ಪ್ರತ್ಯೇಕ ಬಿಎಂಟಿಸಿ ಬಸ್ ಪಥ; ಸಾಮಾನ್ಯ ಸೂಚನೆಗಳು
ಬೆಂಗಳೂರು, ನವೆಂಬರ್ 17 : ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ಗಳಿಗೆ ಪ್ರತ್ಯೇಕ ಪಥ ನಿರ್ಮಾಣ ಮಾಡಲಾಗಿದೆ. ಪ್ರತ್ಯೇಕ ಪಥದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಸಾರ್ವಜನಿಕರಿಗೆ ಪಥದ ಕುರಿತು ಸಾಮಾನ್ಯ ಮಾಹಿತಿಯನ್ನು ನೀಡಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಬಸ್ ಆದ್ಯತಾ ಪಥದ ಬಗ್ಗೆ ಜನರಿಗೆ ಮಾಹಿತಿ ನೀಡಿದೆ. ಬಸ್ ಪಥದಲ್ಲಿ ಬೇರೆ ವಾಹನಗಳು ಸಂಚಾರ ಮಾಡಬಾರದು ಎಂದು ಈ ಮೂಲಕ ಮನವಿ ಮಾಡಲಾಗಿದೆ.
ಬಿಎಂಟಿಸಿ ಅಧ್ಯಕ್ಷರಾದ ನಂದೀಶ್ ರೆಡ್ಡಿ; ಕೆ. ಆರ್. ಪುರ ಬಂಡಾಯ?
ನಾಗರೀಕರಿಗಾಗಿ, ಸುರಕ್ಷಿತ, ಸಮಗ್ರ, ಕೈಗೆಟುಕುವ ಮತ್ತು ವಿಶ್ವಾಸಾರ್ಹವಾದ ಸಾರ್ವಜನಿಕ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಾರ್ವಜನಿಕ ಸಾರಿಗೆಯನ್ನು ಉತ್ತಮಪಡಿಸಲು ಬಸ್ ಆದ್ಯತಾ ಪಥವನ್ನು ರಚನೆ ಮಾಡಲಾಗಿದೆ.
ಬಸ್ ಪ್ರಯಾಣಿಕರಿಗೆ ಸರ್ಕಾರದ ಸಿಹಿ ಸುದ್ದಿ: ದರ ಇಳಿಕೆಗೆ ಚಿಂತನೆ
ಬಸ್ಗಳ ಆದ್ಯತಾ ಮಾರ್ಗದಿಂದ ಬಸ್ಸುಗಳಿಗೆ ಅಗತ್ಯವಾದ ರಸ್ತೆ ಹಾಗೂ ವೇಗವನ್ನು ಸುಧಾರಿಸಲು ಅನುಕೂಲವಾಗುತ್ತದೆ. ಇದರಿಂದಾಗಿ ರಸ್ತೆಗಳಲ್ಲಿ ದಟ್ಟಣೆ ನಿವಾರಣೆಯಾಗಿ ಪರಿಸರ ಮಾಲಿನ್ಯ ಕಡಿಮೆ ಮಾಡಲು ಸಹಾಯಕವಾಗಲಿದೆ.
ಪ್ರತ್ಯೇಕ ಬಸ್ ಪಥ; ಬಿಎಂಟಿಸಿ ಬಸ್ಗೆ ಚೆಂದದ ಹೆಸರು
ಈ ಯೋಜನೆಯನ್ನು ನಗರದ 12 ಹೈಡೆನ್ಸಿಟಿ ಕಾರಿಡಾರ್ಗಳಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಮೊದಲ ಹಂತವಾದ ಹೊರವರ್ತುಲ ರಸ್ತೆಯಲ್ಲಿ ಸಿಲ್ಕ್ ಬೋರ್ಡ್ ನಿಂದ ಕೆ. ಆರ್. ಪುರ ಮತ್ತು ಬೈಯಪ್ಪನಹಳ್ಳಿವರೆಗೆ ಪ್ರತ್ಯೇಕ ಬಸ್ ಪಥವನ್ನು ನಿರ್ಮಾಣ ಮಾಡಲಾಗಿದೆ.
ಸೌಲಭ್ಯಗಳು : ಪ್ರತ್ಯೇಕ ಬಸ್ ಪಥದಲ್ಲಿ ಹಲವು ಸೌಲಭ್ಯಗಳಿವೆ. ಯಾವ-ಯಾವ ಸೌಲಭ್ಯಗಳಿವೆ ಎಂಬುದನ್ನು ಬಿಎಂಟಿಸಿ ಪಟ್ಟಿ ಮಾಡಿದೆ.
* ರಸ್ತೆಯ ಎರಡೂ ದಿಕ್ಕಿನಲ್ಲಿ ಬಿಎಂಟಿಸಿ ಬಸ್ಗಳಿಗೆ ಮೀಸಲಾದ ಒಂದು ಪಥ
* 800ಕ್ಕೂ ಅಧಿಕ ಬಸ್ಗಳ ಕಾರ್ಯಾಚರಣೆ
* ಪಥದಲ್ಲಿ ಸಂಚಾರ ನಡೆಸುವ ಬಸ್ಗಳಿಗೆ ಪ್ರತ್ಯೇಕ ಪಥ ಮತ್ತು ಲಾಂಛನ
* ಸುಲಲಿತ ಸಂಚಾರಕ್ಕಾಗಿ ಜಂಕ್ಷನ್ ಮರು ವಿನ್ಯಾಸ
* ಗುರುತು ಪಟ್ಟಿಗಳು ಹಾಗೂ ಸೂಚನಾ ಪಟ್ಟಿಗಳ ಅಳವಡಿಕೆ
* ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಸುಧಾರಿತ ಬಸ್ ತಂಗುದಾಣಗಳು, ಪಾದಚಾರಿ ಸ್ಕೈವಾಕ್ ಮತ್ತು ಪಾರ್ಕಿಗ್ ವ್ಯವಸ್ಥೆ
* ಬಸ್ ಸಂಚಾರದ ಆನ್ಲೈನ್ ಮೇಲ್ವಿಚಾರಣೆ ಮತ್ತು ವೇಳಾಪಟ್ಟಿ, ಸಿಸಿಟಿವಿ ವ್ಯಾಪ್ತಿ
* ಸದರಿ ಪಥದಲ್ಲಿ ಬಿಎಂಟಿಸಿ ಬಸ್, ತುರ್ತು ವಾಹನಗಳಾದ ಆಂಬುಲೆನ್ಸ್, ಅಗ್ನಿ ವಾಹಕಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ವಾಹನಗಳ ಪ್ರವೇಶ, ನಿಲುಗಡೆ ನಿಷೇಧ