ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಲೆಂದರಲ್ಲಿ ಕಸ ಬಿಸಾಡಿ ಬೆಂಗಳೂರಿಗರು ಕಟ್ಟಿದ್ದು 3 ಲಕ್ಷ ದಂಡ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15 : ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರಿಂದ ಬಿಬಿಎಂಪಿ 12 ದಿನದಲ್ಲಿ 3.70 ಲಕ್ಷ ರೂ. ದಂಡವನ್ನು ಸಂಗ್ರಹ ಮಾಡಿದೆ. ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಯಲು ಪಾಲಿಕೆ ಮಾರ್ಷಲ್‌ಗಳನ್ನು ನೇಮಕ ಮಾಡಿದೆ.

ಸೆಪ್ಟೆಂಬರ್ 1ರಿಂದ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವುದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿಷೇಧಿಸಿದೆ. ಕಸ ಹಾಕುವವರಿಗೆ ದಂಡ ವಿಧಿಸಲು 198 ವಾರ್ಡ್‌ಗಳ ಪೈಕಿ 174 ವಾರ್ಡ್‌ಗಳಲ್ಲಿ ಮಾರ್ಷಲ್‌ಗಳನ್ನು ನೇಮಿಸಿದೆ.

ಕಸ ಹಾಕುವುದನ್ನು ತಡೆಯಲು ಬಿಬಿಎಂಪಿಯಿಂದ ಮಾರ್ಷಲ್‌ಗಳ ನೇಮಕಕಸ ಹಾಕುವುದನ್ನು ತಡೆಯಲು ಬಿಬಿಎಂಪಿಯಿಂದ ಮಾರ್ಷಲ್‌ಗಳ ನೇಮಕ

ಮೊದಲ ಹಂತದಲ್ಲಿ 174 ವಾರ್ಡ್‌ನಲ್ಲಿ ಮಾರ್ಷಲ್‌ಗಳನ್ನು ನೇಮಕ ಮಾಡಿರುವ ಬಿಬಿಎಂಪಿ 12 ದಿನದಲ್ಲಿ 3.70 ಲಕ್ಷ ರೂ. ದಂಡವನ್ನು ಸಂಗ್ರಹ ಮಾಡಿದೆ. 2ನೇ ಹಂತದಲ್ಲಿ ಎಲ್ಲಾ 198 ವಾರ್ಡ್‌ಗಳಲ್ಲಿಯೂ ಮಾರ್ಷಲ್ ನೇಮಕ ಮಾಡಲಾಗುತ್ತದೆ ಎಂದು ಪಾಲಿಕೆ ಹೇಳಿದೆ.

ಬಿಬಿಎಂಪಿ ಮಾನ ಹರಾಜು ಹಾಕಿದ ಬಾದಲ್ ನಂಜುಂಡಸ್ವಾಮಿ ಯಾರು?ಬಿಬಿಎಂಪಿ ಮಾನ ಹರಾಜು ಹಾಕಿದ ಬಾದಲ್ ನಂಜುಂಡಸ್ವಾಮಿ ಯಾರು?

Garbage Dumping In Public Place BBMP Collected 3 Lakh Fine

2018ರ ಅಕ್ಟೋಬರ್‌ನಲ್ಲಿ ಕರ್ನಾಟಕ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವುದನ್ನು ತಡೆಯಲು 240 ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲು ಒಪ್ಪಿಗೆ ನೀಡಿತ್ತು. ಮಾರ್ಷಲ್‌ಗಳ ವೇತನ, ಸಮವಸ್ತ್ರಕ್ಕಾಗಿ ಬಿಬಿಎಂಪಿ ಪ್ರತಿವರ್ಷ 8.46 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ.

ಬಿಬಿಎಂಪಿ ವಿಭಜನೆ: ನಾಲ್ವರು ವಿಶೇಷ ಆಯುಕ್ತರ ನೇಮಕಬಿಬಿಎಂಪಿ ವಿಭಜನೆ: ನಾಲ್ವರು ವಿಶೇಷ ಆಯುಕ್ತರ ನೇಮಕ

ಸಿಂಗಲ್ ಯೂಸ್ ಪ್ಲಾಸ್ಟಿಕ್ ನಿಷೇಧ ಮಾಡಿರುವ ಬಿಬಿಎಂಪಿ, ಹಸಿ ಮತ್ತು ಒಣ ಕಸವನ್ನು ವಿಂಗಡನೆ ಮಾಡಿಕೊಡಿ ಎಂದು ಜನರಿಗೆ ಸೂಚನೆ ನೀಡಿದೆ. ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ ಹೆಚ್ಚು ಕಸ ಸಂಗ್ರಹಣೆ ಆಗುವಲ್ಲಿ ಹಸಿ ಕಸ ಸಂಸ್ಕರಣೆ ಮಾಡಲು ಕಾಂಪೋಸ್ಟ್ ಘಟಕ ನಿರ್ಮಾಣ ಮಾಡಲಾಗುತ್ತಿದೆ.

English summary
From September1 to 12, 2019 Bruhat Bengaluru Mahanagara Palike (BBMP) collected has Rs 3.70 lakh fines from people who dumping garbage in public places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X