ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ವಾರ್ಡ್‌ ವಿಂಗಡನೆ; ಬದಲಾದ ಹಲವು ವಾರ್ಡ್‌ಗಳ ಸ್ವರೂಪ

|
Google Oneindia Kannada News

ಬೆಂಗಳೂರು, ಮಾರ್ಚ್ 04 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್‌ ಮರುವಿಂಗಡನೆ ಮಾಡಲಾಗಿದೆ. ಕರ್ನಾಟಕ ಸರ್ಕಾರ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ವಾರ್ಡ್‌ಗಳ ಸಂಖ್ಯೆ 198 ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನದ ಅವಕಾಶ ನೀಡಲಾಗಿದೆ.

2011ರ ಜನಸಂಖ್ಯೆ ಆಧಾರದ ಮೇಲೆ ವಾರ್ಡ್ ಮರುವಿಂಗಡನೆ ಮಾಡಲಾಗಿದೆ. ನಗರದ ಕೇಂದ್ರ ಪ್ರದೇಶದ ಅನೇಕ ವಾರ್ಡ್‌ಗಳನ್ನು ಕೈ ಬಿಟ್ಟು, ಹೊಸತಾಗಿ ನಗರಕ್ಕೆ ಸೇರಿದ ಪ್ರದೇಶಗಳಲ್ಲಿ 27 ಹೊರ ವಾರ್ಡ್ ರೂಪಿಸಲಾಗಿದೆ.

ಬಿಬಿಎಂಪಿ ಮತ್ತೊಂದು ಹಗರಣ ಎಸಿಬಿ ತನಿಖೆಗೆಬಿಬಿಎಂಪಿ ಮತ್ತೊಂದು ಹಗರಣ ಎಸಿಬಿ ತನಿಖೆಗೆ

ಬಿಬಿಎಂಪಿ ಮೇಯರ್ ಆಗಿದ್ದ ಗಂಗಾಬಿಕೆ ಮಲ್ಲಿಕಾರ್ಜುನ ಪ್ರತಿನಿಧಿಸುವ ಜಯನಗರ, ಜಿ. ಪದ್ಮಾವತಿ ಪ್ರತಿನಿಧಿಸುವ ಪ್ರಕಾಶ್ ನಗರ ವಾರ್ಡ್‌ಗಳನ್ನು ಹೊಸ ಪಟ್ಟಿಯಲ್ಲಿ ಕೈಬಿಡಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪ್ರತಿನಿಧಿಸುವ ತಲಾ 13 ವಾರ್ಡ್, ಜೆಡಿಎಸ್ ಪ್ರತಿನಿಧಿಸುವ 1 ವಾರ್ಡ್ ಹೊಸ ಪಟ್ಟಿಯಲ್ಲಿ ಇಲ್ಲ.

ಕಸ ವಿಲೇವಾರಿ ಟೆಂಡರ್; ಬಿಬಿಎಂಪಿಗೆ ಪ್ರತಿ ತಿಂಗಳು 2 ಕೋಟಿ ನಷ್ಟ ಕಸ ವಿಲೇವಾರಿ ಟೆಂಡರ್; ಬಿಬಿಎಂಪಿಗೆ ಪ್ರತಿ ತಿಂಗಳು 2 ಕೋಟಿ ನಷ್ಟ

ಕಾಂಗ್ರೆಸ್ ಪಕ್ಷದ ಪ್ರಾಬಲ್ಯವಿರುವ ವಾರ್ಡ್‌ಗಳನ್ನು ಉದ್ದೇಶಪೂರ್ವಕವಾಗಿ ಕೈ ಬಿಡಲಾಗಿದೆ. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೂಪಿಸಿದ್ದ ಮರುವಿಂಗಡನಾ ಪಟ್ಟಿಯ ಕರಡಿನಲ್ಲಿದ್ದ ಅಂಶಗಳನ್ನು ಗಾಳಿಗೆ ತೂರಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಬೆಂಗಳೂರಿಗೂ ಬಂತು ಯಾಂತ್ರಿಕ ಕಸ ಗುಡಿಸುವ ವಾಹನ...ಬೆಂಗಳೂರಿಗೂ ಬಂತು ಯಾಂತ್ರಿಕ ಕಸ ಗುಡಿಸುವ ವಾಹನ...

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಬೆಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವದಲ್ಲಿದ್ದಾಗ 100 ವಾರ್ಡ್‌ಗಳಿತ್ತು. 2007ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆ ಮಾಡುವಾಗ 7 ನಗರಸಭೆ, 1 ಪಟ್ಟಣ ಪಂಚಾಯಿತಿ ಹಾಗೂ 110 ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು. ಆಗ ವಾರ್ಡ್‌ಗಳ ಸಂಖ್ಯೆ 198ಕ್ಕೇ ಏರಿತು.

ಮರುವಿಂಗಡನೆ ಆಗಬೇಕಿತ್ತು

ಮರುವಿಂಗಡನೆ ಆಗಬೇಕಿತ್ತು

2015ರಲ್ಲಿ ಬಿಬಿಎಂಪಿ ಚುನಾವಣೆಗೆ ಮುನ್ನ 2011ರ ಜನಗಣತಿ ಆಧರಿಸಿ ವಾರ್ಡ್‌ಗಳ ಮರುವಿಂಗಡನೆ ಮಾಡಬೇಕಿತ್ತು. ಆದರೆ, ಪಾಲಿಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲದ ಕಾರಣ ಮರುವಿಂಗಡನೆ ನಡೆಯಲಿಲ್ಲ. 2015ರ ಆಗಸ್ಟ್‌ನಲ್ಲಿ ಚುನಾವಣೆ ನಡೆದು, ಸೆಪ್ಟೆಂಬರ್ 11ರಂದು ಪಾಲಿಕೆ ರಚನೆ ಆಗಿದೆ. ಹಾಲಿ ಪಾಲಿಕೆಯ ಅವಧಿ 2020ರ ಸೆಪ್ಟೆಂಬರ್ 10ಕ್ಕೆ ಅಂತ್ಯಗೊಳ್ಳಲಿದೆ.

ಹೊಸ ಮೀಸಲಾತಿ ಪ್ರಕಾರ ಚುನಾವಣೆ

ಹೊಸ ಮೀಸಲಾತಿ ಪ್ರಕಾರ ಚುನಾವಣೆ

ಸರಾಸರಿ ಒಂದು ವಾರ್ಡ್‌ಗೆ 42,645 ಜನರ ಆಧಾರದಲ್ಲಿ ಮರುವಿಂಗಡನೆ ಮಾಡಲಾಗಿದೆ. ಹೊಸ ವಾರ್ಡ್ ಮರುವಿಂಗಡನೆ ಅನ್ವಯ ಈ ಬಾರಿ ಚುನಾವಣೆ ನಡೆಯಬೇಕಿದೆ. ಅದಕ್ಕಾಗಿ ಕರ್ನಾಟಕ ಸರ್ಕಾರ ಗೆಜೆಟ್‌ನಲ್ಲಿ ವಾರ್ಡ್ ಮರುವಿಂಗಡನೆ ಆದೇಶವನ್ನು ಹೊರಡಿಸಿದೆ.

ಆಕ್ಷೇಪಣೆ ಸಲ್ಲಿಸಬಹುದು

ಆಕ್ಷೇಪಣೆ ಸಲ್ಲಿಸಬಹುದು

ಕರ್ನಾಟಕ ಸರ್ಕಾರ ಹೊರಡಿಸಿರುವ ಅಧಿಸೂಚನೆ ಬಗ್ಗೆ ಆಕ್ಷೇಪಣೆಗಳಿದ್ದರೆ 15 ದಿನದಲ್ಲಿ ಸಲ್ಲಿಸಬಹುದು. ಅಧಿಸೂಚನೆಯಲ್ಲಿ ಪ್ರತಿಯೊಂದು ವಾರ್ಡ್ ಉತ್ತರ, ಪೂರ್ವ, ದಕ್ಷಿಣ, ಪಶ್ಚಿಮ ದಿಕ್ಕುಗಳ ಗಡಿಯನ್ನು ನೀಡಲಾಗಿದೆ.

ಆಕ್ಷೇಪಣೆ ಸಲ್ಲಿಸಲು ವಿಳಾಸ : ಜಿಲ್ಲಾಧಿಕಾರಿ ಕಚೇರಿ, ಕಂದಾಯ ಭವನ, ಕೆ. ಜಿ. ರಸ್ತೆ, ಬೆಂಗಳೂರು ನಗರ ಜಿಲ್ಲೆ

English summary
Karnataka government issued a gazette notification on the delimitation of wards coming under the Bruhat Bengaluru Mahanagara Palike (BBMP). Wards numbers remain 198.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X