ತು ಬೈಕ್‌ಗೆ 15 ರೂ. ಶುಲ್ಕವಿರುತ್ತದೆ. 'ಎ'ಶ್ರೇಣಿಯ ರಸ್ತೆಗಳ ವ್ಯಾಪ್ತಿಗೆ ಅವೆನ್ಯೂ ರಸ್ತೆ, ಎಸ್‌.ಸಿ.ರಸ್ತೆ, ರೇಸ್ ಕೋರ್ಸ್ ಲೂಪ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ಕಮರ್ಷಿಯಲ್ ಸ್ಟೀಟ್, ಎಂ.ಜಿ.ರೋಡ್, ಬ್ರಿಗೇಡ್ ರೋಡ್, ರಾಜಾರಾಮ್ ಮೋಹನ್ ರಾಯ್ ರಸ್ತೆ, ಕಸ್ತೂರಬಾ ರಸ್ತೆ, ಲಾಲ್ ಬಾಗ್ ರಸ್ತೆ, ಎನ್‌.ಆರ್.ರಸ್ತೆ ಸೇರಲಿವೆ.

ಇವು 'ಬಿ' ಶ್ರೇಣಿಯ ರಸ್ತೆಗಳು

ಇವು 'ಬಿ' ಶ್ರೇಣಿಯ ರಸ್ತೆಗಳು

'ಬಿ'ಶ್ರೇಣಿಯ ರಸ್ತೆಗಳಲ್ಲಿ 1 ಗಂಟೆ ಕಾರು ನಿಲ್ಲಿಸಲು 20, ಬೈಕ್ ನಿಲ್ಲಿಸಲು 10 ರೂ. ಶುಲ್ಕ ಪಾವತಿಸಬೇಕು. ಎಸ್‌.ಪಿ.ರಸ್ತೆಯ 6ನೇ ಕ್ರಾಸ್ 5ನೇ ಮುಖ್ಯರಸ್ತೆ, ಧನ್ವಂತ್ರಿ ರಸ್ತೆ, ನೃಪತುಂಗಾ ರಸ್ತೆ, ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ಕಾಳಿದಾಸ ಮಾರ್ಗ, ಲಿಂಕ್ ರಸ್ತೆ, ರಾಮಚಂದ್ರ ರಸ್ತೆ, ಲೇಡಿ ಕರ್ಜನ್ ರಸ್ತೆ, ಕ್ರೆಸೆಂಟ್ ರಸ್ತೆ, ಮಿಲ್ಲರ್ಸ್ ರಸ್ತೆ, ಸೆಂಟ್ ಜಾನ್ಸ್ ರಸ್ತೆ, ಚರ್ಚ್ ರಸ್ತೆ ಮುಂತಾದವು.

'ಸಿ' ಶ್ರೇಣಿಯ ರಸ್ತೆಗಳು

'ಸಿ' ಶ್ರೇಣಿಯ ರಸ್ತೆಗಳು

'ಸಿ' ಶ್ರೇಣಿಯ ರಸ್ತೆಗಳಲ್ಲಿ 1 ಗಂಟೆ ಕಾರು ನಿಲ್ಲಿಸಲು 15 ರೂ., ಬೈಕ್‌ನಿಲ್ಲಿಸಲು 5 ರೂ. ಪಾವತಿ ಮಾಡಬೇಕು. ಪಂಪ ಮಹಾಕವಿ ರಸ್ತೆ, ಬನಪ್ಪ ಪಾರ್ಕ್, ಸುಲ್ತಾನ್ ಪೇಟೆ ರಸ್ತೆ, ಶಿವಾಜಿ ರಸ್ತೆ, ಲ್ಯಾವೆಲ್ಲೆ ರಸ್ತೆ, ಬಳೆ ಪೇಟೆ ರಸ್ತೆ, ಕಾಮರಾಜ ರಸ್ತೆ, ಕಾನ್ವೆಂಟ್ ರಸ್ತೆ, ಸ್ಯಾಂಕಿ ರಸ್ತೆ, ಪೊಲೀಸ್ ಸ್ಟೇಷನ್ ರಸ್ತೆ ಮುಂತಾದವು 'ಸಿ' ಶ್ರೇಣಿಯ ರಸ್ತೆಗಳಾಗಿವೆ.

English summary
Get ready to pay for parking from October in Bengaluru city 56 roads. Bruhat Bangalore Mahanagara Palike (BBMP) ready for bringing back paid parking in city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X