• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೌರಿ ಲಂಕೇಶ್ ವಿಚಾರಧಾರೆಗಳನ್ನು ಸಾರುವ ಮೆಮೊರಿಯಲ್ ಟ್ರಸ್ಟ್ ಪ್ರಾರಂಭ

|

ಬೆಂಗಳೂರು, ಡಿಸೆಂಬರ್ 04 : ಗೌರಿ ಲಂಕೇಶ್ ಅವರ ಧ್ಯೇಯ ಸಾರಲು ಗೌರಿ ಮೆಮೊರಿಯಲ್ ಟ್ರಸ್ಟ್ ಪ್ರಾರಂಭಿಸಲಾಗಿದ್ದು ಉದ್ಘಾಟನೆ ಸಮಾರಂಭ ಇಂದು (ಡಿ.4)ರಂದು ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನಡೆಯಲಿದೆ.

ಗೌರಿ ಹತ್ಯೆ ತನಿಖೆ ಬಗ್ಗೆ ಕವಿತಾ ಲಂಕೇಶ್ ಅಸಮಾಧಾನ

ಸೋಮವಾರ ಸಂಜೆ5.00 ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಸತ್ಯ ನುಡಿಯುವ ಅನಿವಾರ್ಯತೆ ವಿಚಾರಗೋಷ್ಠಿಯನ್ನು ಕೂಡ ಆಯೋಜಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ತೀಸ್ತಾ ಸೆಟಲ್ ವಾಡ್, ದೇವನೂರು ಮಹಾದೇವ, ಡಾ. ವಿಜಯಮ್ಮ, ಗಣೇಶ್ ಎನ್. ದೇವಿ, ಕೆ. ನೀಲಾ, ಪ್ರಕಾಶ್ ರೈ, ಸಿದ್ಧಾರ್ಥ ವರದರಾಜನ್ ಭಾಗವಹಿಸಲಿದ್ದಾರೆ.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರು ನಂಬಿದ್ದ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ 'ಗೌರಿ ಸ್ಮಾರಕ ಟ್ರಸ್ಟ್' ರಚನೆ ಮಾಡಲಾಗಿದೆ. ಗೌರಿ ನಂಬಿದ್ದ ಮೌಲ್ಯಗಳನ್ನು ಎತ್ತಿಹಿಡಿಯುವ ಪತ್ರಿಕೆಯನ್ನು ಹೊರತರಲು ನೆರವಾಗುವುದು ಸೇರಿ ಮುಖ್ಯ ಉದ್ದೇಶಗಳನ್ನು ಇಟ್ಟುಕೊಂಡು ಈ ಟ್ರಸ್ಟ್ ಆರಂಭಿಸಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ್ದು ಯಾರು?

ಪತ್ರಕರ್ತ ಸಬ್ದುಲ್ ಸಲಾಂ ಪುತ್ತಿಗೆ, ಕೆ.ಎಲ್ ಅಶೋಕ್, ಎನ್. ಮುನಿಸ್ವಾಮಿ, ಹಾರ್ದಿಕ್ ದೇಸಾಯಿ, ಡಾ. ರಹಮತ್ ತರೀಕೆರೆ , ಕೆ. ನೀಲಾ, ಚುಕ್ಕಿ ನಂಜುಂಡಸ್ವಾಮಿ ಸೇರಿ ಟ್ರಸ್ಟ್ ನಿರ್ಮಿಸಲಾಗಿದೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಗೌರಿ ಸ್ಮಾರಕ ಉಪನ್ಯಾಸ ನೀಡುವುದು, ಗೌರಿ ಅವರ ಆದರ್ಶಗಳನ್ನು ಅನುಕರಿಸುತ್ತಿರುವ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪತ್ರಕರ್ತರು, ಕಾರ್ಯಕರ್ತರಿಗೆ ಗೌರಿ ಲಂಕೇಶ್ ಪ್ರಶಸ್ತಿ ನೀಡುವುದು ಟ್ರಸ್ಟ್ ನ ಉದ್ದೇಶವಾಗಿದೆ.

English summary
To promote the ideology and values of veteran Journalist and activist Gauri Lankesh, trust will be formed by her friends and followers in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X