ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಾಯತ ರುದ್ರಭೂಮಿಯಲ್ಲಿ ಗೌರಿ ಅಂತಿಮ ಸಂಸ್ಕಾರ

By Mahesh
|
Google Oneindia Kannada News

Recommended Video

Gauri Lankesh : indrajit lankesh told gauri last rites at lingayatha rudraboomi at chamrajpet

ಬೆಂಗಳೂರು, ಸೆ. 06: ಲಂಕೇಶ್ ಪತ್ರಿಕೆ ಸಂಪಾದಕಿ, ಸಮಾಜಮುಖಿ ಚಿಂತಕಿ ಗೌರಿ ಲಂಕೇಶ್ ಅವರ ಅಂತಿಮ ಸಂಸ್ಕಾರದ ಬಗ್ಗೆ ಇದ್ದ ಗೊಂದಲವನ್ನು ಅವರ ಸೋದರ ಇಂದ್ರಜಿತ್ ಲಂಕೇಶ್ ಅವರು ಪರಿಹರಿಸಿದ್ದಾರೆ. ಯಾವುದೇ ಸಂಪ್ರದಾಯ ಪಾಲಿಸದೆ ಸರಳವಾಗಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆ, ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯಗೌರಿ ಲಂಕೇಶ್ ಹತ್ಯೆ, ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ

ಸಕಲ ಸರ್ಕಾರಿ ಗೌರವದೊಂದಿಗೆ ಗೌರಿ ಲಂಕೇಶ್ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಬೆಂಗಳೂರಿನ ಚಾಮರಾಜಪೇಟೆಯ ಟಿ. ಆರ್ ಮಿಲ್ ರುದ್ರಭೂಮಿಯಲ್ಲಿ ಬುಧವಾರ ಸಂಜೆ ವೇಳೆ ಅಂತ್ಯಕ್ರಿಯೆ ನಡೆಯಲಿದೆ. ಸಾರ್ವಜನಿಕ ದರ್ಶನಕ್ಕಾಗಿ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದ ಹಿಂಬದಿಯಲ್ಲಿರುವ ಸಂಸ ಬಯಲು ರಂಗ ಮಂದಿರದಲ್ಲಿರಿಸಲಾಗಿದೆ.

Gauri Lankesh last rites at Chamarajpet TR Mill Cemetery : Indrajit Lankesh

ಇಂದ್ರಜಿತ್ ಹೇಳಿಕೆ: ಲಿಂಗಾಯತ ರುದ್ರಭೂಮಿಯಲ್ಲಿ ಸಕಲ ವ್ಯವಸ್ಥೆಯಾಗಿದ್ದು, ಪಾರ್ಥೀವ ಶರೀರರ ಮೇಲೆ ಹೂಗಳನ್ನಿಟ್ಟು ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಯಾವುದೇ ಸಂಪ್ರದಾಯವನ್ನು ಪಾಲಿಸಲಾಗುವುದಿಲ್ಲ ಎಂದು ಸೋದರ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಗೌರಿ ಹತ್ಯೆ ಪ್ರಜಾಪ್ರಭುತ್ವವನ್ನು ಕತ್ತಲಲ್ಲಿರಿಸಿದೆ: ಕುಂ.ವೀರಭದ್ರಪ್ಪಗೌರಿ ಹತ್ಯೆ ಪ್ರಜಾಪ್ರಭುತ್ವವನ್ನು ಕತ್ತಲಲ್ಲಿರಿಸಿದೆ: ಕುಂ.ವೀರಭದ್ರಪ್ಪ

ಆಜಾದ್ ನಗರ ಪಾಲಿಕೆ ಸದಸ್ಯೆ ಸುಜಾತ ಡಿಸಿ ರಮೇಶ್ ಮಾರ್ಗದರ್ಶನ ದಂತೆ ಗುಂಡಿ ತೆಗೆಯುವ ಕಾರ್ಯ ನಡೆಯುತ್ತಿದ್ದು, ಹೂಳುವ ಸಂಪ್ರದಾಯದಂತೆ ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ. ರಾಜರಾಜೇಶ್ವರಿ ನಗರದಲ್ಲಿ ಮಂಗಳವಾರ ರಾತ್ರಿ ವೇಳೆ ಗೌರಿ ಲಂಕೇಶ್ ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The last rites of senior Kannada weekly tabloid 'Lankesh Patrike' editor and social activist Gauri Lankesh, who was shot dead the night before, will be conducted on Wednesday in Bengaluru."Gauri's last rites will be held at Chamrajpet Cemetery in the city," her brother Indrajit Lankesh told reporters
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X