ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸಬ್-ಅರ್ಬನ್ ರೈಲು ಯೋಜನೆಗೆ ಜರ್ಮನ್ ಬ್ಯಾಂಕ್ ಮೂಲಕ 4000 ಕೋಟಿ ರೂ.

|
Google Oneindia Kannada News

ಬೆಂಗಳೂರು, ಜೂನ್ 22: ಜರ್ಮನಿಯ ಸರ್ಕಾರಿ ಸ್ವಾಮ್ಯದ ಹೂಡಿಕೆ ಮತ್ತು ಅಭಿವೃದ್ಧಿ ಬ್ಯಾಂಕ್ KfW Bankengruppe ಬೆಂಗಳೂರು ಉಪನಗರ ರೈಲು ಯೋಜನೆಗೆ (BSRP) (€ 500 ಮಿಲಿಯನ್) 4,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಕ್ಕೆ ಬದ್ಧವಾಗಿದೆ.

ಕರ್ನಾಟಕದ ರೈಲು ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್‌ನ(KRIDE) ಮೂಲಗಳ ಪ್ರಕಾರ, ಅಧಿಕಾರಿಗಳು ಕಳೆದ ಆರು ತಿಂಗಳಿಂದ ಅಗತ್ಯ ಅನುಮತಿಗಳನ್ನು ಪಡೆಯಲು ಮತ್ತು ಯೋಜನೆಯನ್ನು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಪ್ರಸ್ತುತಪಡಿಸುವ ಕೆಲಸ ಮಾಡಿದ್ದಾರೆ. ಕಳೆದ ಮಾರ್ಚ್ ತಿಂಗಳಿನಲ್ಲಿಯೇ ನಗರಕ್ಕೆ ಭೇಟಿ ನೀಡಿ ಸ್ಥಳದ ಪೂರ್ವ-ಮೌಲ್ಯಮಾಪನವನ್ನು ನಡೆಸಲಾಗಿದೆ ಎಂದು ತಿಳಿಸಿದೆ.

ಮೋದಿ ಉದ್ಘಾಟಿಸಿದ್ದು ಯಾರ ಯೋಜನೆ? ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಕುಮಾರಸ್ವಾಮಿ ಮೋದಿ ಉದ್ಘಾಟಿಸಿದ್ದು ಯಾರ ಯೋಜನೆ? ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಕುಮಾರಸ್ವಾಮಿ

"ನಾವು ಸುಮಾರು 4000 ಕೋಟಿ ರೂಪಾಯಿ ನಿಧಿಗಾಗಿ ಎದುರು ನೋಡುತ್ತಿದ್ದೇವೆ. ಜರ್ಮನಿಯ KfW ಬ್ಯಾಂಕ್ ಈ ನಿಧಿಯನ್ನು ಒದಗಿಸುವ ಬದ್ಧತೆಯನ್ನು ಸ್ವೀಕರಿಸಿದ್ದೇವೆ. ಎಎಫ್‌ಡಿ (ಫ್ರೆಂಚ್ ಡೆವಲಪ್‌ಮೆಂಟ್ ಏಜೆನ್ಸಿ)ಯಿಂದ ಇದೇ ರೀತಿಯ ಬೆಂಬಲವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

German Bank Ready to Invest 4000 CR Rupees for Bengaluru Suburban Rail Project

ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ ಮಾರ್ಗಕ್ಕೆ ಗುತ್ತಿಗೆ: ಬಿಎಸ್‌ಆರ್‌ಪಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ್ದಾರೆ. ಈ ಮೂಲಕ ಯೋಜನೆಗೆ ಹೆಚ್ಚು ವೇಗ ಸಿಗುವ ನಿರೀಕ್ಷೆಯಿದೆ. ಕಾರಿಡಾರ್-2ರ ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ ಮಾರ್ಗಕ್ಕೆ ಸಿವಿಲ್ ಕಾಮಗಾರಿ ಗುತ್ತಿಗೆ ನೀಡಲು ಮಂಡಳಿಯ ಅನುಮೋದನೆಗಾಗಿ ಕರ್ನಾಟಕದ ರೈಲು ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್‌ ಎದುರು ನೋಡುತ್ತಿದೆ. 850 ಕೋಟಿ ರೂ.ಗಳನ್ನು ನಮೂದಿಸುವ ಮೂಲಕ ಲಾರ್ಸೆನ್ ಮತ್ತು ಟೂಬ್ರೊ ಯೋಜನೆಗೆ ಕಡಿಮೆ ಬಿಡ್‌ದಾರರಾಗಿ ಹೊರಹೊಮ್ಮಿದ್ದಾರೆ.

41.4-ಕಿಮೀ ಆದ್ಯತೆಯ ಕಾರಿಡಾರ್: ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 41.4 ಕಿ. ಮೀ. ಆದ್ಯತೆಯ ಕಾರಿಡಾರ್, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ದೇವನಹಳ್ಳಿ ಮತ್ತು ವಿಮಾನ ನಿಲ್ದಾಣದ ನಡುವಿನ ರೈಲು ಯೋಜನೆಗೆ ಟೆಂಡರ್‌ಗಳನ್ನು ಅಂತಿಮಗೊಳಿಸಲಾಗಿದೆ.

Recommended Video

ಮಹಾಸರ್ಕಾರಕ್ಕೆ ಸಿಡಿಲು ಬಡಿದಿರುವಾಗ್ಲೇ CM Uddhav Thackeray ಗೆ ಕೊರೊನಾ | *Politics | OneIndia Kannada

English summary
German bank ready to invest 4000 cr rupees for Bengaluru Suburban Rail Project. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X