ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡೂವರೆ ನಿಮಿಷಕ್ಕೊಂದು ನಮ್ಮ ಮೆಟ್ರೋ ರೈಲು ಸಂಚಾರ

|
Google Oneindia Kannada News

ಬೆಂಗಳೂರು, ಏಪ್ರಿಲ್ 29 : ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ಹಳದಿ ಮತ್ತು ಕೆಂಪು ಮಾರ್ಗದಲ್ಲಿ ರೈಲಿಗಾಗಿ ಜನರು ಹೆಚ್ಚು ಹೊತ್ತು ಕಾಯಬೇಕಾಗಿಲ್ಲ. ಎರಡೂವರೆ ನಿಮಿಷಕ್ಕೆ ಒಂದು ರೈಲು ಸಂಚಾರ ನಡೆಸಲಿದೆ.

ಬಿಎಂಆರ್‌ಸಿಎಲ್ ಈ ಮಾರ್ಗದಲ್ಲಿ ಸುಧಾರಿತ ಸಂವಹನ ಆಧಾರಿತ ರೈಲು ನಿಯಂತ್ರಣ (ಸಿಬಿಟಿಸಿ) ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿದೆ. ಇದರಿಂದಾಗಿ ಪ್ರಯಾಣಿಕರು ನಿಮಿಷಗಳಲ್ಲಿಯೇ ರೈಲನ್ನು ಏರಬಹುದಾಗಿದೆ.

ಲಾಕ್ ಡೌನ್; ನಮ್ಮ ಮೆಟ್ರೋ ಕಾಮಗಾರಿಗಳು ವಿಳಂಬ? ಲಾಕ್ ಡೌನ್; ನಮ್ಮ ಮೆಟ್ರೋ ಕಾಮಗಾರಿಗಳು ವಿಳಂಬ?

2ನೇ ಹಂತದ ಮೆಟ್ರೋ ಯೋಜನೆಯ ಎರಡು ಮಾರ್ಗದಲ್ಲಿ ಸಿಬಿಟಿಸಿ ಆಧಾರಿತ ವ್ಯವಸ್ಥೆ ಜಾರಿಗೆ ಬರುತ್ತಿದೆ. ಈ ವ್ಯವಸ್ಥೆ ಆಳವಡಿಕೆ ಮಾಡಿಕೊಳ್ಳು ಬಂದಿದ್ದ ಬಿಡ್‌ಗಳನ್ನು ಕಳೆದ ಶನಿವಾರ ಬಿಎಂಆರ್‌ಸಿಎಲ್ ತೆರೆದಿದೆ.

ಒಂದು ತಿಂಗಳ ಬಳಿಕ ನಮ್ಮ ಮೆಟ್ರೋ ಕಾಮಗಾರಿ ಪುನರಾರಂಭ ಒಂದು ತಿಂಗಳ ಬಳಿಕ ನಮ್ಮ ಮೆಟ್ರೋ ಕಾಮಗಾರಿ ಪುನರಾರಂಭ

Get Namma Metro Train In Two And Half Minutes In Phase Two

ಆರ್. ವಿ. ರಸ್ತೆ-ಬೊಮ್ಮಸಂದ್ರ 19 ಕಿ. ಮೀ. ಹಳದಿ ಮಾರ್ಗ, ಸೆಂಟ್ರಲ್ ಸಿಲ್ಕ್ ಬೋರ್ಡ್-ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಸಿಬಿಟಿಸಿ ವ್ಯವಸ್ಥೆ ಅಳವಡಿಕೆ ಮಾಡಲಾಗುತ್ತದೆ. ಇದಕ್ಕಾಗಿ ಟೆಂಡರ್ ಸಹ ಸಲ್ಲಿಕೆಯಾಗಿದೆ.

ಬೆಂಗಳೂರು; ಮೇ 3ರ ತನಕ ನಮ್ಮ ಮೆಟ್ರೋ ಸಂಚಾರ ಸ್ಥಗಿತ ಬೆಂಗಳೂರು; ಮೇ 3ರ ತನಕ ನಮ್ಮ ಮೆಟ್ರೋ ಸಂಚಾರ ಸ್ಥಗಿತ

21 ಕಿ. ಮೀ. ಗೊಟ್ಟಿಗೆರೆ-ನಾಗವಾರ ಜಂಕ್ಷನ್ ಮಾರ್ಗದಲ್ಲಿಯೂ ಸಿಬಿಟಿಸಿ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಆದರೆ, ಇನ್ನೂ ಹಲವು ಕಾಮಗಾರಿ ಮತ್ತು ಸುರಂಗ ಮಾರ್ಗ ನಿರ್ಮಾಣ ಬಾಕಿ ಇರುವುದರಿಂದ ಟೆಂಡರ್ ಕರೆದಿಲ್ಲ.

ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ 6 ಮಾರ್ಗದಲ್ಲಿ ಸಿಬಿಟಿಸಿ ವ್ಯವಸ್ಥೆ ಜಾರಿಗೊಳಿಸಿ ವಿಭಿನ್ನ ಸಿಗ್ನಲಿಂಗ್ ಪ್ರಕ್ರಿಯೆ ಅಳವಡಿಕೆ ಮಾಡಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. ಈ ಮೂಲಕ ಮೆಟ್ರೋ ಮಾರ್ಗವನ್ನು ಆಧುನಿಕ ತಂತ್ರಜ್ಞಾನ ಬಳಸಿ ಅಭವೃದ್ಧಿ ಮಾಡಲಾಗುತ್ತದೆ.

ಪ್ರಸ್ತುತ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿರುವ 42 ಕಿ. ಮೀ. ಮಾರ್ಗದಲ್ಲಿ ಡಿಟಿಜಿ ತಂತ್ರಜ್ಞಾನ ಬಳಸಿ ರೈಲುಗಳನ್ನು ನಿಯಂತ್ರಿಸಲಾಗುತ್ತಿದೆ. ಪೀಕ್ ಹವರ್‌ನಲ್ಲಿ ನಾಲ್ಕೂವರೆ ನಿಮಿಷ, ನಾನ್ ಪೀಕ್ ಅವರ್‌ನಲ್ಲಿ 10 ನಿಮಿಷಕ್ಕೊಂದು ರೈಲು ಸಂಚಾರ ನಡೆಸುತ್ತಿವೆ.

ಈಗ ಕಾಮಗಾರಿ ನಡೆಯುತ್ತಿರುವ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್, ಮೈಸೂರು ರಸ್ತೆ-ಕೆಂಗೇರಿ, ಯಲಚೇನಹಳ್ಳಿ-ಅಂಜನಾಪುರ ಟೌನ್ ಶಿಪ್, ನಾಗಸಂದ್ರ-ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಮಾರ್ಗದಲ್ಲಿ ಇದೇ ತಂತ್ರಜ್ಞಾನ ಬಳಕೆಯಾಗುತ್ತಿದೆ.

English summary
BMRCL will adopt Communications-based train control (CBTC) in Namma metro phase 2 yellow and red line. People will get train at a frequency of two and half minutes by this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X