ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ಹಾಕುವುದನ್ನು ತಡೆಯಲು ಬಿಬಿಎಂಪಿಯಿಂದ ಮಾರ್ಷಲ್‌ಗಳ ನೇಮಕ

|
Google Oneindia Kannada News

ಬೆಂಗಳೂರು, ಆಗಸ್ಟ್ 29 : ಬಿಬಿಎಂಪಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಡೆಯಲು ಮಾರ್ಷಲ್‌ಗಳನ್ನು ನೇಮಕ ಮಾಡಲಿದೆ. ಕಸ ಹಾಕುವ ಜನರಿಗೆ ಸ್ಥಳದಲ್ಲಿಯೇ ದಂಡವನ್ನು ಹಾಕಲು ಮಾರ್ಷಲ್‌ಗಳಿಗೆ ಅಧಿಕಾರ ನೀಡಲಾಗುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೊದಲ ಹಂತದಲ್ಲಿ 120 ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಮಾರ್ಷಲ್‌ಗಳಿಗೆ ತರಬೇತಿ ನೀಡಲಾಗುತ್ತಿದ್ದು, ಸೆಪ್ಟೆಂಬರ್ ಮೊದಲವಾರದಿಂದ ಕೆಲಸ ಆರಂಭಿಸಲಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಮಂಗಳೂರಿನ ನಾಗರಿಕರ ಮಹತ್ವದ ಮನವಿಜಿಲ್ಲಾಧಿಕಾರಿಗಳಿಗೆ ಮಂಗಳೂರಿನ ನಾಗರಿಕರ ಮಹತ್ವದ ಮನವಿ

ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಿಭಾಗದಲ್ಲಿ ಮೊದಲು ಮಾರ್ಷಲ್‌ಗಳನ್ನು ನೇಮಕ ಮಾಡಲಾಗುತ್ತದೆ. 240 ಮಾರ್ಷಲ್‌ಗಳನ್ನು ನೇಮಕ ಮಾಡಲು ಒಪ್ಪಿಗೆ ನೀಡುವಂತೆ ಬಿಬಿಎಂಪಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದೆ.

ಮತ್ತೆ ಕಸದ ಸಮಸ್ಯೆ ಉಲ್ಬಣ, ಬಿಬಿಎಂಪಿಗೆ ಎಎಪಿ ಎಚ್ಚರಿಕೆಮತ್ತೆ ಕಸದ ಸಮಸ್ಯೆ ಉಲ್ಬಣ, ಬಿಬಿಎಂಪಿಗೆ ಎಎಪಿ ಎಚ್ಚರಿಕೆ

Garbage issue : BBMP appoints marshals

ಮೊದಲ ಹಂತದಲ್ಲಿ ಬಿಬಿಎಂಪಿ 120 ಮಾರ್ಷಲ್‌ಗಳನ್ನು ನೇಮಕ ಮಾಡಲಿದೆ. ಪಾಲಿಕೆ ಮಾರ್ಷಲ್‌ಗಳ ವೇತನಕ್ಕಾಗಿಯೇ 8.56 ಕೋಟಿ ರೂ.ಗಳನ್ನು ವಾರ್ಷಿಕವಾಗಿ ವೆಚ್ಚ ಮಾಡಲಾಗಿದೆ.

ಬೆಂಗಳೂರಿನ ಕಸ ಬೆಳಗಾವಿಗೆ, ಅಚ್ಚರಿಯಾದರೂ ಸತ್ಯಬೆಂಗಳೂರಿನ ಕಸ ಬೆಳಗಾವಿಗೆ, ಅಚ್ಚರಿಯಾದರೂ ಸತ್ಯ

ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವುದನ್ನು ತಡೆಯುವುದು ಹೇಗೆ? ಎಂದು ಬಿಬಿಎಂಪಿ ಮಾರ್ಷಲ್‌ಗಳಿಗೆ ತರಬೇತಿ ನೀಡುತ್ತಿದೆ. ಜಿಪಿಎಸ್ ವ್ಯವಸ್ಥೆ ಹೊಂದಿರುವ ಸಾಧನವನ್ನು ಅವರಿಗೆ ನೀಡಲಾಗುತ್ತಿದ್ದು, ಸ್ಥಳದಲ್ಲಿಯೇ ದಂಡ ವಿಧಿಸಲು ಅವಕಾಶ ನೀಡಲಾಗಿದೆ.

ಸೆಪ್ಟೆಂಬರ್ 1ರಿಂದ ಬೆಂಗಳೂರು ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವಂತಿಲ್ಲ. ಪೌರ ಕಾರ್ಮಿಕರಿಗೆ ಸಹ ಹಸಿ ಮತ್ತು ಒಣ ಕಸವನ್ನು ವಿಂಗಡನೆ ಮಾಡಿ ನೀಡಬೇಕಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮಾರ್ಷಲ್‌ಗಳನ್ನು ನೇಮಕ ಮಾಡಲಾಗುತ್ತಿದೆ.

English summary
Bruhat Bengaluru Mahanagara Palike (BBMP) appointed retired army personnel as marshals to check throwing garbage at public place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X