ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಬಡಾವಣೆಯಲ್ಲಿ ಸೈಟ್‌ಗಾಗಿ ಅರ್ಜಿ ಹಾಕಲು ಸಿದ್ಧವಾಗಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 03 : ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ನಿವೇಶನಗಳನ್ನು ಹಂಚಿಕೆ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಅರ್ಜಿಗಳನ್ನು ಆಹ್ವಾನಿಸುವ ಸಾಧ್ಯತೆ ಇದೆ.

ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವೆ ಬಿಡಿಎ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣ ಮಾಡಿದೆ. ಮೊದಲ ಹಂತದಲ್ಲಿ 5 ಸಾವಿರ ನಿವೇಶಗಳನ್ನು ಹಂಚಿಕೆ ಮಾಡಲು ಬಿಡಿಎ ನಿರ್ಧರಿದೆ. ಓಬಿಸಿ, ಮಾಜಿ ಸೈನಿಕರು ಸೇರಿದಂತೆ ಒಟ್ಟು 9 ವರ್ಗಗಳಡಿ ನಿವೇಶನ ಹಂಚಿಕೆಯಾಗಲಿದೆ. [ಕೆಂಪೇಗೌಡ ಬಡಾವಣೆಗೆ ಅಧಿಸೂಚನೆ]

site

ಹಿಂದೆ ಅರ್ಜಿ ಹಾಕಿರುವವರಿಗೆ ಹಿರಿತನದ ಆಧಾರದಲ್ಲಿ ನಿವೇಶನ ಹಂಚಿಕೆಯಾಗಲಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ 2ರಷ್ಟು ಹೆಚ್ಚುವರಿ ನಿವೇಶನ ವಿತರಣೆ ಮಾಡಲಾಗುತ್ತದೆ. 5 ಸಾವಿರ ಸೈಟ್‌ಗಳ ಪೈಕಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 1 ಸಾವಿರ ಸೈಟ್ ಮೀಸಲಾಗಿಡಲಾಗಿದೆ. [ಬೆಂಗಳೂರಲ್ಲಿ ನಿವೇಶನ ಖರೀದಿ ಈಗ ಬಲು ಸಲೀಸು]

ನಿವೇಶನದ ಬೆಲೆಗಳು : ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನಗಳ ಬೆಲೆಯನ್ನು ಬಿಡಿಎ ನಿಗದಿಪಡಿಸಿದೆ. 30/40 ನಿವೇಶನಕ್ಕೆ 23.45 ಲಕ್ಷ ರು., 40/60 ನಿವೇಶನಕ್ಕೆ 52.31 ಲಕ್ಷ ರು. ಹಾಗೂ 50/80 ನಿವೇಶನಕ್ಕೆ 96.57 ಲಕ್ಷ ರು ದರವಿದೆ.

ನಿವೇಶನಗಳಿಗೆ ನೋಂದಣಿ ಶುಲ್ಕಗಳು 1000 ರೂ., 4000 ರೂ., 5000 ರೂ. ನಿಗದಿಪಡಿಸಲಾಗಿದ್ದು, ಈ ಕುರಿತ ಅಧಿಸೂಚನೆಯನ್ನು ಬಿಡಿಎ ಶೀಘ್ರದಲ್ಲೇ ಹೊರಡಿಸಲಿದೆ.

English summary
Bangalore Development Authority (BDA) all set for distribute site in Nadaprabhu Kempegowda layout between Mysuru Road and Magadi Road, Bengaluru city. Application may invited after September 20th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X