ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜರ್ಮನಿಯಿಂದ 1 ಬಿಲಿಯನ್ ಯುರೋ ಭಾರತಕ್ಕೆ

By Mahesh
|
Google Oneindia Kannada News

ಬೆಂಗಳೂರು, ಅ.06: ಭಾರತದ ಮಾಹಿತಿ ತಂತ್ರಜ್ಞಾನ ಹಾಗೂ ಜರ್ಮನಿ ಇಂಜಿನಿಯರಿಂಗ್ ಕೌಶಲ್ಯವನ್ನು ಬೆಸೆಯಲು ಸುಮಾರು 18 ಒಡಂಬಡಿಕೆಗಳಿಗೆ ಭಾರತ ಹಾಗೂ ಜರ್ಮನಿ ಸಹಿ ಹಾಕಿದೆ. ಭಾರತದ ಸೌರಶಕ್ತಿ ಅಭಿವೃದ್ಧಿಗಾಗಿ 1 ಬಿಲಿಯನ್ ಯುರೋ ಹೂಡಿಕೆ ಮಾಡಲು ಜರ್ಮನಿ ಸಿದ್ಧ ಎಂದು ಚಾನ್ಸೆಲರ್ ಏಂಜೆಲಾ ಮರ್ಕಲ್ ಅವರು ಘೋಷಿಸಿದ್ದಾರೆ.

ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಮೂರು ದಿನಗಳ ಭಾರತ ಪ್ರವಾಸದ ಅಂಗವಾಗಿ ಸೋಮವಾರ ಹೊಸದಿಲ್ಲಿಗೆ ಆಗಮಿಸಿದರು. ಎರಡನೇ ದಿನ ಬೆಂಗಳೂರಿನ ಬಾಷ್ ಘಟಕಕ್ಕೆ ಭೇಟಿ ನೀಡುತ್ತಿದ್ದಾರೆ.

ಭಾರತ ಹಾಗೂ ಜರ್ಮನಿ ದ್ವಿಪಕ್ಷೀಯ ಸಂಬಂಧವೃದ್ಧಿ ಹಾಗೂ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ಕ್ಷೇತ್ರ, ವ್ಯಾಪಾರ, ಶುದ್ಧ ಇಂಧನ ಮೂಲ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಹೆಚ್ಚಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು 18 ಒಪ್ಪಂದಗಳಿಗೆ ಸಹಿ ಹಾಕಿವೆ.

ಮೋದಿ ಅವರ ಕನಸಿನ 'ಮೇಕ್ ಇನ್ ಇಂಡಿಯಾ' ಯೋಜನೆಗೆ ಸಹಕಾರ ನೀಡುವುದಾಗಿ ಮರ್ಕೆಲ್ ಅವರು ಘೋಷಿಸಿದ್ದಾರೆ. ಪ್ರಮುಖ ಒಪ್ಪಂದಗಳ ಇಲ್ಲಿವೆ:

ಪ್ರಮುಖ ಒಪ್ಪಂದಗಳ ಇಲ್ಲಿವೆ

ಪ್ರಮುಖ ಒಪ್ಪಂದಗಳ ಇಲ್ಲಿವೆ

* ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಭಾಗಿಯಾಗಲು ಜರ್ಮನಿ ಸಿದ್ಧ
* ಅಂತಾರಾಷ್ಟ್ರೀಯ ರಫ್ತು ನಿಯಂತ್ರಣ ಮಂಡಳಿಗೆ ಭಾರತ ಸೇರ್ಪಡೆ ಹೊಂದಲು ಜರ್ಮನಿ ಬೆಂಬಲ.
* ಗಂಗಾನದಿ ಶುದ್ಧೀಕರಣ, ರಾಸಾಯನಿಕಗಳ ನಿರ್ವಹಣೆ.
* ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿ ಪ್ರಮುಖ ಮಂಡಳಿಗಳನ್ನು ವಿಸ್ತರಿಸುವಂತೆ ಭಾರತ ಹಾಗೂ ಜರ್ಮನಿ ಒತ್ತಡ ಹೇರಿಕೆ.

ಇನ್ನಷ್ಟು ಮಹತ್ವದ ಒಪ್ಪಂದಕ್ಕೆ ಸಹಿ

ಇನ್ನಷ್ಟು ಮಹತ್ವದ ಒಪ್ಪಂದಕ್ಕೆ ಸಹಿ

* ಸೌರ ವಿದ್ಯುತ್ ಮತ್ತಿತರ ಪರಿಸರ ಸ್ನೇಹಿ ಶಕ್ತಿಯಿಂದ ಗ್ರಾಮೀಣ ಪ್ರದೇಶಗಳಿಗೆ ಬೆಳಕು ಸಿಗಲಿದೆ
* ಭಾರತದಲ್ಲಿ ಜರ್ಮನಿ ಭಾಷೆಯನ್ನು ವಿದೇಶಿ ಭಾಷೆಯಾಗಿ ಅಳವಡಿಕೆಗೆ ಮನವಿ
* ಕೌಶಲ್ಯ ಅಭಿವೃದ್ಧಿ ಹಾಗೂ ಶಿಕ್ಷಣ ಹಾಗೂ ತರಬೇತಿಗೆ ಒತ್ತು.
* ವೈಮಾನಿಕ ಸುರಕ್ಷತೆ, ವಿಪತ್ತು ನಿರ್ವಹಣೆ, ಕೃಷಿ ಶಿಕ್ಷಣಕ್ಕೆ ಸಹಕಾರ

ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆಗೆ ಆದ್ಯತೆ.

ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆಗೆ ಆದ್ಯತೆ.

* ಇಂಡೋ ಜರ್ಮನ್ ಸೈನ್ ಅಂಡ್ ಟೆಕ್ನಾಲಜಿ ಸೆಂಟರ್ ವಿಸ್ತರಣೆ
* ಸಸ್ಯ ಸಂರಕ್ಷಣೆ , ಆಗ್ರೋ ಉತ್ಪನ್ನ ಬಳಕೆ ಹೆಚ್ಚಳ
* ಉನ್ನತ ಶಿಕ್ಷಣ ಅಭಿವೃದ್ಧಿಗಾಗಿ ಇಂಡೋ ಜರ್ಮನ್ ಸಹಕಾರ.
* ಜರ್ಮನಿ ಕಂಪನಿಗಳಿಗಾಗಿ ಫಾಸ್ಟ್ ಟ್ರ್ಯಾಕ್ ನಿರ್ಮಾಣ
* ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆಗೆ ಆದ್ಯತೆ.

ಇಂಧನ ಹಾಗೂ ಹವಾಮಾನ ಬದಲಾವಣೆ ಕ್ಷೇತ್ರ

ಇಂಧನ ಹಾಗೂ ಹವಾಮಾನ ಬದಲಾವಣೆ ಕ್ಷೇತ್ರ

ಭಾರತದ ಹಸಿರು ಇಂಧನ ಕಾರಿಡಾರ್ ಹಾಗೂ ಸೌರಶಕ್ತಿ ಯೋಜನೆಗಳಿಗೆ 100 ಕೋಟಿ ಯೂರೊಗಳಿಗೂ ಅಧಿಕ ಆರ್ಥಿಕ ನೆರವು.

ಶುದ್ಧ ಇಂಧನ ಹಾಗೂ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಬದ್ಧತೆಯ ವಿಚಾರದಲ್ಲಿ ಜರ್ಮನಿಯ ನಾಯಕತ್ವವನ್ನು ತಾನು ಪ್ರಶಂಸಿಸುವುದಾಗಿ ಮರ್ಕೆಲ್‌ರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವೇಳೆ ಮೋದಿ ಹೇಳಿದರು.
ವಿವಿಧ ರಫ್ತು ನಿಯಂತ್ರಣ ಕ್ರಮಗಳಿಗೆ ಒಪ್ಪಂದ

ವಿವಿಧ ರಫ್ತು ನಿಯಂತ್ರಣ ಕ್ರಮಗಳಿಗೆ ಒಪ್ಪಂದ

ಪರಮಾಣು ಪೂರೈಕೆದಾರರ ಗುಂಪು (ಎನ್‌ಎಸ್‌ಜಿ), ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಕಾನೂನು (ಎಂಟಿಸಿಆರ್) ಮೊದಲಾದ ವಿವಿಧ ರಫ್ತು ನಿಯಂತ್ರಣ ಕ್ರಮಗಳಿಗೆ ಸಂಬಂಧಿಸಿ ಭಾರತದ ವ್ಯಾಪಕ ಪಾತ್ರವನ್ನು ಜರ್ಮನಿ ಸ್ವಾಗತಿಸಿದೆ.

ಹೆಚ್ಚುತ್ತಿರುವ ಬೆದರಿಕೆ ಹಾಗೂ ಜಗತ್ತನ್ನು ಕಾಡುತ್ತಿರುವ ಭಯೋತ್ಪಾದನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು ಈ ನಿಟ್ಟಿನಲ್ಲಿ ಜಂಟಿ ಕ್ರಿಯಾ ಸಮಿತಿಯೊಂದನ್ನು ರೂಪಿಸಲು ಕ್ರಮ.

English summary
A deal to fast track approvals for German companies in India and Euro 1 billion solar power fund by Germany were among major takeaways from the talks between Prime Minister Narendra Modi and Chancellor Angela Merkel as both sides inked 18 MoUs to scale up ties in strategic areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X