ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಲಂಕೇಶ್ ಹತ್ಯೆ ಆರೋಪಿಯ ಜಾಮೀನು ಅರ್ಜಿ ವಜಾ ಮಾಡಿದ ಹೈಕೋರ್ಟ್‌

|
Google Oneindia Kannada News

ಬೆಂಗಳೂರು, ಫೆಬ್ರವರಿ 11: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಮೋಹನ್ ನಾಯಕ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಜಾಮೀನು ಅರ್ಜಿ ವಜಾ ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಜಾಮೀನು ಅರ್ಜಿ ವಜಾ

ಗೌರಿ ಲಂಕೇಶ್ ಹತ್ಯೆ ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮೋಹನ್ ನಾಯಕ್ ಜಾಮೀನು ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಅರ್ಜಿ ವಿಚಾರಣೆ ನಡೆಸಿದ ಬಿ.ಎ.ಪಾಟೀಲರ ಏಕಸದಸ್ಯ ಪೀಠವು ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಗೌರಿ ಲಂಕೇಶ್‌ ಹಂತಕರು ಪಡೆದಿದ್ದ ತರಬೇತಿ ಹುಬ್ಬೇರುವಂತೆ ಮಾಡುತ್ತವೆ!ಗೌರಿ ಲಂಕೇಶ್‌ ಹಂತಕರು ಪಡೆದಿದ್ದ ತರಬೇತಿ ಹುಬ್ಬೇರುವಂತೆ ಮಾಡುತ್ತವೆ!

ಕೆಲವು ದಿನಗಳ ಹಿಂದಷ್ಟೆ ಸೆಷನ್ಸ್‌ ನ್ಯಾಯಾಲಯವು ಗೌರಿ ಹತ್ಯೆ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಮೋಹನ್ ನಾಯಕ್ ಅವರು ಹೈಕೋರ್ಟ್‌ಗೆ ಜಾಮೀನಿಗಾಗಿ ಮನವಿ ಸಲ್ಲಿಸಿದ್ದರು.

Gauri Lankeshs murder accused Mohan Nayaks bail apilication rejected

ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಕುಂಬಳಗೋಡಿನಲ್ಲಿ ಮನೆ ಮಾಡಿಕೊಟ್ಟಿದ್ದಲ್ಲದೆ, ಅವರಿಗೆ ಇನ್ನೂ ಹಲವು ರೀತಿಯಲ್ಲಿ ಸಹಾಯ ಮಾಡಿದ್ದ ಆರೋಪ ಮೋಹನ್ ನಾಯಕ್ ಮೇಲಿದೆ.

ಕಲ್ಬುರ್ಗಿ, ಗೌರಿ ಹತ್ಯೆಗೆ ಸಾಮ್ಯತೆ ಇದೆಯೇ? ಸಿಬಿಐಗೆ ಸುಪ್ರೀಂ ಪ್ರಶ್ನೆ ಕಲ್ಬುರ್ಗಿ, ಗೌರಿ ಹತ್ಯೆಗೆ ಸಾಮ್ಯತೆ ಇದೆಯೇ? ಸಿಬಿಐಗೆ ಸುಪ್ರೀಂ ಪ್ರಶ್ನೆ

ಅಮೋಲ್ ಕಾಳೆ, ಪರಶುರಾಮ್ ವಾಘ್ಮೋರೆ, ಮನೋಹರ ಯಡವೆ, ಗಣೇಶ್ ವಿಸ್ಕಿನ್, ಅಮಿತ್ ಬುದ್ಧಿ, ಅಮಿತ್ ದಿಗ್ವೇಕರ್, ಭರತ್ ಕುರ್ಣೆ, ಸುರೇಶ್ ಎಚ್‌.ಎಲ್, ರಾಜೇಶ್ ಡಿ.ಬಂಗೇರಾ, ಸುಧನ್ವ ಗೋಂಧ್ವಾಳ್ಕರ್, ಮೋಹನ್ ನಾಯಕ್, ಶರದ್ ಬಾಹುಸಾಹೇಬ್, ಭಗವಾನ್ ಸೂರ್ಯವಂಶಿ, ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಶ್ರೀಕಾಂತ್ ಪಂಗಾರ್ಕರ್, ವಿಕಾಸ್ ಪಾಟೀಲ್ ಅಲಿಯಾಸ್ ನಿಹಾಲ್ ಅವರುಗಳು ಗೌರಿ ಲಂಕೇಶ್‌ ಪ್ರಕರಣದ ಆರೋಪಿಗಳಾಗಿದ್ದಾರೆ. ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆಮಂಜ ಭಗವಾನ್ ಹತ್ಯೆ ಸಂಚು ಪ್ರಕರಣದ ಆರೋಪಿಯಾಗಿದ್ದಾನೆ.

English summary
Gauri Lankesh murder accused Mohan Nayak's bail appilcation rejected by high court today. Mohan Nayak accused for helping the Gauri murderers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X